ಶುಕ್ರವಾರ, ಜೂನ್ 25, 2021
21 °C

ಸ್ಟೆಮ್‌ ಸೆಲ್‌ ಸಂರಕ್ಷಣಾ ಕೇಂದ್ರ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬೈ ಮೂಲದ ರೀಲ್ಯಾಬ್ಸ್‌ ಸಂಸ್ಥೆ ‘ಆಕರ ಕೋಶ (ಸ್ಟೆಮ್‌ ಸೆಲ್‌) ಸಂರಕ್ಷಣೆ, ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರ’ವನ್ನು ಶೀಘ್ರದಲ್ಲೇ ನಗರದಲ್ಲಿ  ಪ್ರಾರಂಭಿಸಲಿದೆ.



‘ನಗರದಲ್ಲಿ ಒಂದೇ ಸೂರಿನಡಿ ಆಕರ ಕೋಶ ಸಂರಕ್ಷಣೆ, ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುವ ಸಲು­ವಾಗಿ 50 ಕೋಟಿ ಹೂಡಿಕೆ ಮಾಡಲಾಗಿದೆ. ನಗರದ ಹೊರ­ವಲಯದಲ್ಲಿ ಕೆಲವೇ ತಿಂಗಳಿನಲ್ಲಿ ಈ ಕೇಂದ್ರ ಕಾರ್ಯಾ­ರಂಭ ಮಾಡಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ರೋಹಿತ್‌ ಕುಲಕರ್ಣಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.



‘20 ಕೋಟಿ ವೆಚ್ಚದಲ್ಲಿ ಆಕರ ಕೋಶ ಪ್ರಯೋಗಾಲಯವನ್ನು ನಿರ್ಮಿಸುವ ಯೋಜನೆ ಇದ್ದು, ಪ್ರಯೋಗಾಲಯವು  2 ಲಕ್ಷ ಜನರ ಆಕರ ಕೋಶ ಸಂಗ್ರಹಿಸಿ­ಡುವ ಸಾಮರ್ಥ್ಯ ಹೊಂದಿರುತ್ತದೆ. ಅದರ ಸಮಿಪದಲ್ಲೇ 20 ಕೋಟಿ ವೆಚ್ಚದಲ್ಲಿ ಆಕರ ಕೋಶ ಚಿಕಿತ್ಸಾ ಆಸ್ಪತ್ರೆಯನ್ನು ಸ್ಥಾಪಿಸ­ಲಾಗುವುದು. ಜತೆಗೆ 10 ಕೋಟಿ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲಾಗುವುದು’ ಎಂದರು.



‘ಆಕರ ಕೋಶ ಸಂಗ್ರಹಿಸಲು 21 ವರ್ಷಕ್ಕೆ 55–60 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ಸಾರ್ವಜನಿಕರು ಒಂದೇ ಬಾರಿ ಬೇಕಾದರೂ ಹಣವನ್ನು ಪಾವತಿಸಬಹುದು. ಇಲ್ಲವಾದಲ್ಲಿ ಮೊದಲು 20 ಸಾವಿರ ಹಣ ನೀಡಿ, ನಂತರ ಪ್ರತಿ ತಿಂಗಳು ಕಂತಿನ ಮೂಲಕ 3 ಸಾವಿರ ಕಟ್ಟಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 88849–55611.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.