ರಾಮಾಪುರ: ಚಾಮರಾಜನಗರ ಜಿಲ್ಲೆಯ ಮಹಾತ್ವಾಕಾಂಕ್ಷಿ ನೀರಾವರಿ ಯೋಜನೆಗಳಲ್ಲಿ ಒಂದಾದ ಮಿನ್ನತ್ತಳ್ಳ ಕೆರೆ (ಯರಂಬಡಿ ಡ್ಯಾಂ) ಹಳ್ಳಹಿಡಿದಿದೆ.

ಇದು ಯರಂಬಡಿ ಮತ್ತು ಹೂಗ್ಯಂ ಗ್ರಾಮಗಳ ವ್ಯಾಪ್ತಿಯಲ್ಲಿದ್ದು, ಮೂವತ್ತು ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಗುಂಡುರಾವ್ ಹಾಗೂ ಶಾಸಕರಾಗಿದ್ದ ರಾಜುಗೌಡ ಪರಿಶ್ರಮ ದಿಂದ ಶಿಲಾನ್ಯಾಸ ನೆರವೇರಿಸ ಲಾಯಿತು. ಇದರ ಮೇಲ್ವಿಚಾರಣೆ ಯನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದೆ.

ಜಲಾಶಯದ ನಿರ್ಮಾಣ ಕಾರ್ಯ ಮುಗಿದು ದಶಕಗಳೇ ಕಳೆದಿವೆ. 4 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪ್ರಾರಂಭವಾದ ಈ ಯೋಜನೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ಕಾಲುವೆ ಕಾಮಗಾರಿ ಪೂರ್ಣವಾಗಿಲ್ಲ.

ಇದು ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ದುಸ್ಥಿತಿ. ಯೋಜನೆ ಯಶಸ್ವಿಯಾಗಿ ಜನರ ಜಮೀನುಗಳಿಗೆ ನೀರು ಹಾಯಿಸಬೇಕಾದರೆ ಮತ್ತೆ ಕೋಟಿ, ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ. ಬಲದಂಡೆ ನಾಲೆ 6 ಕಿ.ಮೀ. ಮತ್ತು ಎಡದಂಡೆ ನಾಲೆ 12 ಕಿ.ಮೀ. ಉದ್ದ ಇದ್ದು ಉಪ ಯೋಗಲ್ಲದೆ ನೀರು ಪೋಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಜನರಿಗೆ ಆಗಿಲ್ಲ.

ಮೀನುಗಾರಿಕೆಯನ್ನು ಮಾಡಲಾ ಗುತ್ತಿದೆ. ಆದರೆ ಅವರ್ಯಾರು ಈ ವಿಷಯ ಗೊತ್ತಿಲ್ಲವೆಂದು ಸ್ಥಳೀಕರು ಹೇಳುತ್ತಾರೆ.

ಸ್ಥಳೀಯರಾದ ಗೋವಿಂದೇಗೌಡ, ನಿಂಗೇಗೌಡ, ನೆಲ್ಲೂರು, ಕೂಡ್ಲೂರು ಸುತ್ತಮುತ್ತಲಿನ ಗ್ರಾಮಸ್ಥರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸುತ್ತಲಿನ ಪ್ರದೇಶದ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಹಾಗೂ ಜನರ ಕನಸನ್ನು ನನಸಾಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.