ಹುಮನಾಬಾದ್: ಇಲ್ಲಿನ ಪ್ರವಾಸಿ ಮಂದಿರ–ಕೆಇಬಿ ಬೈಪಾಸ್ ವರೆಗಿನ ರಸ್ತೆ ವಿಭಜಕ ಮಧ್ಯೆ ದಶಕ ಹಿಂದೆ ಡಾಂಬರೀಕರಣ ರಸ್ತೆ ಮೇಲೆ ನೆಡಲಾದ ಗಿಡಗಳಿರುವ ಸ್ಥಳದಲ್ಲೇ ಸಸಿ ನೆಡಲು ಮುಂದಾಗಿರುವ ಅರಣ್ಯ ಇಲಾಖೆ ಕ್ರಮಕ್ಕೆ ಚುನಾಯಿತ ಪ್ರತಿನಿಧಿ ಹಾಗೂ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

2006–07ನೇ ಸಾಲಿನಲ್ಲಿ ರಸ್ತೆ ವಿಭಜಕ ಅಭಿವೃದ್ಧಿಪಡಿಸಿದ ನಂತರ ನಗರ ಸೌಂದರ್ಯ ದೃಷ್ಠಿಯಿಂದ ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಗಿಡಗಳನ್ನು ನೆಡಲಾಗಿತ್ತು. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಬೆಳೆದ ಸಸಿಗಳು ಕ್ರಮೇಣ ಒಣಗಲು ಆರಂಭಿಸಿದವು. ಸಸಿ ನೆಟ್ಟ ದಶಕ ಅವಧಿಯಲ್ಲಿ ನಗರ ಸೌಂದರ್ಯ ಜೊತೆಗೆ ಸಾರ್ವಜನಿಕರಿಗೆ ನೆರಳು ನೀಡಬೇಕಾದ ಗಿಡಗಳ ಪೈಕಿ ಶೇ 75ರಷ್ಟು ಗಿಡಗಳು ಸಂಪೂರ್ಣ ಒಣಗಿ ಹೋಗಿರುವುದಲ್ಲದೇ ಗಿಡಗಳ ರಕ್ಷಣೆಗಾಗಿ ಅಳವಡಿಸಿದ್ದ ಕವಚಗಳು ಕಿತ್ತುಹೋಗಿವೆ.

ಇದೇ ವಿಭಜಕದಲ್ಲಿ ಹೊಸದಾಗಿ ಗಿಡನೆಟ್ಟು ಅಭಿವೃದ್ಧಿಪಡಿಸಲು ಚುನಾಯಿತ ಪ್ರತಿನಿಧಿಗಳು ಮುಂದಾದಾಗ 2012–13ನೇ ಸಾಲಿನಲ್ಲಿ ಪ್ರಾದೇಶಿಕ ಸಹಾಯಕ ಅರಣ್ಯ ಅಧಿಕಾರಿ ಎ,ಬಿ.ಪಾಟೀಲ ವಿಭಜಕ ತಳಪಾಯದಲ್ಲಿ ಡಾಂಬರೀಕರಣ ಇರುವ ಕಾರಣ ಗಿಡಗಳ ಸಮರ್ಪಕ ಬೆಳವಣಿಗೆ ಆಗುವುದಿಲ್ಲ. ಅದನ್ನು ಸಂಪೂರ್ಣ ಅಗೆದು ನಂತರವೇ ನೆಡುವುದು ಸೂಕ್ತ ಎಂದು ಸಲಹೆ ನೀಡಿದ್ದರಿಂದ ಗಿಡ ನೆಡುವ ಯೋಚನೆ ಆ ವೇಳೆ ಕೈಬಿಡಲಾಗಿತ್ತು ಎಂದು ಪುರಸಭೆ ಸದಸ್ಯ ಅಪ್ಸರಮಿಯ್ಯ ಹೇಳುತ್ತಾರೆ.

ಆದರೇ ಈಗಿನ ಅಧಿಕಾರಿ ಎಂ.ಎಂ.ಚಿಕ್ಕಮಠ್ ಅವರು ಹಸಿರು ನಗರವಾಗಿಸುವ ಸದುದ್ದೇಶದಿಂದ ನಗರದಲ್ಲಿ 5ಸಾವಿರ ಗಿಡ ನೆಡುವ ಗುರಿ ಹೊಂದಿದ್ದಾರೆ. ಪಟ್ಟಣದ ವಿವಿಧೆಡೆ ಗಿಡ ನೆಡುವುದರ ಜತೆಗೆ ರಸ್ತವಿಭಜಕ ಮಧ್ಯದಲ್ಲೂ ಗಿಡ ನೆಡುವುದಕ್ಕಾಗಿ ಈಗಾಗಲೇ ಗುಂಡಿ ತೋಡಿಸುವ ಕಾರ್ಯ ಆರಂಭಿಸಿದ್ದಾರೆ. ಆದರೇ ಸಸಿಗಳು ಬೆಳೆಯಲು ಯೋಗ್ಯವಲ್ಲದ ಸ್ಥಳದಲ್ಲಿ ಸಸಿ ನೆಡುವುದಕ್ಕಾಗಿ ಹಣ, ಶ್ರಮ ವ್ಯರ್ಥವಾಗಿಸದೇ ಶೀಘ್ರದಲ್ಲೇ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಗಿಡ ಬೆಳೆಸುವುದು ಸೂಕ್ತ ಎಂದು ಸದ್ಯ ಗಿಡ ನೆಡದಿರುವಂತೆ ಸಲಹೆ ನೀಡಿದ್ದಾರೆ.

ಹುಮನಾಬಾದ್ ಪ್ರವಾಸಿ ಮಂದಿರದಿಂದ ಕೆಇಬಿ ಬೈಪಾಸ್ ವರೆಗೆ ವಿಭಜಕ ಸ್ಥಳದಿಂದ ಎರಡು ಬದಿಗೆ 70ಅಡಿ ತೆರವು ಕಾರ್ಯಾಚರಣೆ ಕೈಗೊಳ್ಳಲು ಯೋಜನೆ ರೂಪುಗೊಂಡಿದೆ. ಅದಕ್ಕಾಗಿ ಅಅಗತ್ಯ ಅನುದಾನ ಕೂಡ ಬಂದಿದೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಕಾರ್ಯ ಆರಂಭಗೊಳ್ಳುವ ಕಾರಣ ಸದ್ಯ ಆ ಸ್ಥಳದಲ್ಲಿ ಸಸಿ ನೆಡುವುದನ್ನು ಕೈಬಿಡಬೇಕು ಎನ್ನುವುದು ಅಪ್ಸರಮಿಯ್ಯ ಸೇರಿದಂತೆ ಅನೇಕ ಪರಿಸರ ಪ್ರಿಯರು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದಾರೆ.

ಮುಖ್ಯಾಂಶಗಳು
* ದಶಕದ ಹಿಂದೆ ನೆಟ್ಟ ಸಸಿಗಳು
* ಡಾಂಬರೀಕರಣ ರಸ್ತೆ ಮೇಲೆ ಸಸಿ
* ಹಾನಿಗೆ ಅವೈಜ್ಞಾನಿಕ ವಿಧಾನ ಕಾರಣ

ಮುಖ್ಯ ರಸ್ತೆ ವಿಭಜಕದಲ್ಲಿ ದಶಕದ ಹಿಂದೆ ನೆಟ್ಟ ಸಸಿಗಳನ್ನು ಅವೈಜ್ಞಾನಿಕ ವಿಧಾನದಲ್ಲಿ ನೆಡಲಾದ ಕಾರಣ ಸಂಪೂರ್ಣ ನಾಶವಾಗಿವೆ
ಅಪ್ಸರಮಿಯ್ಯ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.