ಶನಿವಾರ, ಫೆಬ್ರವರಿ 27, 2021
23 °C
ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಜನ್ಮದಿನ ಇಂದು

ಸ್ಮಾರಕವಾಗುವುದೇ ಕಾರ್ಯಪ್ಪ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮಾರಕವಾಗುವುದೇ ಕಾರ್ಯಪ್ಪ ಮನೆ

ಶನಿವಾರಸಂತೆ: ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ ಅವರ ಜನ್ಮದಿನ ಜ. 28ರಂದು. ಅವರು ಜನಿಸಿದ ಮನೆ ಇಂದು ಸಾರ್ವಜನಿಕ ಗ್ರಂಥಾಲಯವಾಗಿದೆ. ಅದಕ್ಕೂ ಮೊದಲು ಅದು ನಾಡಕಚೇರಿಯಾಗಿತ್ತು. ಕಟ್ಟಡದ ಮುಂಭಾಗದಲ್ಲಿ ತೂಗು ಹಾಕಿರುವ ‘ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಗ್ರಂಥಾಲಯ’ ಫಲಕ ಮಾತ್ರ ಆ ಕಟ್ಟಡ ಕಾರ್ಯಪ್ಪ ಜನಿಸಿದ ಮನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಗ್ರಂಥಾ ಲಯಕ್ಕೆ ಕಾರ್ಯಪ್ಪ ಅವರ ಭಾವಚಿತ್ರವನ್ನು ಕೆಲ ವರ್ಷಗಳ ಹಿಂದೆ ಒದಗಿಸಲಾಗಿದೆ.

ಫೀಲ್ಡ್ ಮಾರ್ಷಲ್ ಆದ ಸಂದರ್ಭದಲ್ಲಿ ಅವರನ್ನು ಶನಿವಾರ ಸಂತೆಗೆ ಆಹ್ವಾನಿಸಿ ಇಲ್ಲಿನ ಭಾರತಿ ವಿದ್ಯಾಸಂಸ್ಥೆಯಲ್ಲಿ ಸನ್ಮಾನಿಸಲಾಗಿತ್ತು. ತೆರೆದ ಜೀಪಿನಲ್ಲಿ ಮೆರವಣಿಗೆ ಹೋಗುವಾಗ ತಾವು ಜನಿಸಿದ ಮನೆಯನ್ನು ಹರ್ಷ ವ್ಯಕ್ತಪಡಿಸಿದ್ದರು. ಕಾರ್ಯಪ್ಪ ಅವರು ಶನಿವಾರಸಂತೆಯಲ್ಲಿ 1899ರ ಜನವರಿ 28ರಂದು ಕಂದಾಯ ಕಚೇರಿಯಲ್ಲಿ ಪಾರುಪತ್ಯೆಗಾರರಾಗಿ ಸೇವೆಯಲ್ಲಿದ್ದ ಕೊಡಂದೇರ ಮಾದಪ್ಪ–ಕಾವೇರಮ್ಮ ದಂಪತಿಯ 2ನೇ ಪುತ್ರರಾಗಿ ಜನ್ಮಿಸಿದರು.

‘ಕಾರ್ಯಪ್ಪ ಅವರು ಜನಿಸಿದ ಮನೆ ಜೀರ್ಣೋದ್ಧಾರವಾಗಿ ಸ್ಮಾರಕ ಆಗಲೇಬೇಕು. ಜನಪ್ರತಿನಿಧಿಗಳು. ಆಧಿಕಾರಿಗಳು ಇತ್ತ ಗಮನ ಹರಿಸಿ ಕಟ್ಟಡವನ್ನು ಸುಂದರ ಸ್ಮಾರಕವಾಗಿಸಲು ಕ್ರಮ ಕೈಗೊಳ್ಳಬೇಕು.

ಮಹಾಯೋಧ ಕಾರ್ಯಪ್ಪ ಅವರ ಪ್ರತಿಮೆಯನ್ನು ಜನಿಸಿದ ಮನೆ ಮುಂಭಾಗದಲ್ಲಿ ನಿರ್ಮಿಸಿ ವೀಕ್ಷಣಾ ಸ್ಥಳವಾಗಿ ಪರಿವರ್ತಿಸಿದರೆ ಅದು ಆ ವೀರಸೇನಾನಿಗೆ ಸಲ್ಲಿಸುವ ನಮನ’ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.