ಶುಕ್ರವಾರ, ಏಪ್ರಿಲ್ 16, 2021
30 °C

ಹವಾಮಾನ ಚರ್ಚೆಯಲ್ಲೂ ಲಿಂಗ ತಾರತಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಹವಾಮಾನ ಕುರಿತಂತೆ ಜಾಗತಿಕವಾಗಿ ಇದುವರಗೆ ನಡೆದ ಚರ್ಚೆಗಳಲ್ಲಿ ಲಿಂಗ-ತಾರತಮ್ಯ ನಡೆದಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.ಜಾಗತಿಕ ತಾಪಮಾನ ಏರಿಕೆ ಕುರಿತಂತೆ ಮಹಿಳೆಯರು ಎತ್ತುತ್ತಿರುವ ಧ್ವನಿಗೆ ಪ್ರಾಮುಖ್ಯತೆ ಸಿಗದೇ ಇರುವುದರ ಬಗ್ಗೆ  ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಲಂಡನ್‌ನ ರಾಯಲ್ ಕಾಮನ್‌ವೆಲ್ತ್ ಸೊಸೈಟಿಯಲ್ಲಿ ಗುರುವಾರ ರಾತ್ರಿ ನಡೆದ ಕಾಮನ್‌ವೆಲ್ತ್ ಉಪನ್ಯಾಸ-2011ಕಾರ್ಯಕ್ರಮದಲ್ಲಿ ‘ಬದಲಾವಣೆಯ ಪ್ರತಿನಿಧಿಗಳಾಗಿ ಮಹಿಳೆಯರು’ ಎಂಬ ವಿಷಯದ ಕುರಿತು ಮಾತನಾಡಿದ ಸೋನಿಯಾ ಗಾಂಧಿ, ‘ಹವಾಮಾನ ವಿಷಯಕ್ಕೆ  ಸಂಬಂಧಿಸಿದ ನ್ಯಾಯ ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಮಾತ್ರವಲ್ಲ, ಲಿಂಗ ತಾರತಮ್ಯ ರಹಿತವಾಗಿಯೂ ಅದು ಇರಬೇಕು ಎಂದು ಬಯಸುತ್ತೇವೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.