ಬೆಂಗಳೂರು: ನಾಯಂಡಹಳ್ಳಿ ಸಮೀಪದ ವಿನಾಯಕಲೇಔಟ್ನಲ್ಲಿ ಸತೀಶ್ (32) ಎಂಬ ಆಟೊ ಚಾಲಕನನ್ನು ಸ್ನೇಹಿತರೇ ಸೋಮವಾರ ರಾತ್ರಿ ಕೊಲೆ ಮಾಡಿದ್ದು, ಬಿಟಿಎಂ ಲೇಔಟ್ನಲ್ಲಿ ಪಪ್ಪುಕುಮಾರ್ ಚೌಪಲೆ (21) ಎಂಬುವರ ಕೊಲೆಯಾಗಿದೆ.

ಗೋರಿಪಾಳ್ಯದ ಸತೀಶ್, ಮದುವೆಯಾದ ನಂತರ ಪತ್ನಿ ಮತ್ತು ಮಕ್ಕಳೊಂದಿಗೆ ನಾಯಂಡಹಳ್ಳಿಯಲ್ಲಿನ ಅತ್ತೆಯ ಮನೆಯಲ್ಲಿ ವಾಸವಾಗಿದ್ದ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದ್ದಾರೆ.

ಮದ್ಯವ್ಯಸನಿಯಾಗಿದ್ದ ಆತ ಆಗಾಗ್ಗೆ ಗೋರಿಪಾಳ್ಯಕ್ಕೆ ಬಂದು ಮದ್ಯ ಕೊಡಿಸುವಂತೆ ಸ್ನೇಹಿತರಿಗೆ ಬೆದರಿಕೆ ಹಾಕುತ್ತಿದ್ದ. ಅದೇ ರೀತಿ ರಾತ್ರಿ ಗೋರಿಪಾಳ್ಯಕ್ಕೆ ಬಂದಿದ್ದ ಆತ ನಾಗೇಂದ್ರಸ್ವಾಮಿ, ಶ್ರೀನಿವಾಸ ಮತ್ತು ಯೋಗಾನಂದ ಎಂಬ ಸ್ನೇಹಿತರಿಗೆ ಮದ್ಯ ಕೊಡಿಸುವಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಕೋಪಗೊಂಡ ಆ ಮೂರು ಮಂದಿ ಆತನನ್ನು ಆಟೊದಲ್ಲಿ ನಾಯಂಡಹಳ್ಳಿಯ ಬಾರ್ ಒಂದಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿದ್ದಾರೆ. ನಂತರ ವಿನಾಯಕಲೇಔಟ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

`ಸತೀಶ್ನ ಕೊಲೆ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂಬಂತೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಆಟೊದಲ್ಲೇ ಮಂಗಳವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಸ್ಥಳ ಪರಿಶೀಲನೆ ನಡೆಸುತ್ತಿದ್ದ ಸಿಬ್ಬಂದಿ, ಆ ಆಟೊದ ಒಳ ಭಾಗದಲ್ಲಿ ರಕ್ತದ ಕಲೆಗಳು ಇದ್ದದ್ದನ್ನು ಗಮನಿಸಿ ನಾಗೇಂದ್ರಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ. ನಂತರ ಆ ಮೂರೂ ಮಂದಿಯನ್ನು ಬಂಧಿಸಲಾಯಿತು. ನಾಗೇಂದ್ರಸ್ವಾಮಿ ಮತ್ತು ಶ್ರೀನಿವಾಸ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಾಗಿದ್ದು, ಅವರ ವಿರುದ್ಧ ಬ್ಯಾಟರಾಯನಪುರ ಹಾಗೂ ಜಗಜೀವನರಾಂನಗರ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ' ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣ: ಬಿಹಾರ ಮೂಲದ ಪಪ್ಪುಕುಮಾರ್, ಬಿಟಿಎಂ ಲೇಔಟ್ ಒಂದನೇ ಹಂತದ ಆರನೇ ಅಡ್ಡರಸ್ತೆಯಲ್ಲಿರುವ ಬಾಲಾಜಿ ಪೇಯಿಂಗ್ ಗೆಸ್ಟ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.

ಅಲ್ಲಿಯೇ ಸೆಕ್ಯುರಿಟಿ ಗಾರ್ಡ್ ಆಗಿದ್ದ ಬಿಹಾರ ಮೂಲದ ಮಹೇಶ್ ಎಂಬಾತ ಪಪ್ಪುಕುಮಾರ್ ಜತೆ ಪೇಯಿಂಗ್ ಗೆಸ್ಟ್ನ ನೆಲ ಅಂತಸ್ತಿನ ಕೊಠಡಿಯಲ್ಲಿ ವಾಸವಾಗಿದ್ದ. ಅವರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅಂತೆಯೇ ರಾತ್ರಿಯೂ ಜಗಳವಾಗಿ ಮಹೇಶ್, ಪಪ್ಪುಕುಮಾರ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೇಯಿಂಗ್ ಗೆಸ್ಟ್ನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುವ ಸುಬ್ಬಮ್ಮ ಎಂಬುವರು ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಬಂದಾಗ ಪಪ್ಪುಕುಮಾರ್ ಕೊಲೆಯಾಗಿರುವುದು ಗೊತ್ತಾಗಿದೆ. ಘಟನೆ ನಂತರ ಆರೋಪಿ ಮಹೇಶ್, ಬಿಹಾರಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಬಂಧಿಸುವ ಉದ್ದೇಶಕ್ಕಾಗಿ ಸಿಬ್ಬಂದಿಯನ್ನು ಬಿಹಾರಕ್ಕೆ ಕಳುಹಿಸಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ನಂತರ ಕೊಲೆಗೆ ಕಾರಣ ಏನೆಂದು ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಡಿವಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.