ಬೆಂಗಳೂರು: ನಿರೀಕ್ಷೆ ಹುಸಿಯಾಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡದ ಕರಾರುವಾಕ್ಕಾದ ಬೌಲಿಂಗ್ ದಾಳಿ ಎದುರು ಟ್ರಿನಿಡಾಡ್ ಅಂಡ್ ಟೊಬಾಗೊ ತಂಡದ `ಆಟ~ ನಡೆಯಲಿಲ್ಲ. ಇದಕ್ಕೆ ಕಾರಣ ಹರಭಜನ್ ಸಿಂಗ್ ಹಾಗೂ ವೇಗಿ ಲಸಿತ್ ಮಾಲಿಂಗ.

ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಸೋಮವಾರ ಉತ್ತಮ ಆರಂಭ ಪಡೆದ ವೆಸ್ಟ್ ಇಂಡೀಸ್ನ ಟ್ರಿನಿಡಾಡ್ ಆರಂಭದಲ್ಲಿ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿತ್ತು. ಮೊದಲ ಆರು ಓವರುಗಳಾಗುವಷ್ಟರಲ್ಲಿ ಡರೆನ್ ಗಂಗಾ ಪಡೆ 57 ರನ್ ಗಳಿಸಿತ್ತು.

ಆದರೆ ಈ ತಂಡದ ರನ್ಗಳ ಓಟಕ್ಕೆ ಕಡಿವಾಣ ಹಾಕಿದ್ದು ನಾಯಕ ಭಜ್ಜಿ. ಈ ಪರಿಣಾಮವಾಗಿ ಟ್ರಿನಿಡಾಡ್ ತಂಡ 16.2 ಓವರ್ಗಳಲ್ಲಿ ಗಳಿಸಿದ್ದು ಕೇವಲ 98 ರನ್. ಈ ತಂಡ ಚಾಂಪಿಯನ್ಸ್ ಲೀಗ್ನಲ್ಲಿ 100 ರನ್ ಒಳಗೆ ಆಲ್ ಔಟ್ ನಾಲ್ಕನೇ ತಂಡ ಎನಿಸಿಕೊಂಡಿತು. ಕೊನೆಯ 34 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು.

ಈ ಮೊತ್ತ ಬೆನ್ನು ಹತ್ತಿರುವ ಮುಂಬೈ ತಂಡ ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ 6 ಓವರ್ಗಳಲ್ಲಿ 25 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರವಿ ರಾಂಪಾಲ್ ಮೂರು ವಿಕೆಟ್ ಪಡೆದು ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಯತ್ನ ಮಾಡಿದರು.

ಇದು ಈ ಸಲದ ಚಾಂಪಿಯನ್ ಲೀಗ್ನಲ್ಲಿ ದಾಖಲಾದ ತಂಡದ ಒಟ್ಟು ಕನಿಷ್ಠ ಮೊತ್ತವೆನಿಸಿತು. ಕಳೆದ ವರ್ಷದ ಟೂರ್ನಿಯಲ್ಲಿ ಸೆಂಟ್ರೆಲ್ ಡಿಸ್ಟಿಕ್ಟ್ ತಂಡ ವೈಯಾಂಬ ಎದುರು ಕೇವಲ 70 ರನ್ಗಳಿಗೆ ಆಲ್ ಔಟ್ ಆಗಿತ್ತು. ಇದಾದ ನಂತರ ಕೇಪ್ ಕೋಬ್ರಾಸ್ (84, ದೆಹಲಿ ವಿರುದ್ಧದ ಪಂದ್ಯ) ಗಳಿಸಿತ್ತು.

ದಿನೇಶ್ ರಾಮ್ದಿನ್, ಕೂಪರ್, ರಾಂಪಾಲ್ ಹಾಗೂ ಬದ್ರೆ ಅವರಿಗಂತೂ ರನ್ ಖಾತೆ ತೆರೆಯಲು ಮುಂಬೈ ಬೌಲರ್ಗಳು ಅವಕಾಶ ನೀಡಲಿಲ್ಲ. ಜೇಸನ್ ಮೊಹಮ್ಮದ್ (23, 27ಎಸೆತ, 1ಬೌಂಡರಿ ಹಾಗೂ 1 ಸಿಕ್ಸರ್) ಗಳಿಸಿ ಟ್ರಿನಿಡಾಡ್ ಎದುರು ಗರಿಷ್ಠ ಮೊತ್ತ ಗಳಿಸಿದ ಆಟಗಾರ ಎನಿಸಿಕೊಂಡರು.

ಭಜ್ಜಿ `ಕೈ~ ಚಳಕ: ಕಳೆದ ಪಂದ್ಯದ `ಹೀರೊ~ ಲಸಿತ್ ಮಾಲಿಂಗ ಮೊದಲ ಓವರ್ನಲ್ಲಿ 10 ರನ್ ನೀಡಿ ಅಭಿಮಾನಿಗಳ ಬೇಸರಕ್ಕೆ ಕಾರಣರಾದರು. ನಂತರ ಭಜ್ಜಿ ಅಮೂಲ್ಯ ಮೂರು ವಿಕೆಟ್ ಗಳಿಸಿದರು. ಭಜ್ಜಿಗೆ ಸಾಥ್ ನೀಡಿದ ಮಾಲಿಂಗ `ಯಾರ್ಕರ್~ ಮೂಲಕ ಇನ್ನುಳಿದ ಮೂರು ಓವರ್ಗಳಲ್ಲಿ ಕೇವಲ 12 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.

ಗಾಯದ ಸಮಸ್ಯೆ: ಮುಂಬೈ ಇಂಡಿಯನ್ಸ್ ತಂಡವನ್ನು ಬಲವಾಗಿ ಕಾಡುತ್ತಿರುವ ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಈ ಸಮಸ್ಯೆಯಿಂದ ತೆಂಡೂಲ್ಕರ್ ಈಗಾಗಲೇ ಚಾಂಪಿಯನ್ಸ್ ಲೀಗ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ರೋಹಿತ್ ಶರ್ಮ ಹಾಗೂ ಮುನಾಫ್ ಪಟೇಲ್ ಅವರ ಗೈರು ಹಾಜರಿ ಕಾಡುತ್ತಿದೆ.

ಈ ಮಧ್ಯೆ ಮತ್ತೊಬ್ಬ ಆಟಗಾರ ಡೇವ್ ಜಾಕೊಬ್ಸ್ ಟೂರ್ನಿಯಿಂದ `ಔಟ್~ ಆಗಿದ್ದಾರೆ. ಭಾನುವಾರ ಅಭ್ಯಾಸ ನಡೆಸುವ ವೇಳೆ ಗೊಂಡಿದ್ದಾರೆ. ಈ ಆಟಗಾರನ ಬದಲು ಜೇಮ್ಸ ಫ್ರಾಂಕ್ಲಿನ್ ಆಡಿದರು.

ಸ್ಕೋರ್ ವಿವರ
ಟ್ರಿನಿಡಾಡ್ ಅಂಡ್ ಟೊಬಾಗೊ:
16.2 ಓವರ್ಗಳಲ್ಲಿ 98

ಲೆಂಡ್ಲ್ ಸಿಮಾನ್ಸ್ ರನ್ ಔಟ್ (ಫ್ರಾಂಕ್ಲಿನ್/ರಾಯುಡು) 21
ಅಡ್ರಿಯಾನ್ ಭರತ್ ಬಿ ಲಸಿತ್ ಮಾಲಿಂಗ 11
ಡರೆನ್ ಬ್ರಾವೊ ಬಿ ಹರಭಜನ್ ಸಿಂಗ್ 18

ಡರೆನ್ ಗಂಗಾ ಸಿ ಸತೀಶ್ ಬಿ ಫ್ರಾಂಕ್ಲಿನ್ 05
ದಿನೇಶ್ ರಾಮ್ದಿನ್ ಸಿ ಮತ್ತು ಬಿ ಹರಭಜನ್ ಸಿಂಗ್ 00
ಜೇಸನ್ ಮೊಹಮ್ಮದ್ ಚಿ ರಾಯುಡು ಬಿ ಪೊಲಾರ್ಡ್ 23

ಶರ್ವಿನಾ ಗಂಗಾ ಎಲ್ಬಿಡಬ್ಲ್ಯು ಬಿ ಹರಭಜನ್ ಸಿಂಗ್ 02
ಕೆವೊನ್ ಕೂಪರ್ ಎಲ್ಬಿಡಬ್ಲ್ಯು ಬಿ ಮಾಲಿಂಗ 00
ರವಿ ರಾಂಪಾಲ್ ರನ್ ಔಟ್ (ಬ್ಲೀಜರ್ಡ್/ರಾಯುಡು) 00
ಸುನಿಲ್ ನರೇನ್ ಸಿ ಯಜುವೇಂದ್ರ ಸಿಂಗ್ ಬಿ ನಾಚಿಮ್ 11

ಸ್ಯಾಮುಯೆಲ್ ಬದ್ರಿ ಔಟಾಗದೆ 00

ಇತರೆ: (ವೈಡ್-7) 07

ವಿಕೆಟ್ ಪತನ: 1-21 (ಭರತ್; 2.6), 2-41 (ಸಿಮಾನ್ಸ್; 4.5), 3-57 (ಡರೆನ್ ಗಂಗಾ; 6.6), 4-57 (ರಾಮ್ದಿನ್; 7.1), 5-64 (ಬ್ರಾವೊ; 9.2), 6-78 (ಶರ್ವಿನಾ ಗಂಗಾ 11.3), 7-83 (ಕೂಪರ್; 12.4), 8-83 (ರಾಂಪಾಲ್; 12.5), 9-95 (ಜೇಸನ್; 15.4), 10-98 (ನರೇನ್; 16.2).
ಬೌಲಿಂಗ್ ವಿವರ: ಲಸಿತ್ ಮಾಲಿಂಗ 4-0-22-2, ಅಬು ನಾಚಿ ಅಹ್ಮದ್ 2.2-0-17-1, ಯಜುವೇಂದ್ರ ಸಿಂಗ್ ಚಹಾಲ್ 1-0-13-0, ಹರಭಜನ್ ಸಿಂಗ್ 4-0-22-3, ಜೇಮ್ಸ ಫ್ರಾಂಕ್ಲಿನ್ 3-0-15-1, ಕೀರನ್ ಪೊಲಾರ್ಡ್ 2-0-9-1.
ವಿವರ ಅಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.