ಮಹಿಂದ್ರಾ ಏನಾದರೊಂದು ಹೊಸತನ್ನು ಮಾಡುತ್ತಲೇ ಇರುತ್ತದೆ. ಪ್ರಯೋಗಶಾಲಿಯಾದ ಮಹಿಂದ್ರಾ ಸಾಂಪ್ರದಾಯಿಕ ಜೀಪ್ಗಳ ಬದಲು ಬೊಲೆರೊ, ಸ್ಕಾರ್ಪಿಯೊ ಹೊರಬಿಟ್ಟಿದ್ದೇ ತಡ, ಹಿಂತಿರುಗಿ ನೋಡಿದ್ದೇ ಇಲ್ಲ. ತನ್ನ ಇತ್ತೀಚಿನ ಮಹಿಂದ್ರಾ ಎಕ್ಸ್ಯುವಿ 500 ಹಾಗೂ ಕ್ವಾಂಟೊ ವಾಹನಗಳು ಇವಕ್ಕೆ ಉದಾಹರಣೆ. ಈಗ ತನ್ನ ಹಳೆಯ ಕಾರ್ ಆದ ಮಹಿಂದ್ರಾ ವೆರಿಟೊ ಅನ್ನು ಹೊಸತು ಮಾಡಿ ಬಿಟ್ಟಿದೆ. ಇದು ಹಳೆಯ ಕಾರೇ. ಆದರೆ ಶೈಲಿ ಮಾತ್ರ ಹೊಸತು!

ಸಾಧಾರಣವಾಗಿ ಸೆಡಾನ್ ಕಾರ್ಗಳಲ್ಲಿ ಮಾತ್ರ 3 ಬಾಕ್ಸ್ ಮಾದರಿ ಬಳಸಲಾಗುತ್ತದೆ. 3 ಬಾಕ್ಸ್ ಎಂದರೆ ಎದುರಿನ ಚಾಲಕನ ಭಾಗ, ಹಿಂದಿನ ಪ್ರಯಾಣಿಕರ ಭಾಗ ಹಾಗೂ ಅದಕ್ಕೂ ಹಿಂದಿನ ಲಗ್ಗೇಜ್ನ ಜಾಗ. ಮಹಿಂದ್ರಾ ವೆರಿಟೊ ಈ 3 ಬಾಕ್ಸ್ ಮಾದರಿಯ ಕಾರ್. ಈಗ ಇದೇ ವೆರಿಟೊ ಅನ್ನು 3 ಬಾಕ್ಸ್ನಿಂದ 2 ಬಾಕ್ಸ್ ಮಾದರಿಗೆ ಬದಲಿಸಿ ಹೊರಬಿಟ್ಟಿದೆ.

ಸಾಮಾನ್ಯವಾಗಿ ಯಾವುದೇ ಕಾರ್ ಕಂಪೆನಿ 2 ಬಾಕ್ಸ್ ಇಂದ 3 ಬಾಕ್ಸ್ಗೆ ಕಾರ್ ಅನ್ನು ಮೇಲ್ದರ್ಜೆಗೆ ಏರಿಸುವುದು ಉಂಟು. ಅಂದರೆ ಹ್ಯಾಚ್ಬ್ಯಾಕ್ನಿಂದ ಸೆಡಾನ್ಗೆ. ಇದಕ್ಕೆ ಉದಾಹರಣೆಯಾಗಿ ಮಾರುತಿಯ ಸ್ವಿಫ್ಟ್ ಅನ್ನು ಡಿಸೈರ್ ಆಗಿಯೂ, ಟಾಟಾದ ಇಂಡಿಕಾ ಅನ್ನು ಇಂಡಿಗೊ ಆಗಿಯೂ ಬದಲಿಸಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಮಹಿಂದ್ರಾ ಮಾತ್ರ ಇದಕ್ಕೆ ಉಲ್ಟಾ ಮಾಡಿದೆ. ತನ್ನ ದೊಡ್ಡ ಕಾರ್ ಆಗಿದ್ದ ವೆರಿಟೊ ಅನ್ನು ಸಣ್ಣ ಕಾರ್ ವೆರಿಟೊ ವೈಬ್ ಆಗಿ ಪರಿವರ್ತಿಸಿ ಬಿಡುಗಡೆ ಮಾಡಿ ಅಚ್ಚರಿ ಮೂಡಿಸಿದೆ.

ತಾಂತ್ರಿಕ ಮಾಹಿತಿ
ಎಂಜಿನ್: 1461 ಸಿಸಿ ಪೆಟ್ರೋಲ್ ಮತ್ತು ಡೀಸೆಲ್
ಶಕ್ತಿ: 63 ಬಿಎಚ್ಪಿ (4000 ಆರ್ಪಿಎಂ)
ಉದ್ದ: 3991 ಎಂಎಂ
ಅಗಲ: 1740 ಎಂಎಂ
ಎತ್ತರ: 1540 ಎಂಎಂ
ವ್ಹೀಲ್ಬೇಸ್: 2630 ಎಂಎಂ
ಗ್ರೌಂಡ್ ಕ್ಲಿಯರೆನ್ಸ್: 172 ಎಂಎಂ
ತೂಕ: 1155 ಕೆಜಿ
ಇಂಧನ ಶೇಖರಣಾ ಸಾಮರ್ಥ್ಯ: 50 ಲೀಟರ್

ಆದರೆ ಮಹಿಂದ್ರಾ ವೆರಿಟೊ ವೈಬ್, ವೆರಿಟೊ ಅನ್ನು ನಕಲು ಮಾಡಿದೆ ಎಂದು ಅನ್ನಿಸುವುದೇ ಇಲ್ಲ. ವೆರಿಟೊನ ತಮ್ಮನಂತೆ ಕಾಣುತ್ತದೆಯಷ್ಟೇ. ಸಂಪೂರ್ಣ ಹೊಸ ಕಾರ್ ಫೀಲ್ ಅನ್ನು ಇದು ನೀಡುತ್ತದೆ. ಕಾರ್ನ ಆಕರ್ಷಣೆ ಅದರ ಹಿಂಭಾಗ. ಸಂಪೂರ್ಣ ಹೊಸ ಹಿಂಭಾಗವನ್ನು ವೆರಿಟೊ ವೈಬ್ ಪಡೆದಿದೆ. ಶಾರ್ಪ್ ನೋಟ ಹೊಂದಿರುವ ಹಿಂಭಾಗದ ವಿಂಡ್ಶೀಲ್ಡ್ ಗಮನ ಸೆಳೆಯುತ್ತದೆ. ಪಿಲ್ಲರ್ ಮಾದರಿಯ ಹೆಡ್ಲ್ಯಾಂಪ್ಗಳು ಫೋರ್ಡ್ ಮಾದರಿ ಅನ್ನಿಸುತ್ತದೆ. ಕೆಲವೊಮ್ಮೆ ಸಂಪೂರ್ಣ ಸ್ಪೋರ್ಟಿ ಅನಿಸುತ್ತದೆ.

ಆದರೆ ಕೊಂಚ ವಿಚಿತ್ರ ಎನ್ನಿಸುವಂತಹ ಹಿಂದಿನ ನೋಟ ಇದಕ್ಕಿದೆ. ಹೊಸ ಹಿಂಭಾಗದ ವಿನ್ಯಾಸ ಸಿಕ್ಕಿದೆ. ಆದರೆ ಮುಂಭಾಗ ಮಾತ್ರ ವೆರಿಟೊದೆ (ಮೂಲ ಹೆಸರು ಲೋಗನ್) ಆಗಿರುವ ಕಾರಣ ಈ ರೀತಿ ಆಗಿದೆ. ಆದರೆ ಕಾರ್ ಅತ್ಯಂತ ವಿಶಾಲವಾಗಿದ್ದು, ಸ್ಪೋರ್ಟಿ ಲುಕ್ ಹೊಂದಿರುವ ಕಾರಣ, ಅತ್ಯುತ್ತಮ ಕಾರ್ ಎಂದೇ ಕರೆಸಿಕೊಳ್ಳುತ್ತದೆ.

ಇದು ಪಕ್ಕಾ ಹ್ಯಾಚ್ಬ್ಯಾಕ್ ಕಾರ್. ಹಿಂಭಾಗದ ವಿಂಡ್ಶೀಲ್ಡ್ ಕೂರಿಸಿದ್ದಾಗಿದ್ದು (ಮಿತ ಖರ್ಚಿಗಾಗಿ) ಸಾಧಾರಣ ನೋಟ ನೀಡುತ್ತದೆ. ವಿಂಡ್ಶೀಲ್ಡ್ನ ಹಿಂದೆ ಸಾಕಷ್ಟು ಲಗ್ಗೇಜ್ ಇಡಲು ಜಾಗವಿದೆ. 330 ಲೀಟರ್ ಲಗ್ಗೇಜ್ ಇಡುವಂತಿದ್ದು, ಲಗ್ಗೇಜ್ ವಿಚಾರದಲ್ಲಿ ಇದು ಸೆಡಾನ್ ಅನ್ನು ಮೀರಿಸುತ್ತದೆ. ಆದರೆ ಬೂಟ್ ಸ್ಪೇಸ್ ಹೆಚ್ಚು ಅಗಲ ಇಲ್ಲದೇ, ಉದ್ದವಾಗಿದೆ. ಇದರಿಂದ ಎಲ್ಲ ಮಾದರಿಯ ಲಗ್ಗೇಜ್ ಇಡಲು ಕೊಂಚ ಕಷ್ಟವಾಗಬಹುದು. ಅದೂ ಅಲ್ಲದೇ ಹಿಂದಿನ ಸೀಟ್ಗಳನ್ನು ಮಡಚುವಂತೆಯೂ ಇಲ್ಲ. ಇದರಿಂದ ಲಗ್ಗೇಜ್ ಅನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ತೊಡಕಾಗುತ್ತದೆ.

ಆರಾಮ ಅನುಕೂಲ

ಆದರೂ ವೆರಿಟೊ ವೈಬ್ ಅನ್ನು ಉತ್ತಮ ಹ್ಯಾಚ್ಬ್ಯಾಕ್ ಎನ್ನಬಹುದು. ಇದರ ಮುಂಭಾಗದ ದೇಹ ತನ್ನ ಹಳೆಯ ವೆರಿಟೊದ್ದೇ ಆಗಿರುವ ಕಾರಣ, ಅದೇ ಗಾತ್ರದ ಸೀಟ್ಗಳು, ಹೆಡ್ ಅಂಡ್ ಲೆಗ್ ಸ್ಪೇಸ್ ಸಿಕ್ಕಿದೆ. ಆದ್ದರಿಂದ ಅತಿ ಆರಾಮದಾಯಕ ಸವಾರಿ ಪ್ರಯಾಣಿಕನಿಗೆ ಸಿಗುತ್ತದೆ. ಹಾಗಾಗಿ ಇದನ್ನು ಸಣ್ಣ ಕಾರ್ ಎಂದು ಕರೆಯಲು ಸಾಧ್ಯವಾಗುವುದೇ ಇಲ್ಲ. 5 ಮಂದಿ ಆರಾಮಾಗಿ ಕೂರಬಹುದಾಗಿದೆ.

ಕಾರ್ನಲ್ಲಿನ ಸೆಂಟರ್ ಕನ್ಸೋಲ್ ಕೊಂಚ ಕೆಳಭಾಗಕ್ಕಿದೆ. ಆಡಿಯೊ ಸಿಸ್ಟಂ, ಎಸಿ ಮುಂತಾದ ಅನುಕೂಲಗಳನ್ನು ಬಳಸುವಾಗ ಕೊಂಚ ರಸ್ತೆಯಿಂದ ಕೆಳಕ್ಕೆ ನೋಡಬೇಕಾಗುತ್ತದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಡ್ಯಾಶ್ಬೋರ್ಡ್, ಬಾಗಿಲುಗಳಲ್ಲಿನ ಪೇಪರ್, ಬಾಟಲ್ ಹೋಲ್ಡರ್ಗಳಿಗೆ ಬಳಸಲಾಗಿರುವ ಪ್ಲಾಸ್ಟಿಕ್ನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬಹುದಿತ್ತು. ಆಗ ಮತ್ತಷ್ಟು ಲಕ್ಷುರಿ ಕಾರ್ಗೆ ಸಿಕ್ಕಿರುತ್ತಿತ್ತು. ಕಾರ್ನ ಸೀಟ್ಗಳಲ್ಲಿನ ಹೆಡ್ರೆಸ್ಟ್ ಅಗಲವಾಗಿದ್ದು, ತಲೆಗೆ ಆರಾಮದಾಯಕ ಎನಿಸುತ್ತದೆ. ಕಾರ್ನ ಒಳಗಿನ ಕ್ಯಾಬಿನ್ ದೀಪ ಅದಕ್ಕೆ ಬಳಕೆಯಾಗಿರುವ ಸ್ವಿಚ್ಗಳು ಮುದ ನೀಡುವಂತಿವೆ.

ಎಂಜಿನ್ ವಿಶೇಷ
1.5 ಲೀಟರ್ ಡೀಸೆಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೆರಿಟೊ ವೈಬ್ಗೆ ಸಿಕ್ಕಿದೆ. 4 ಸಿಲಿಂಡರ್ಗಳ 1461 ಸಿಸಿ ಎಂಜಿನ್ ಇದೆ. 63 ಬಿಎಚ್ಪಿ ಶಕ್ತಿ (4000 ಆರ್ಪಿಎಂ) ಇದ್ದು, ಸಣ್ಣ ಕಾರ್ಗೆ ಇದು ದೊಡ್ಡ ಶಕ್ತಿಯೇ ಆಗಿದೆ. ಹ್ಯಾಚ್ಬ್ಯಾಕ್ ಕಾರ್ಗೆ 1461 ಸಿಸಿ ಎಂಜಿನ್ ಇರುವುದು ಸಹ ದೊಡ್ಡ ವಿಚಾರವೇ. ಹಾಗಾಗಿ ಉತ್ತಮ ವೇಗ, ಎಳೆಯುವ ಸಾಮರ್ಥ್ಯ ಕಾರ್ಗೆ ಸಿಗುತ್ತದೆ. ಸರಾಗವಾಗಿ ಗರಿಷ್ಠ 120 ಕಿಲೋಮೀಟರ್ ವೇಗವನ್ನು ಮುಟ್ಟಬಲ್ಲ ಸಾಮರ್ಥ್ಯ ವೆರಿಟೊ ವೈಬ್ಗೆ ಇದೆ.

ಅತಿ ನಯವಾದ ಗಿಯರ್ ಬಾಕ್ಸ್ ಇದ್ದು, ಎಲ್ಲೂ ಕೊಂಚವೂ ತ್ರಾಸ ಚಾಲಕನಿಗೆ ಆಗದು. ಕಾರ್ ಸಹ ಉತ್ತಮ ಟಾರ್ಕ್ ಹೊಂದಿದ್ದು, ಎಲ್ಲ ರಸ್ತೆ ಸ್ಥಿತಿಗತಿಗಳಲ್ಲೂ ಆರಾಮಾಗಿ ಚಲಿಸುತ್ತದೆ. ಅಲ್ಲದೇ, ಮಹಿಂದ್ರಾ ವೆರಿಟೊ ವೈಬ್ ಅಷ್ಟೇನು ದುಬಾರಿ ಅಲ್ಲ. ಎಕ್ಸ್ ಶೋರೂಂ ಬೆಲೆ 5.63 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಆದರೆ ಇದು ಪಕ್ಕಾ ಖಾಸಗಿ ವಾಹನ. ಹಿಂದೆ ವೆರಿಟೊ ಅನ್ನು ಟ್ಯಾಕ್ಸಿಯಾಗಿ ಬಳಸುತ್ತಿದ್ದಂತೆ ಇದನ್ನು ಬಳಸುವುದು ಕಷ್ಟ. ಇದನ್ನು ಕಾಂಪ್ಯಾಕ್ಟ್ ಸ್ಪೇಷಿಯಸ್ ಕಾರ್ ಅನ್ನಬಹುದು. ಸಾಧಾರಣ ಗಾತ್ರದ ಕುಟುಂಬಗಳಿಗೆ ಹೇಳಿ ಮಾಡಿಸಿದ ಕಾರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.