ಬುಧವಾರ, ಮೇ 12, 2021
18 °C

ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿಯ `ಸಂಗತ'ದಲ್ಲಿ ಪ್ರಕಟವಾದ ಕಾ.ತ. ಚಿಕ್ಕಣ್ಣ ಅವರ ಪತ್ರ (ಜೂನ್ 18) ಓದಿದೆ. ಸರ್ಕಾರದ ಅಧೀನದಲ್ಲಿದ್ದು ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಸ್ವಾಯತ್ತತೆ ಇಲ್ಲದಿರುವುದರ ಬಗ್ಗೆ, ಇವು ಸರ್ಕಾರದ ಹಿಡಿತದಿಂದ ಮುಕ್ತವಾಗಬೇಕೆಂಬ ಸಲಹೆ ಬಗ್ಗೆ ನನ್ನ ಎರಡು ಮಾತು.ಚಿಕ್ಕಣ್ಣ ಅವರು ಹೇಳುವಂತೆ ವಿಧಾನಸೌಧದ ಸುತ್ತ `ಪ್ರದಕ್ಷಿಣೆ' ಹಾಕುವ ಜನ ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೂ ಇಂಥ ಸಂಸ್ಥೆಗಳಿಗೆ ಸ್ವಾಯತ್ತತೆ ಬರುವುದಿಲ್ಲ. ಮಂತ್ರಿಮಹೋದಯರ ಚೇಲಾಗಳೇ ಇಂಥ ಕಡೆ `ಜೀ ಹುಜೂರ್' ಅಂಥ ಕೂತಿರುತ್ತಾರೆ. ಅಂಥ ಕಡೆ ಆತ್ಮಸಾಕ್ಷಿ, ಸ್ವಾಯತ್ತತೆ ನಿರೀಕ್ಷಿಸುವುದು ಕಷ್ಟ.ಮತ್ತೆ ಅವರು ಹೇಳುವ, `ಇವತ್ತಿನ ತುರ್ತು ಎಂದರೆ ಮೊದಲು ನಮ್ಮನ್ನು ನಾವು ಸಾಂಸ್ಕೃತಿಕವಾಗಿ ಉಳಿಸಿಕೊಳ್ಳಬೇಕು' ಎಂಬ ಅವರ ಮತ್ತೊಂದು ಮಾತನ್ನು ಎಷ್ಟು ಜನ ಅನುಸರಿಸುತ್ತಾರೆ. ಯಾಕೆಂದರೆ ಸ್ವತಃ ಚಿಕ್ಕಣ್ಣ ಅವರೇ ಈ ಮಾತನ್ನು ಅನುಸರಿಸಲು ಆಗಿಲ್ಲ.

-ಕೊಟ್ರಬಸಪ್ಪ, ಹೊಸಪೇಟೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.