ಗುರುವಾರ , ಮೇ 26, 2022
30 °C

ಸ್ವಚ್ಛತೆ ಇದ್ದರೆ ಆರೋಗ್ಯ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ತಾಯಂದಿರು ಹಾಗೂ ಕುಟುಂಬದ ಹಿರಿಯ ಸದಸ್ಯರು ಮನೆ ಹಾಗೂ ಸುತ್ತಲ ಪರಿಸರದಲ್ಲಿ ಎಷ್ಟು ಸ್ವಚ್ಛತೆ ಯನ್ನು ಕಾಪಾಡಿ ಕೊಳ್ಳುತ್ತಾರೋ ಅದರಿಂದ ಮನೆಯ ಮಕ್ಕಳ ಆರೋಗ್ಯ ಸ್ಥಿತಿ ನಿಯಂತ್ರಣ ದಲ್ಲಿರುತ್ತದೆ ಎಂದು ಡಾ.ಅನುಪಮಾ ನಾಯ್ಕ ಅಭಿಪ್ರಾಯಪಟ್ಟರು.  ಅವರು ಇಲ್ಲಿಯ ಗಾಂಧಿನಗರದಲ್ಲಿ ಬಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದವರು ಏರ್ಪಡಿಸಿದ್ದ ಆರೋಗ್ಯ ತಿಳುವರಿಕೆ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ, ಸಮಾಜಕ್ಕೆ ಆರೋಗ್ಯಕರ ಮಕ್ಕಳನ್ನು ಕೊಡುವುದೇ ದೇಶಕ್ಕೆ ಉತ್ತಮ ನಾಗರಿಕರನ್ನು ಕೊಟ್ಟಂತೆ ಎಂದು ಸೂಚ್ಯವಾಗಿ ತಿಳಿ ಹೇಳಿದರು.ಮತ್ತೊರ್ವ ಸಂಪನ್ಮೂಲ ವ್ಯಕ್ತಿ ಗಳಾದ ಡಾ.ಅನುಪ ಮಾಡದೋಳಕರ ಮಾತನಾಡಿ, ನಿತ್ಯ ಜೀವನದಲ್ಲಿ ದಂತಗಳ ಆರೋಗ್ಯ ಕಾಪಾಡಿಕೊಳ್ಳುವ ಸುಲಭ ಕ್ರಿಯೆಗಳನ್ನು ವಿವರಿಸಿದರು.ಖ್ಯಾತ ವೈದ್ಯರಾದ ಡಾ.ಎನ್.ಜಿ. ಬ್ಯಾಕೋಡ ಅವರು, ಸಾಮಾನ್ಯ ಖಾಯಿಲೆಗಳ ಹರಡುವಿಕೆ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನ ಗಳನ್ನು ಶಿಬಿರಾರ್ಥಿಗಳಿಗೆ ವಿವರಿ ಸಿದರು.ರಾಜ್ಯ ಬಿ.ಜೆ.ಪಿ.ಮಹಿಳಾಮೋರ್ಚಾ ಉಪಾಧ್ಯಕ್ಷೆ ಶಾರದಾ ಪರಶುರಾಮ ಶಿಬಿರದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಟೀಲ, ನಗರಘಟಕ ಮಹಿಳಾ ಅಧ್ಯಕ್ಷೆ ಶೋಭಾ ಪಡವಳೆ, ಕಾರ್ಯದರ್ಶಿ ಶೈಳಾ ಸುತಾರ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಉಮಾ ಹನುಮಸಾಗರ, ಮಹಾದೇವಿ ಭದ್ರಶೆಟ್ಟಿ, ಪಕ್ಷದ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನೂರಕ್ಕೂ ಹೆಚ್ಚು ಜನ ಬಡಕುಟುಂಬದ ಸಾರ್ವಜನಿಕರು ಶಿಬಿರದಲ್ಲಿ ಪಲ್ಗೊಂಡು ಮಾಹಿತಿ ಪಡೆದುಕೊಂಡರು. ನಗರಸಭಾ ಸದಸ್ಯೆ ಸುಜಾತಾ ಜಾಧವ ಕಾರ್ಯಕ್ರಮ ನಿರೂಪಿಸಿದರು. ಬಿ.ಜೆ.ಪಿ. ದಾಂಡೇಲಿ ನಗರಘಟಕದ ಅಧ್ಯಕ್ಷರಾದ ನ್ಯಾಯವಾದಿ ಎಂ.ಸಿ. ಹೆಗಡೆ ಸ್ವಾಗತಿಸಿದರು. ಜಿಲ್ಲಾ ಬಿ.ಜೆ.ಪಿ.ಮಹಿಲಾ ಮೋರ್ಚಾ ಉಪಾಧ್ಯಕ್ಷೆ ಸಾವಿತ್ರಿ ಬಡಿಗೇರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.