ಬುಧವಾರ, ಜನವರಿ 22, 2020
28 °C
ಹಿರಿಯೂರಿನ ಅರ್ಬನ್ ಬ್ಯಾಂಕ್

ಹಣ ದುರುಪಯೋಗ, ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ನಗರದ ಅರ್ಬನ್ ಸಹಕಾರಿ ಬ್ಯಾಂಕಿನಲ್ಲಿ ಹಣ ದುರುಪಯೋಗ ಮಾಡಿರುವ ಆರೋಪದ ಮೇಲೆ ನಗರ ಠಾಣೆ ಪೊಲೀಸರು ಜನರಲ್ ಮ್ಯಾನೇಜರ್ ಶ್ರೀನಿವಾಸ್ ಮತ್ತು ಸೇಲ್ಸ್ ಆಫೀಸರ್ ಸುಗುಮಾರನ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.ಮಾರ್ಚ್ ೨೦೧೧ರಿಂದ ಮಾರ್ಚ್ ೨೦೧೩ರವರೆಗೆ ಬ್ಯಾಂಕಿನ ಅಧ್ಯಕ್ಷರಾಗಿದ್ದ ಆರ್.ಮೊಹಮದ್ ರಫಿ ಅವರು, ಬ್ಯಾಂಕಿನಲ್ಲಿ ೧೯೯೫ರಿಂದ ೨೦೦೩ರ ಅವಧಿಯಲ್ಲಿ ಬ್ಯಾಂಕಿನ ಹಾಗೂ ಠೇವಣಿದಾರರ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ವಂಚಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ನಗರ ಠಾಣೆ ಪಿಎಸ್ಐ ಶಿವಕುಮಾರ್ ಅವರು ಶನಿವಾರ ಶ್ರೀನಿವಾಸ್ ಮತ್ತು ಸುಗುಮಾರನ್ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಬ್ಬರೂ ಆರೋಪಿಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಅಪಘಾತ; ಸಾಹುಕಾರ್ ಜಯದೇವಪ್ಪ ಸಾವು

ಚಿತ್ರದುರ್ಗ: ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆ ತಾಲ್ಲೂಕಿನ ಬಂಜಗೇನಹಳ್ಳಿ ಸಮೀಪದ ನಡೆದಿದೆ.ಮೃತ ವ್ಯಕ್ತಿಯನ್ನು ಹಿರೇಗುಂಟನೂರಿನ ಜೆಡಿಎಸ್ ಮುಖಂಡ ಸಾಹುಕಾರ್ ಜಯದೇವಪ್ಪ (65) ಎಂದು ಗುರುತಿಸಲಾಗಿದೆ. ಜಯದೇವಪ್ಪ ದ್ಯಾಮಲಾಂಬ ದೇವಸ್ಥಾನ ಸಮಿತಿ ಸಂಚಾಲಕರಾಗಿದ್ದರು.ಚಿತ್ರದುರ್ಗದಿಂದ ಶಿವಮೊಗ್ಗದ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪ್ರತಿಕ್ರಿಯಿಸಿ (+)