ಭಾನುವಾರ, ಜನವರಿ 19, 2020
29 °C

ಸ್ಕ್ವಾಷ್: ದೀಪಿಕಾ ಪಳ್ಳಿಕಲ್ ರನ್ನರ್ ಅಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೃತ್ತಿ ಜೀವನದ ಆರನೇ ಡಬ್ಲ್ಯುಐಎಸ್‌ಪಿಎ ಸ್ಕ್ವಾಷ್ ಪ್ರಶಸ್ತಿ ಗೆಲ್ಲಬೇಕೆಂಬ ಭಾರತದ ದೀಪಿಕಾ ಪಳ್ಳಿಕಲ್ ಕನಸ ಭಗ್ನಗೊಂಡಿತು. ನ್ಯೂಯಾರ್ಕ್‌ನಲ್ಲಿ ನಡೆದ `ಟೂರ್ನಮೆಂಟ್ ಆಫ್ ಚಾಂಪಿಯನ್ಸ್~ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿದ ಅವರು `ರನ್ನರ್ ಅಪ್~ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಭಾರತದ ಯುವ ಸ್ಪರ್ಧಿಯನ್ನು 11-4, 11-3, 11-3 ರಲ್ಲಿ ಮಣಿಸಿದ ಹಾಲೆಂಡ್‌ನ ನತಾಲಿ ಗ್ರಿನ್ಹಾಮ್ ಚಾಂಪಿಯನ್ ಆದರು. ಏಳನೇ ಶ್ರೇಯಾಂಕದ ಪಡೆದಿದ್ದ ದೀಪಿಕಾ ಇಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿದ್ದರು.ಆದರೆ ಫೈನಲ್‌ನಲ್ಲಿ ಅನುಭವಿ ನತಾಲಿ ಅವರಿಗೆ ಸರಿಸಾಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಅಲ್ಪ ಮಟ್ಟಿಗೆ ಪ್ರತಿರೋಧ ತೋರಿದ್ದು ಭಾರತದ ಆಟಗಾರ್ತಿಯ ಸಾಧನೆ.

ಪ್ರತಿಕ್ರಿಯಿಸಿ (+)