ಬೆಂಗಳೂರು: ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸ್ಮಾರಕಗಳ ಅತಿಕ್ರಮಣ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿದ ಸಿಎಜಿಯ ಎರಡನೇ ವರದಿಯಲ್ಲಿ, ಸ್ಮಾರಕಗಳ ರಕ್ಷಣೆಗೆ ಸರ್ಕಾರ ಒಂದು ಸಂಘಟಿತ ಕಾರ್ಯತಂತ್ರ ಬಳಸುತ್ತಿಲ್ಲ ಎಂಬ ಆಕ್ಷೇಪವಿದೆ. ನಿರ್ಧಾರವನ್ನು ತೆಗೆದುಕೊಳ್ಳುವುದು, ಅನುದಾನ ಹಂಚಿಕೆ ಮತ್ತು ಸಂರಕ್ಷಣಾ ವಿಧಾನದಲ್ಲೂ ಲೋಪಗಳಿವೆ ಎಂಬ ಅಭಿಪ್ರಾಯವಿದೆ. ದೇಶದಲ್ಲೇ ಅತ್ಯಧಿಕ ಸಂರಕ್ಷಿತ ಸ್ಮಾರಕಗಳಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನವಿದೆ. ಇಲ್ಲಿ 518 ಸ್ಮಾರಕಗಳನ್ನು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸುತ್ತಿದ್ದರೆ, 763 ಸ್ಮಾರಕಗಳು ರಾಜ್ಯ ಸರ್ಕಾರದ ರಕ್ಷಣೆಯಲ್ಲಿವೆ. ಮೈಸೂರಿನ ಪ್ರಾಚ್ಯ ವಸ್ತುಗಳು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಬೆಂಗಳೂರಿನ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಆಯುಕ್ತರು 763 ಸ್ಮಾರಕಗಳ ರಕ್ಷಣೆಯ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ 763 ಸ್ಮಾರಕಗಳ ಪೈಕಿ 31ಕ್ಕೆ ಮಾತ್ರ ರಕ್ಷಣಾ ಬೇಲಿ ಅಳವಡಿಸಲಾಗಿದೆ. ಸಂಸ್ಥೆಯ ಅಧಿಕಾರಿಗಳು ತಪಾಸಣೆ ನಡೆಸಿರುವ 47 ಸ್ಮಾರಕಗಳ ಪೈಕಿ 19 ಕಡೆ ಒತ್ತುವರಿ ನಡೆದಿದೆ. ಉಳಿದ ಹಲವು ಸ್ಮಾರಕಗಳ ಆವರಣದಲ್ಲೇ ಕಟ್ಟಡಗಳು ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ನಡೆದಿವೆ ಎಂಬ ಅಂಶ ವರದಿಯಲ್ಲಿದೆ.

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ರಾಮೇಶ್ವರ ದೇವಸ್ಥಾನದ ಆವರಣದಲ್ಲೇ ಅಂಗನವಾಡಿ ಕೇಂದ್ರ ಸ್ಥಾಪಿಸಿರುವುದಕ್ಕೆ ಸಿಎಜಿ ಆಕ್ಷೇಪ ವ್ಯಕ್ತಪಡಿಸಿದೆ. ಶಿಕಾರಿಪುರದ ಜೈನ ಬಸದಿಯ ಎದುರು ಬೃಹತ್ತಾದ ಸಮುದಾಯ ನೀರಿನ ಟ್ಯಾಂಕ್ ನಿರ್ಮಿಸಿರುವುದು, ಗಂಗಾವತಿ ತಾಲ್ಲೂಕಿನ ಪ್ರಸಿದ್ಧ ರಂಗನಾಥ ದೇವಾಲಯದ ಆವರಣದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಕೋಟೆ ಪ್ರದೇಶದ ತಪಾಸಣೆ ನಡೆಸಿದ್ದು, ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಕೋಟೆಯು ಶಿಥಿಲಗೊಳ್ಳುವ ಸ್ಥಿತಿಯಲ್ಲಿದೆ ಎಂಬ ಉಲ್ಲೇಖವೂ ಇದೆ.

ಪರಿಶೀಲನೆಯೇ ಇಲ್ಲ: ಮೈಸೂರಿನ ಅರಮನೆಯ ಭದ್ರತಾ ಕೋಣೆಯಲ್ಲಿ ಇರಿಸಿರುವ ಚಿನ್ನ, ಬೆಳ್ಳಿ, ತಾಮ್ರ, ಕಂಚು ಮತ್ತಿತರ ಲೋಹಗಳ ಬೆಲೆಬಾಳುವ ವಸ್ತುಗಳನ್ನು ಕಾಲಕಾಲಕ್ಕೆ ಭೌತಿಕ ಪರಿಶೀಲನೆ ನಡೆಸುತ್ತಿಲ್ಲ. ದಾಖಲೆಗಳ ಪ್ರಕಾರ 362 ವಿವಿಧ ಲೋಹಗಳ ವಸ್ತುಗಳು ಅಲ್ಲಿವೆ. ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಈ ಕುರಿತು ಭೌತಿಕ ಪರಿಶೀಲನೆ ನಡೆಸಿಲ್ಲ. ಪರಿಶೀಲನೆಯ ಅವಧಿಯೂ ದಾಖಲೆಗಳಿಂದ ತಿಳಿದುಬರುತ್ತಿಲ್ಲ.

ಈ ವಸ್ತುಗಳ ಪರಿಶೀಲನಾ ಪಟ್ಟಿ ತಯಾರಿಸಲು ರಾಜ್ಯ ಸರ್ಕಾರ 2008ರಲ್ಲಿ ಸಮಿತಿಯೊಂದನ್ನು ರಚಿಸಿದೆ. ಅದು ಈವರೆಗೂ ಕಾರ್ಯಾರಂಭ ಮಾಡಿಲ್ಲ. ಭೌತಿಕ ಪರಿಶೀಲನೆಯಲ್ಲಿನ ವಿಳಂಬವು ಭಾರಿ ನಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸಿಎಜಿ ಎಚ್ಚರಿಸಿದೆ.

ಅನುದಾನ ಹಂಚಿಕೆಯಲ್ಲಿ ಲೋಪ: ಸ್ಮಾರಕಗಳ ಸಂರಕ್ಷಣೆಗೆ ನೀಡುತ್ತಿರುವ ಅನುದಾನ ಹಂಚಿಕೆಯಲ್ಲೂ ವಿಭಾಗೀಯ ಅಸಮತೋಲನ ಇರುವುದನ್ನು ಸಿಎಜಿ ಪತ್ತೆಮಾಡಿದೆ. 2006ರಿಂದ 2011ರ ಅವಧಿಯಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗಗಳ 208 ಸ್ಮಾರಕಗಳ ಸಂರಕ್ಷಣೆಗೆ 21.68 ಕೋಟಿ ರೂಪಾಯಿ ನೀಡಲಾಗಿದೆ. ಇದೇ ಅವಧಿಯಲ್ಲಿ ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗಗಳ 555 ಸ್ಮಾರಕಗಳ ಸಂರಕ್ಷಣೆಗೆ ರೂ 11.2 ಕೋಟಿ ಮಾತ್ರ ನೀಡಲಾಗಿತ್ತು ಎಂಬುದು ವರದಿಯಲ್ಲಿದೆ.

1998ರ ಮಾರ್ಚ್ನಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ, ಈವರೆಗೂ ಸ್ಮಾರಕದ ಸುತ್ತಮುತ್ತಲಿನ ಭೂಮಿಯನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿಲ್ಲ. ಸಂರಕ್ಷಣೆಗೆ ಸಿದ್ಧಪಡಿಸಿರುವ ಯೋಜನೆಗಳು ತಾತ್ಕಾಲಿಕ ಸ್ವರೂಪ ಹೊಂದಿದ್ದು, ಮೌಲ್ಯಮಾಪನ ಮತ್ತು ಸ್ಮಾರಕಗಳ ವಾಸ್ತವಿಕತೆ ಆಧಾರದಲ್ಲಿ ಸಿದ್ಧವಾಗಿಲ್ಲ ಎಂಬ ಅಭಿಪ್ರಾಯವಿದೆ. `ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಸರಿಯಾದ ಪ್ರಯತ್ನವೇ ನಡೆದಿಲ್ಲ. ಸಂಸ್ಥೆ ತಪಾಸಣೆ ನಡೆಸಿದ ಬಹುತೇಕ ಸ್ಮಾರಕಗಳಲ್ಲಿ ಮಾಹಿತಿ ಫಲಕಗಳೂ ಇರಲಿಲ್ಲ~ ಎಂದು ಸಿಎಜಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.