ಸೋಮವಾರ, ಮೇ 25, 2020
27 °C

ಹಂಗ್ರಿಜೋನ್: ರೆಸ್ಟೊರೆಂಟ್ ಗೈಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಗ್ರಿಜೋನ್: ರೆಸ್ಟೊರೆಂಟ್ ಗೈಡ್

ಹೋಟೆಲ್ ತಿನಿಸಿಗೆ ಮನ ಸೋಲದವರು ಯಾರಿದ್ದಾರೆ? ಮನೆಯಲ್ಲಿ ಏನೇ, ಎಷ್ಟೇ ಮಾಡಿ ತಿಂದರೂ ನಾಲಿಗೆ ಆಗಾಗ ಹೊರಗಿನ ತಿಂಡಿ ಕಡೆ ಸೆಳೆಯುತ್ತದೆ.

ಇನ್ನು ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವ ಮನೆಗಳಲ್ಲಂತೂ ವಾರಾಂತ್ಯದಲ್ಲಿ ಹೋಟೆಲ್‌ಗೆ ಲಗ್ಗೆ ಹಾಕುವುದು ಸಾಮಾನ್ಯ ರೂಢಿ. ಆದರೆ ಎಷ್ಟೋ ಸಲ ರಸ್ತೆಯಲ್ಲಿ ವಾಹನ ಒತ್ತಡ, ಟ್ರಾಫಿಕ್ ಜಾಮ್ ನೋಡಿ ಹಿಂಜರಿದು ಮನೆಗೇ ತರಿಸಿಕೊಂಡು ಸವಿಯುವ ಕುಟುಂಬಗಳೂ ಸಾಕಷ್ಟಿವೆ. 

ಇದಲ್ಲದೆ ಬಹುಪಾಲು ಮಂದಿಗೆ ಒಂದೊಂದು ಸಲ ಒಂದೊಂದು ಹೋಟೆಲ್‌ನ ರುಚಿ ಸವಿಯುವ ಅಭ್ಯಾಸ. ಇಷ್ಟೆಲ್ಲ ಇದ್ದರೂ ಯಾವ ರೆಸ್ಟೊರೆಂಟ್‌ಗೆ ಹೋಗಬಹುದು, ಯಾವ ತಿಂಡಿ, ಊಟ ಎಲ್ಲಿ ಚೆನ್ನಾಗಿರುತ್ತದೆ, ಅಲ್ಲಿನ ವಿಶೇಷ ಏನು, ಮನೆಗೇ ತರಿಸುವುದದರೆ ಹೇಗೆ ಎಂದು ತಿಳಿಯುವುದೇ ದೊಡ್ಡ ತಾಪತ್ರಯ. ಅನೇಕ ಸಲ ಹಾಗೂ ಹೀಗೂ ಸೂಕ್ತ ಹೋಟೆಲ್ ಪತ್ತೆ ಮಾಡಿ ಅಲ್ಲಿ ಹೋದರೆ ಸ್ಥಳಾವಕಾಶ ಇರುವುದಿಲ್ಲ. ಹೆಸರು ಬರೆಸಿ ಪಾಳಿ ಹಚ್ಚಿ ಕಾಯಬೇಕು.

ಇದೆಲ್ಲ ತೊಂದರೆ ಕಡಿಮೆ ಮಾಡುವುದೇ ‘ಹಂಗ್ರೀಜೋನ್’ ಉದ್ದೇಶ. ಇದು ರೆಸ್ಟೊರೆಂಟ್‌ನ ಮಾಹಿತಿ, ಹೋಮ್ ಡೆಲಿವರಿ ಆರ್ಡರ್ ಮತ್ತು ಟೇಬಲ್ ಬುಕಿಂಗ್ ಮಾಡುವ ಸರಳ ಆನ್‌ಲೈನ್ ಪೋರ್ಟಲ್.

hungryzone.com ಎಂದು ಇಂಟರ್‌ನೆಟ್‌ನಲ್ಲಿ ಕ್ಲಿಕ್ಕಿಸಿದರೆ ಸಾಕು. 550ಕ್ಕೂ ಹೆಚ್ಚು ರೆಸ್ಟೊರೆಂಟ್‌ಗಳು, ಅಲ್ಲಿನ ವಿಶೇಷ ಅಡುಗೆ, ತಿಂಡಿಗಳ ಮಾಹಿತಿಯೇ ತೆರೆದುಕೊಳ್ಳುತ್ತದೆ. ಅಲ್ಲಿ ಹೋಗಿ ಬಂದವರ ಅನುಭವವನ್ನೂ ತಿಳಿದುಕೊಳ್ಳಬಹುದು.

ಅಷ್ಟೇ ಅಲ್ಲ. ಮನೆಗೇ ತರಿಸಿಕೊಳ್ಳಬೇಕು ಎನಿಸಿದರೆ ಆನ್‌ಲೈನ್‌ನಲ್ಲೇ ಆರ್ಡರ್ ಮಾಡಬಹುದು. ಅಲ್ಲಿಯೇ ಹೋಗಿ ತಿನ್ನೋಣ ಎನಿಸಿದರೆ ಟೇಬಲ್ ಬುಕ್ ಮಾಡಿಡಬಹುದು. ಯಾವ ರಸ್ತೆ, ಯಾವ ಬಡಾವಣೆಯಲ್ಲಿ ಯಾವ ರೆಸ್ಟೊರೆಂಟ್ ಇದೆ, ಅಲ್ಲಿ ಯಾವುದಕ್ಕೆ ಎಷ್ಟು ದರ, ಒಬ್ಬರಿಗೆ ಎಷ್ಟು ಖರ್ಚು ಬೀಳಬಹುದು ಎನ್ನುವುದನ್ನೆಲ್ಲ ತಿಳಿಯಬಹುದು. ಅನೇಕ ಸಲ ರಿಯಾಯ್ತಿ, ಆಫರ್‌ಗಳೂ ಇರುತ್ತವೆ, ಅದನ್ನೂ ಬಳಸಿಕೊಳ್ಳಬಹುದು.

ಬೆಂಗಳೂರು ಮಾತ್ರವಲ್ಲದೆ ಮುಂಬೈ, ಪುಣೆ, ದೆಹಲಿ ಸೇರಿ ಇನ್ನೂ 9 ನಗರಗಳ ರೆಸ್ಟೊರೆಂಟ್ ಮಾಹಿತಿಯೂ ಇದರಲ್ಲಿದೆ. ವಿಶೇಷ ಎಂದರೆ ಹಂಗ್ರಿಜೋನ್ ಸೇವೆ ಪೂರ್ಣ ಉಚಿತ. ಪ್ರತಿಷ್ಠಿತ ಐಟಿ, ಬಿಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ, ಐಐಎಂ ಮುಂತಾದ ಕಡೆ ಪದವಿ ಪಡೆದ ಯುವಜನರ ಸಮೂಹ ಹಂಗ್ರಜೋನ್‌ನ ಹಿಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.