ಶನಿವಾರ, ಫೆಬ್ರವರಿ 27, 2021
19 °C

ಹಣಕ್ಕಾಗಿ ಟಿಕೆಟ್: ಇಬ್ಬರು ನಾಯಕರಿಗೆ ಎಎಪಿ ಖೊಖ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣಕ್ಕಾಗಿ ಟಿಕೆಟ್: ಇಬ್ಬರು ನಾಯಕರಿಗೆ ಎಎಪಿ ಖೊಖ್

ನವದೆಹಲಿ (ಐಎಎನ್ಎಸ್): ಆಮ್ ಆದ್ಮಿ ಪಕ್ಷದ ಟಿಕೆಟ್ ಕೊಡಿಸುವುದಾಗಿ ಹೇಳಿ ಹಣ ಪಡೆದ ಆಪಾದನೆಯಲ್ಲಿ ತನ್ನ ಇಬ್ಬರು ನಾಯಕರನ್ನು ಎಎಪಿ ಶುಕ್ರವಾರ ಉಚ್ಚಾಟಿಸಿದೆ.ಟಿಕೆಟ್ ಕೊಡಿಸುವುದಾಗಿ ಹೇಳಿ ಭರವಸೆ ನೀಡುವ ಪಕ್ಷದ ಯಾರೇ ಸದಸ್ಯರಿಗೂ ಹಣ ನೀಡಬೇಡಿ ಎಂದು ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರು ಟಿಕೆಟ್ ಆಕಾಂಕ್ಷಿಗಳಿಗೆ ಮನವಿ ಮಾಡಿದರು.'ಇಬ್ಬರು ಸದಸ್ಯರಾದ ಅರುಣಾ ಸಿಂಗ್ (ಅವಧ್ ವಲಯದ ಸಂಚಾಲಕಿ) ಮತ್ತು ಅಶೋಕ ಕುಮಾರ (ಖಜಾಂಚಿ, ಹರ್ದೋಯಿ)  ಅವರನ್ನು ಪಕ್ಷ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ. ಹಣಕ್ಕಾಗಿ ಪಕ್ಷದ ಟಿಕೆಟ್ ಕೊಡಿಸುವ ವಿಚಾರದಲ್ಲಿ ಅವರು ಷಾಮೀಲಾಗಿದ್ದರೆಂಬುದು ಗೊತ್ತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು ಎಂದು ಕೇಜ್ರಿವಾಲ್ ಪತ್ರಕರ್ತರಿಗೆ ತಿಳಿಸಿದರು.ಇಂತಹ ಚಟುವಟಿಕೆಗಳು ಗಮನಕ್ಕೆ ಬಂದಲ್ಲಿ ಪಕ್ಷಕ್ಕೆ ಮಾಹಿತಿ ನೀಡುವಂತೆ ಮತ್ತು ಇಂತಹ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಕು ಕಾರ್ಯಾಚರಣೆ ಕೈಗೊಳ್ಳುವಂತೆ ಕೇಜ್ರಿವಾಲ್ ಮಾಧ್ಯಮಗಳಿಗೆ ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.