ಭಾನುವಾರ, ಏಪ್ರಿಲ್ 18, 2021
30 °C

ಹಣಕ್ಕೆ ಮುಖ್ಯಮಂತ್ರಿ, ಸಚಿವ ಸ್ಥಾನ: ವಾಟಾಳ್ ನಾಗರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:`ಹಣ ಇದ್ದರೆ ಮುಖ್ಯಮಂತ್ರಿ ಮತ್ತು ಸಚಿವ ಸ್ಥಾನ ಪಡೆಯಬಹುದು. ಹಣದಿಂದ ಏನೂ ಬೇಕಾದರೂ ಮಾಡಬಹುದು~ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ನಡೆದ ಕನ್ನಡ ಬೆಳಕು ವಾರ ಪತ್ರಿಕೆಯ 19ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.`ವೋಟಿಗಾಗಿ ರಾಜಕಾರಣಿಗಳು ಭರವಸೆಗಳನ್ನು ನೀಡುತ್ತಲೇ ಇದ್ದಾರೆ. ಮತಕ್ಕಾಗಿ ಸುಳ್ಳು ಹೇಳುವುದನ್ನು ಮುಂದುವರೆಸುತ್ತಿದ್ದೇವೆ. ಜನ ಸಹ ಇದಕ್ಕೆ ಮರುಳಾಗಿ ವೋಟು ನೀಡು ತ್ತಿದ್ದಾರೆ. ಪ್ರಸ್ತುತ ರಾಜಕೀಯ ಸ್ಥಿತಿಗತಿ ಹೇಳತೀರದಾಗಿದೆ. ವ್ಯವಸ್ಥೆ ಕುಲಗೆಟ್ಟಿದೆ. ಮಳೆಗಾಗಿ ಕೋಟಿಗಟ್ಟಲೆ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಮೂಢ ನಂಬಿಕೆಗೆ ಜನ ಮಾರು ಹೋಗು ತ್ತಿದ್ದಾರೆ. ಮೂಢನಂಬಿಕೆ ಮೊರೆ ಹೋದರೆ ಏನೂ ಪ್ರಯೋಜನವಿಲ್ಲ~ ಎಂದು ತಿಳಿಸಿದರು.`ಎಸ್.ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ ಚರಿತ್ರೆಯ ಪುಟ ಸೇರಿದ್ದಾರೆ. ರಾಜ್ಯದಲ್ಲಿ ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿ ಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ. ದೇಶದ ಚಿತ್ರಣ ಬದಲಿಸುವ ಶಕ್ತಿ ಮಾಧ್ಯಮಕ್ಕೆ ಇದೆ. ಆದರೆ ಈಚೆಗೆ ಮಾಧ್ಯಮ ಸಹ ಹಳಿ ತಪ್ಪುತ್ತಿದೆ~ ಎಂದರು.`ಕನ್ನಡಪರ ಹೋರಾಟ ಮುಂದುವರಿಯಲಿದೆ. ಕನ್ನಡ ಸರ್ಕಾರ ಅಧಿಕಾರಕ್ಕೆ ತಂದು ವಿಧಾನಸೌಧದ ಮೇಲೆ ಕನ್ನಡದ ಬಾವುಟ ಹಾರಿಸ ಬೇಕೆಂಬ ಹುಚ್ಚು, ಕೆಚ್ಚು ನನ್ನಲ್ಲಿ ಇನ್ನೂ ಇದೆ. ಇದಕ್ಕೆ ಕನ್ನಡಿಗರು ಮನಸ್ಸು ಮಾಡಬೇಕು. ಮತದಾನ ಮಾಡುವ ಮುನ್ನ ಯೋಚಿಸಬೇಕು ಎಂದರು.ವಾಟಾಳ್ ನಾಮ ನಿರ್ದೇಶನಕ್ಕೆ ಒತ್ತಾಯ:
`ಕನ್ನಡ ಪರವಾಗಿ ಸದನದ ಒಳಗೆ ಮತ್ತು ಹೊರಗೆ ನಿರಂತರವಾಗಿ ಹೋರಾಟ ಮಾಡುತ್ತಿರುವ  ವಾಟಾಳ್ ನಾಗರಾಜ್ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಸದಸ್ಯರ ನ್ನಾಗಿ ಸರ್ಕಾರ ನೇಮಕ ಮಾಡಬೇಕು~ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಒತ್ತಾಯಿಸಿದರು.

`ನನ್ನ ಸಾಮಾಜಿಕ ಜೀವನಕ್ಕೆ ಬುನಾದಿ ವಾಟಾಳ್. ಅವರ ನನ್ನ ಸಂಬಂಧ 40 ವರ್ಷಗಳದ್ದು ಎಂದು ಸಂಸದರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.