ಭಾನುವಾರ, ಮೇ 16, 2021
22 °C
ರಾತ್ರಿಯವರೆಗೂ ಕಾಯಬೇಕಾದ ಅನಿವಾರ್ಯತೆ

ಸ್ಮಾರ್ಟ್ ಕಾರ್ಡ್ ಭಾವಚಿತ್ರದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಡಿಪು: ಇಲ್ಲಿಗೆ ಸಮೀಪದ ಪಜೀರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ನೋಂದಣಿ ಕಾರ್ಯಕ್ರಮವು ನಡೆಯುತ್ತಿದ್ದು, ಗ್ರಾಮಸ್ಥರು ನೋಂದಣಿಗಾಗಿ ಮಳೆ, ಬಿಸಿಲೆನ್ನದೆ ಬೆಳಿಗ್ಗೆ 7 ಗಂಟೆುಂದ ರಾತ್ರಿ 10 ಗಂಟೆಯವರೆಗೂ ಕಾಯಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಅವಶ್ಯಕತೆ ಇದ್ದಷ್ಟು ಸಿಬ್ಬಂದಿ, ಗಣಕಯಂತ್ರ ಎಲ್ಲವೂ ಇದ್ದರೂ ಈ ಸ್ಥಿತಿ ಇದೆ.ಕೇಂದ್ರ ಸರ್ಕಾರದ ಸ್ಮಾರ್ಟ್ ಕಾರ್ಡ್ ಯೋಜನೆಯಂತೆ ಪಜೀರು ಗ್ರಾಮದಲ್ಲಿ ಭಾವಚಿತ್ರ ತೆಗೆಯುವ ಕಾರ್ಯವು ಜೂನ್ 6ರಿಂದ ನಡೆಯುತ್ತಿದ್ದು ಜೂನ್ 11ರಂದು ಕೊನೆಯ ದಿನವಾಗಿದೆ. ಇಲ್ಲಿ 8 ಕಂಪ್ಯೂಟರ್‌ಗಳನ್ನು ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ.  ಪಂಚಾಯಿತಿಯ ನಾಲ್ವರು ಸಿಬ್ಬಂದಿ, ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರೂ  ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ.8 ವರ್ಷ ಮೇಲ್ಪಟ್ಟವರ ಭಾವಚಿತ್ರ ತೆಗೆಯಲಾಗುತ್ತಿದ್ದು, ಗ್ರಾಮದಲ್ಲಿ 6,500ರಷ್ಟು ಮಂದಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿದ್ದಾರೆ. ಒಂದು ಕಂಪ್ಯೂಟರ್‌ನಲ್ಲಿ 150 ಮಂದಿಯ ಭಾವಚಿತ್ರವನ್ನು ಪ್ರತಿದಿನ ತೆಗೆಯಲಾಗುತ್ತಿದ್ದು, ಇದರ ಆಧಾರದಲ್ಲಿ ಆರು ದಿನಗಳಲ್ಲಿ 7,200 ಮಂದಿಯ ಭಾವಚಿತ್ರ ತೆಗೆಯಬಹುದಾಗಿದೆ. ಈ ಬಗ್ಗೆ ಜೂನ್ 4 ಮತ್ತು 5ರಂದು ಮೈಕ್ ಮೂಲಕ ಗ್ರಾಮದಾದ್ಯಂತ ಪ್ರಚಾರ ನಡೆಸಲಾಗಿತ್ತು.ಪ್ರತಿದಿನ 1,200 ಮಂದಿಯ ಭಾವಚಿತ್ರ ತೆಗೆಯಬಹುದಾಗಿದ್ದು, ಬೆಳಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ. ಆರಂಭದ ಎರಡು ದಿನಗಳಲ್ಲಿ ಪ್ರಚಾರದ ಕೊರತೆಯಿಂದಾಗಿ ಜನರ ಪ್ರತಿಕ್ರಿಯೆ ನಿರಾಶದಾಯಕವಾಗಿತ್ತು. ನಂತರದ ದಿನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾವಚಿತ್ರ ತೆಗೆಯಲು ಆಗಮಿಸತೊಡಗಿದ್ದಾರೆ. ಸ್ಮಾರ್ಟ್ ಕಾರ್ಡ್‌ಗಾಗಿ ಭಾವಚಿತ್ರ, ಹತ್ತು ಬೆರಳಿನ ಹೆಬ್ಬೆಟ್ಟು, ಕಣ್ಣಿನ ಗುರುತು ಭಾವಚಿತ್ರವನ್ನು ತೆಗೆಯಬೇಕಾಗಿದ್ದು ಗ್ರಾಪಂ ಹಳೆಯ ಕಟ್ಟಡವನ್ನು ಬಳಸಿಕೊಳ್ಳಲಾಗಿದೆ.  ಭಾವಚಿತ್ರ ತೆಗೆಸಲು ಬಂದವರು ಸರತಿ ಸಾಲಿನಲ್ಲಿ ಪಂಚಾಯಿತಿ ಅಂಗಳದಲ್ಲಿ ನಿಲ್ಲಬೇಕಾಗಿದೆ. ತಗಡು ಶೀಟಿನ ಚಪ್ಪರವಾಗಲೀ, ಇತರ ಯಾವುದೇ ವ್ಯವಸ್ಥೆ ಮಾಡದ ಕಾರಣ ಜನರು ಮಳೆ ಬಂದಾಗ ಕೊಡೆಯ ಆಶ್ರಯ ಪಡೆಯಬೇಕಾಗಿದೆ. ಕೊಡೆ ತರದವರು ಒದ್ದೆಯಾಗಿ ನಿಲ್ಲಬೇಕಾಗಿದೆ.ಟೋಕನ್ ವ್ಯವಸ್ಥೆ ಇಲ್ಲದ ಕಾರಣ ಸರತಿ ಸಾಲಿನಿಂದ ಕದಲಿದರೆ ಮತ್ತೆ ಹಿಂದಿನ ಸಾಲಲ್ಲಿ ನಿಲ್ಲುವ ಭೀತಿುಂದ ಜನ ಮಳೆ ಬರಲಿ, ಬಿಸಿಲಿರಲಿ ಸಾಲಿನಿಂದ ಕದಲದ ಪರಿಸ್ಥಿತಿ ಇದೆ. ಭಾನವಾರ ರಾತ್ರಿ 10ರವರೆಗೂ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಇದುವರೆಗೆ ನಾಲ್ಕು ಸಾವಿರದಷ್ಟು ಮಂದಿಯ ಭಾವಚಿತ್ರ ತೆಗೆಯಲಾಗಿದೆ. ಮಂಗಳವಾರ ಕೊನೆಯ ದಿನವಾಗಿದ್ದು ಎಲ್ಲರ ಭಾವಚಿತ್ರ ತೆಗೆಯುವ ಕಾರ್ಯ ನಡೆಯುವುದು ಸಂಶಯವಾಗಿದೆ ಎನ್ನಲಾಗುತ್ತಿದೆ. ಕೊನೆ ದಿನಾಂಕ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.