ಶನಿವಾರ, ಫೆಬ್ರವರಿ 27, 2021
31 °C
ಪಂಚರಂಗಿ

ಸ್ವಿವಾರ್ಟ್‌ ಹೊಸ ಹಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಿವಾರ್ಟ್‌ ಹೊಸ ಹಂಬಲ

‘ಟ್ವಿಲೈಟ್‌’ ಸಿನಿಮಾ ಖ್ಯಾತಿಯ ಹಾಲಿವುಡ್‌ ನಟಿ ಕ್ರಿಸ್ಟನ್‌ ಸ್ಟಿವಾರ್ಟ್‌ ಅವರಿಗೆ ತಮ್ಮ ವೃತ್ತಿ ಬದುಕಿನಲ್ಲಿ ಹೊಸದೇನಾದರೂ ಮಾಡಬೇಕು ಎಂಬ ಹಂಬಲ ಹುಟ್ಟಿದೆ. ‘ಸೂಪರ್‌ ಹೀರೊ’ ಮಾದರಿಯ ಸಿನಿಮಾ ಮಾಡಬೇಕು ಎಂಬುದು 25 ವರ್ಷ ವಯಸ್ಸಿನ ಅಭಿನೇತ್ರಿಯ ಅಭಿಲಾಷೆ.ತಾವು ಇದುವರೆಗೆ ನಿರ್ವಹಿಸಿದ ಪಾತ್ರಗಳಲ್ಲಿನ ಏಕತಾನತೆ ಅವರಿಗೆ ಬೇಸರ ಹುಟ್ಟಿಸಿದೆ. ‘ಆಸಕ್ತಿದಾಯಕ ಮತ್ತು ಸಾರ್ಥಕವೆನಿಸುವ ಪಾತ್ರವನ್ನು ಮಾಡಬೇಕು ಎಂದು ಅನಿಸಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ‘ಬಹುಶಃ ಸೂಪರ್‌ ಹೀರೊ ಮಾದರಿಯ ಪಾತ್ರ ನನ್ನ ಈ ಹಂಬಲವನ್ನು ಈಡೇರಿಸಬಲ್ಲದು. ಆ ಪಾತ್ರವನ್ನು ಮಾಡಲು ಇನ್ನು ಹೆಚ್ಚು ಕಾಲ ಕಾಯಲಾರೆ’ ಎಂದೂ ಸ್ಟಿವಾರ್ಟ್‌ ಹೇಳಿದ್ದಾರೆ.ತೆರೆಯ ಮೇಲಷ್ಟೇ ಅಲ್ಲದೆ, ಕ್ಯಾಮೆರಾ ಹಿಂದೆ ಕೆಲಸ ಮಾಡಬೇಕು ಎಂಬ ತಮ್ಮ ಇಂಗಿತವನ್ನೂ ಅವರು ಇದೇ ಸಂದರ್ಭದಲ್ಲಿ ಅಭಿವ್ಯಕ್ತಿಸಿದ್ದಾರೆ. ನಿಮಗೆ ಒಂದು ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕರೆ ಏನು ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಸಾಧ್ಯವಾದಷ್ಟೂ ಬೇಗ ಆ ಸಂದರ್ಭ ಒದಗಿಬರಲಿ. ನನಗೆ ನಿಜಕ್ಕೂ ನಿರ್ದೇಶನದ ಆಸೆ ಇದೆ.ಒಂಬತ್ತು ವರ್ಷದವಳಾಗಿದ್ದಾಗಲೇ ಸಿನಿಮಾ ವ್ಯಾಕರಣಗಳನ್ನು ಕಲಿತುಕೊಳ್ಳಲು ಆರಂಭಿಸಿದೆ. ನನಗೆ ಚಿತ್ರರಂಗ ತುಂಬ ಇಷ್ಟ. ನಾನು ಯಾವ ರೀತಿಯ ಸಿನಿಮಾ ಮಾಡಬಹುದು ಎಂಬುದನ್ನು ಗುರುತಿಸಿಕೊಂಡು ಅದನ್ನು ಮಾಡುತ್ತೇನೆ’ ಎಂದೂ ಅವರು ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.