ಶನಿವಾರ, ಮೇ 8, 2021
18 °C

ಹನಿಗತೆ: ನಾಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಿನಲ್ಲಿ ನಡೆದು ಬರುತ್ತಿದ್ದ ವ್ಯಕ್ತಿಯೊಬ್ಬನಿಗೆ ಸಿಂಹವೊಂದು ಎದುರಾಯಿತು. ಸಿಂಹದ ಹೊಟ್ಟೆ ತುಂಬಿದ್ದ ಕಾರಣ ಅದು ಅವನನ್ನು ನೋಡಿ ಘರ್ಜಿಸಲಿಲ್ಲ. ಅವನೊಂದಿಗೆ ನಡೆದು ಬಂದ ಅದು ನಿಧಾನವಾಗಿ ಅವನನ್ನು ಮಾತಿಗೆಳೆಯಿತು. ಆ ವ್ಯಕ್ತಿಗೂ ಕಾಡಿನಲ್ಲಿ ಒಂಟಿ ಎನಿಸುತ್ತಿತ್ತು. ಇದೀಗ ಸಿಂಹದ ಜೊತೆ ಸಿಕ್ಕಿತ್ತು. ಅವರಿಬ್ಬರೂ ಕೊಂಚ ದೂರ ನಡೆದು ಬಂದರು. ಅಲ್ಲೊಂದು ದೊಡ್ಡ ಪ್ರತಿಮೆ ಇತ್ತು. ಅದರಲ್ಲಿ ಸಿಂಹವನ್ನು ಕೊಲ್ಲುತ್ತಿರುವ ಮನುಷ್ಯನನ್ನು ಕೆತ್ತಲಾಗಿತ್ತು. ಅದನ್ನು ತೋರಿಸುತ್ತಾ ಆ ವ್ಯಕ್ತಿ ಗತ್ತಿನಲ್ಲಿ `ನೋಡು, ನಾವು ಮನುಷ್ಯರು ಸಿಂಹಗಳನ್ನು ಹೇಗೆ ಕೊಂದಿದ್ದೇವೆ~ ಎಂದ.ಆಗ ಸಿಂಹ ನಗುತ್ತಾ, `ನಮಗೆ ಪ್ರತಿಮೆಗಳನ್ನು ಕೆತ್ತಲು ಸಾಧ್ಯವಿದ್ದಿದ್ದರೆ ಮನುಷ್ಯನನ್ನು ಸೀಳುವ ಸಿಂಹಗಳನ್ನು ಕೆತ್ತುತ್ತಿದ್ದೆವು~ ಎಂದಿತು.ತನ್ನ ಕೆಳಮಟ್ಟದ ಆಲೋಚನೆಗೆ ಆ ವ್ಯಕ್ತಿ ನಾಚಿ ತಲೆತಗ್ಗಿಸಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.