ಬೆಂಗಳೂರು ಮೈಸೂರು ಹೆದ್ದಾರಿಯ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್, ಹಬ್ಬದ ಅಂಗವಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿರುವ ರೋಮಾಂಚಕಾರಿ ಕ್ರೀಡೆಗಳು ಮತ್ತು ಮುದಗೊಳಿಸುವ ಜಲ ಕ್ರೀಡೆಗಳು, ಚಮತ್ಕಾರಿಕ ಸಂಗೀತ ಕಾರಂಜಿ ಇಲ್ಲಿನ ಪ್ರಮುಖ ಆಕರ್ಷಣೆ.

ವಾರಾಂತ್ಯ ಹಾಗೂ ಹಬ್ಬವನ್ನು ವಂಡರ್ಲಾನಲ್ಲಿ ಕಳೆಯಲು ಬರುವವರಿಗೆ ಸಾಂಪ್ರದಾಯಿಕ ಡೊಳ್ಳು ಕುಣಿತ, ವೀರಗಾಸೆ, ವೀರಭದ್ರ ಕುಣಿತ ಮೊದಲಾದವು ರಂಜಿಸಲಿವೆ. ಜತೆಗೆ ಭರಪೂರ ಮನರಂಜನೆ ಪಡೆಯಬಹುದು.

82 ಎಕರೆ ವಿಸ್ತಾರದ ವಂಡರ್ಲಾ ದೇಶದಲ್ಲೇ ಅತ್ಯುತ್ತಮ ವಾಟರ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 45 ಎಕರೆಯಲ್ಲಿ ವಾಟರ್ ರೈಡ್ಗಳನ್ನು ಹೊಂದಿದೆ. ಡ್ರೈ ರೈಡ್ಸ್ನಲ್ಲಿ ಮ್ಯೂಸಿಕಲ್ ಫೌಂಟೇನ್, ಕ್ರೇಜಿ ಕಾರ್ ಅತ್ಯಂತ ಜನಪ್ರಿಯತೆ ಗಳಿಸಿದೆ. ದೇಶದಲ್ಲಿಯೇ ಅತಿ ಎತ್ತರದ ಸ್ಕೈ ವ್ಹೀಲ್ ಇಲ್ಲಿದೆ. ದಣಿದ ದೇಹಕ್ಕೆ ಈ ಆಟಗಳು ಚೇತೋಹಾರಿಯಾಗಿವೆ.

`ವಂಡರ್ಲಾದಲ್ಲಿ 24 ಕ್ಕೂ ಅಧಿಕ ಬಗೆಯ ಲ್ಯಾಂಡ್ ಬೇಸ್ಡ್ ರೈಡ್ಗಳಿವೆ. ಮಾವೆರಿಕ್, ವೈ ಸ್ಕ್ರೀಮ್, ಡ್ರಾಪ್ ಜೋನ್, ವಂಡರ್ಲಾ ಬಂಬಾ, ಹುರಿಕೇನ್, ಟೆಕ್ನೋ ಜಂಪ್ ಆಟಗಳು ರೋಮಾಂಚನಕಾರಿ ಅನುಭವ ನೀಡುತ್ತವೆ. ಮ್ಯೂಸಿಕಲ್ ಫೌಂಟೇನ್, ಲೇಸರ್ ಶೋ ಜತೆಗೆ ವಂಡರ್ಲಾ 26 ವಾಟರ್ ಬೇಸ್ಡ್ ಆಕರ್ಷಣೆಗಳನ್ನು ಹೊಂದಿದೆ.

ಎರಡು ವೇವ್ ಪೂಲ್ಸ್ಗಳನ್ನು ಸಹ ಒಳಗೊಂಡಿದೆ. ಚಳಿಗಾಲದಲ್ಲಿ ಪೂಲ್ನ ನೀರನ್ನು ಬೆಚ್ಚಗಿಡುವ ಸಲುವಾಗಿ ಸೌರವ್ಯವಸ್ಥೆ ಅಳವಡಿಸಲಾಗಿದೆ. ಇದು ಈಜುಗೊಳದಲ್ಲಿ ಆಟವಾಡುವವರ ಮೈಗೆ ಬೆಚ್ಚನೆಯ ಭಾವ ನೀಡುತ್ತದೆ~ ಎನ್ನುತ್ತಾರೆ ವಂಡರ್ಲಾ ಮುಖ್ಯ ನಿರ್ದೇಶಕ ಅರುಣ್ ಕೆ.ಚಿಟ್ಟಿಲಪಿಳ್ಳೆ.

`ವಾಟರ್ ಪಾರ್ಕ್ಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬೇಕು. ನೀರಿನ ಮಹತ್ವನ್ನು ಅರಿತುಕೊಂಡಿರುವ ವಂಡರ್ಲಾ ಆರು ನೀರಿನ ಮರುಬಳಕೆ ಘಟಕ ಹೊಂದಿದ್ದು, ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಂಡಿದೆ. ಶೇ 80 ನೀರು ಇಲ್ಲಿ ಪುನರ್ಬಳಕೆಯಾಗುತ್ತಿದೆ~ ಎನ್ನುತ್ತಾರೆ ಅವರು.

ಸಾಮಾಜಿಕ ಜವಾಬ್ದಾರಿಯನ್ನು ಅರಿತಿರುವ ವಂಡರ್ಲಾ ಸುತ್ತಮುತ್ತ ಇರುವ ಜಡೇನಹಳ್ಳಿ, ವಜ್ರಹಳ್ಳಿ ಹಾಗೂ ಮಂಚನಹಳ್ಳಿಯಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಹಳ್ಳಿಗರಿಗೆ ಉಚಿತ ವೈದ್ಯಕೀಯ ತಪಾಸಣೆ, ಬಡ ವಿದ್ಯಾರ್ಥಿಗಳಿಗೆ ಸಹಾಯ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಜತೆಗೆ ಸ್ಥಳೀಯರಿಗೆ ಉದ್ಯೋಗವನ್ನು ಕಲ್ಪಿಸಿದೆ.

ಸುತ್ತಲಿನ ವಾತಾವರಣಕ್ಕೆ ಹಸಿರಿನ ಮೆರಗು ತುಂಬುವ ಸಲುವಾಗಿ ಅನೇಕ ಗಿಡಗಳನ್ನು ನೆಡಿಸಲಾಗಿದೆ. ಅವುಗಳು ಇಂದು ಬೆಳೆದು ವಂಡರ್ಲಾ ಸೊಬಗು ಹೆಚ್ಚಿಸಿರುವುದರ ಜತೆಗೆ ಹಿತಕರ ಹವಾಗುಣ ಸೃಷಿಸಿವೆ ಎನ್ನುತ್ತಾರೆ ಅರುಣ್.

`ಇಲ್ಲಿಗೆ ಬರುವವರಿಗೆ ಉತ್ತಮ ಆಹಾರವನ್ನು ಒದಗಿಸುವ ಸಲುವಾಗಿ ಎಂಪೈರ್, ಅಡಿಗಾಸ್, ಲೀ ಮೆರಿಡಿಯನ್ ಹಾಗೂ ಮತ್ತಿತರ ಆರು ಹೋಟೆಲ್ಗಳಿವೆ. ಈ ವರ್ಷಾಂತ್ಯದಲ್ಲಿ ವಂಡರ್ಲಾ ತನ್ನದೇ ಹೋಟೆಲ್ ಹಾಗೂ ವಸತಿಯನ್ನು ತೆರೆಯುವ ಉತ್ಸಾಹದಲ್ಲಿದೆ.

ಹಬ್ಬದ ಸೀಸನ್ನಲ್ಲಿ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ಈ ವರ್ಷ ವಂಡರ್ಲಾಗೆ ಭೇಟಿ ನೀಡಿದವರ ಸಂಖ್ಯೆ 10 ಲಕ್ಷ ದಾಟಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ~ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.