ನೆಲಮಂಗಲ: ನೆಲಮಂಗಲದಿಂದ ಬೆಂಗಳೂರಿಗೆ ಮೇಲು ಸೇತುವೆ ಹೆದ್ದಾರಿಯಲ್ಲಿ (ಎಲಿವೇಟೆಡ್ ಹೈವೇ) ಕೆಲವೇ ನಿಮಿಷಗಳಲ್ಲಿ ಹೊರಗಿನವರು ಹೋಗಬಹುದಾಗಿದ್ದರೂ, ಸ್ಥಳೀಯರಿಗೆ ಮಾತ್ರ ಇದು ಶಾಪವಾಗಿದೆ. ಮೇಲು ಹೆದ್ದಾರಿ ನಿರ್ಮಾಣಕ್ಕೆ ಭೂಮಿಯನ್ನು, ಮನೆ- ಮಠ ಕಳೆದುಕೊಂಡವರು ಸ್ಥಳೀಯರು. ಆದರೆ ಇದರ ಫಲ ಮಾತ್ರ ಅವರಿಗೆ ಇಲ್ಲವಾಗಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಈ ಮೇಲು ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಕೆಳಗೆ ಸರ್ವೀಸ್ ರಸ್ತೆಯಲ್ಲಿ ಕಾದು ನಿಂತ ಸ್ಥಳೀಯರಿಗೆ ಬಸ್ಗಳು ‘ಮರೀಚಿಕೆ’ಯಾಗಿವೆ. ಈ ಕಾರಣದಿಂದ ಪ್ರಯಾಣಿಕ ಅನಿವಾರ್ಯವಾಗಿ ಖಾಸಗಿ ಬಸ್ಗಳನ್ನು ಅವಲಂಬಿಸಬೇಕಿದೆ.

ಈ ಮೇಲು ಹೆದ್ದಾರಿ ನಿರ್ಮಾಣಕ್ಕೆ ಪೂರ್ವದಲ್ಲಿ ಬೆಂಗಳೂರಿನಿಂದ ಕುಣಿಗಲ್, ತುಮಕೂರು ಕಡೆಗೆ ಹೋಗುತ್ತಿದ್ದ ಮತ್ತು ಆ ಕಡೆಯಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ನೆಲಮಂಗಲದಲ್ಲಿ ಕಡ್ಡಾಯವಾಗಿ ನಿಲುಗಡೆ ನೀಡುತ್ತಿದ್ದವು.

ಇದಕ್ಕಾಗಿ ಇಲ್ಲಿ ಎಂಟ್ರಿ ಪಾಯಿಂಟನ್ನು ಪ್ರಾರಂಭಿಸಿ ಮೂರು ಪಾಳಿಯಲ್ಲೂ ಸಿಬ್ಬಂದಿಯನ್ನು ನಿಯೋಜಿಸಿ ಬಸ್ಸುಗಳ ನಿಲುಗಡೆ ಬಗ್ಗೆ ನಿಗಾ ಇರಿಸಲಾಗಿತ್ತು. ಹಲವು ಮುಷ್ಕರ ಹೋರಾಟಗಳ ಫಲವಾಗಿ ಈ ಸೌಲಭ್ಯ ಪಡೆಯಲಾಗಿತ್ತು. ಅದರೆ ಈ ಮೇಲು ಹೆದ್ದಾರಿ ನಿರ್ಮಾಣವಾದ ಮೇಲೆ ಸರ್ಕಾರಿ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ.

‘ಈ ಸಮಸ್ಯೆಗೆ ಅಧಿಕಾರಿಗಳು ಈಗಾಗಲೇ ಪರಿಹಾರ ಸೂಚಿಸಬೇಕಿತ್ತು. ಎಲ್ಲದಕ್ಕೂ ಸಾರ್ವಜನಿಕರು ಪ್ರತಿಭಟನೆ ನಡೆಸಿಯೇ ಪರಿಹಾರ ಕಂಡುಕೊಳ್ಳಬೇಕೇ?’ ಎಂದು ಬ್ಯಾಂಕ್ ಮ್ಯಾನೇಜರ್ ಆಗಿರುವ ನೆಲಮಂಗಲ ನಿವಾಸಿ ಅರುಣ್ಕುಮಾರ್ ಪ್ರಶ್ನಿಸುತ್ತಾರೆ.

ತುಮಕೂರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೇಲೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಪ್ಪಿಸಿಕೊಳ್ಳಲು ಸಾವಿರಾರು ವಿದ್ಯಾರ್ಥಿಗಳು ತುಮಕೂರಿನತ್ತ ಮುಖ ಮಾಡಿದ್ದಾರೆ. ಸಾವಿರಾರು ನೌಕರರು, ಸಾರ್ವಜನಿಕರು ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ.

‘ಮಾಸಿಕ/ ವಿದ್ಯಾರ್ಥಿ ಪಾಸು ಹೊಂದಿರುವವರನ್ನು ಕಂಡರೆ ಸರ್ಕಾರಿ ಬಸ್ನ ಚಾಲಕ, ನಿರ್ವಾಹಕರಿಗೆ ತಾತ್ಸಾರ.ಪಾಸು ಪಡೆದ ಎಷ್ಟೋ ವಿದ್ಯಾರ್ಥಿಗಳು ಖಾಸಗಿ ಬಸ್ಸುಗಳಲ್ಲಿ ಹಣ ಕೊಟ್ಟು ಸಂಚರಿಸಬೇಕಾಗಿದೆ ಮತ್ತು ನಿಗದಿತ ಸಮಯಕ್ಕೆ ತರಗತಿಗಳಿಗೆ ಹಾಜರಾಗಲಾಗುತ್ತಿಲ್ಲ’ ಎಂದು ತುಮಕೂರಿನ ವಿದ್ಯಾವಾಹಿನಿ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಮಂಜುನಾಥ್’ ನೊಂದು ನುಡಿಯುತ್ತಾರೆ.

‘ದೂರದ ಊರುಗಳಿಂದ ಬೆಂಗಳೂರಿಗೆ ಬಂದು- ಹೋಗುವವರಿಗೆ ನೆಲಮಂಗಲ ‘ಸೇತುವೆ’ಯಾಗಿದೆ. ಆದರೆ ಇಲ್ಲಿನ ಜನತೆಗೆ ಈ ಮೇಲು ಸೇತುವೆ ‘ದೀಪದ ಕೆಳಗೆ ಕತ್ತಲು’ ಎಂಬಂತೆ ಆಗಿದೆ’ ಎಂದು ತುಮಕೂರಿನ ಸಿದ್ದಗಂಗಾ ಕಾಲೇಜಿನ ಉಪನ್ಯಾಸಕರಾದ ನೆಲಮಂಗಲ ನಿವಾಸಿ ಚಂದ್ರಶೇಖರ್ ವಿಷಾದಿಸುತ್ತಾರೆ.

ವೃದ್ಧರು, ಮಹಿಳೆಯರು, ಮಕ್ಕಳು ಮೇಲು ಸೇತುವೆಯ ತಡೆಗೋಡೆಯನ್ನು ದಾಟುವುದು ಕಷ್ಟಕರ. ನಿಗದಿತ ತಂಗುದಾಣ ನಿರ್ಮಿಸಿ ತಡೆಗೋಡೆಯನ್ನು ದಾಟಲು ವ್ಯವಸ್ಥೆ ಕಲ್ಪಿಸಬೇಕು, ಮೊದಲಿನಂತೆ ಎಂಟ್ರಿ ಪಾಯಿಂಟ್ ಪ್ರಾರಂಭಿಸುವುದರಿಂದ ಮಾತ್ರ ಇದು ಸಾಧ್ಯ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.