ಭಾನುವಾರ, ಜನವರಿ 19, 2020
23 °C

ಹನುಮಜಯಂತಿ ಪ್ರಯುಕ್ತ ಪಂಚಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿ ನಗರ: ಸೊಣ್ಣೇ ನಹಳ್ಳಿ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ  ಡಿ.14ರಂದು ‘ಹನುಮಜಯಂತಿ’  ನಡೆಯಲಿದೆ.

ಆಂಜನೇಯಸ್ವಾಮಿಗೆ ಪಂಚಾ ಭಿಷೇಕ, ಗಣಪತಿಪೂಜೆ, ನವ ಗ್ರಹಪೂಜೆ, ಗಣಪತಿಹೋಮ ಜತೆಗೆ ದೇವರ ಮೆರವಣಿಗೆ ನಡೆಯಲಿದ್ದು, ಒಂದು ಲಕ್ಷ ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.ಸಿದ್ದಗಂಗಾಮಠದ  ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿಮಠದ ನಿರ್ಮಲಾನಂದಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ನಾಥಸ್ವಾಮೀಜಿ, ನಂಜಾವದೂತ ಸ್ವಾಮೀಜಿ ಹಾಗೂ , ಸಂತೋಷ್‌ ಗುರೂಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.ಹನುಮಜಯಂತಿಗೆ ಪೂಜಾ, ಕುಣಿತ, ಕಂಸಾಳೆಪದ, ವೀರಭದ್ರನ ಕುಣಿತ, ಕರಡಿಕುಣಿತ, ಯಕ್ಷಗಾನ, ಮಲೈಮಹದೇಶ್ವರ ಕುರಿತ ಭಕ್ತಿಗೀತೆ, ಜಾನಪದ ಹಾಡುಗಾರಿಕೆ, ನಾಡಿನ ವಿವಿಧ ಜಾನಪದ ಕಲಾ ತಂಡಗಳು  ಕಲಾ ಪ್ರದರ್ಶನ ನೀಡಲಿವೆ.

ಪ್ರತಿಕ್ರಿಯಿಸಿ (+)