ಮಂಗಳವಾರ, ಆಗಸ್ಟ್ 11, 2020
24 °C

ಹಸಿರು ಸೇನೆ ಗ್ರಾಮೀಣ ಘಟಕ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸಿರು ಸೇನೆ ಗ್ರಾಮೀಣ ಘಟಕ ಉದ್ಘಾಟನೆ

ರಾಣೆಬೆನ್ನೂರು: ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರಯೇ ಹೊರತು ರೈತರ ಏಳಿಗೆಯ ಬಗ್ಗೆ ಕಾಳಜಿ ಇಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಆರೋಪಿಸಿದರು.

ತಾಲ್ಲೂಕಿನ ಕೂಲಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ರೈತ ಮಹಿಳೆ ರೇಣುಕಮ್ಮ ಲಿಂಗರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಬಸವಣ್ಣೆಪ್ಪ ನಲವಾಗಿಲ, ಜಯಣ್ಣ ಮಾಗನೂರು, ಮಲ್ಲಮ್ಮ ರುದ್ರಪ್ಪನವರ, ಆನಂದಚಾರಿ ಜ. ಕಮ್ಮಾರ, ಎಂ.ಎಸ್. ಪಾಟೀಲ, ಹುಸೇನ್‌ಸಾಬ್ ಪಾಟೀಲ,

 

ಚಿಕ್ಕರಡ್ಡಿ ಸುತ್ತಕೋಟಿ, ಚಂದ್ರಪ್ಪ ಹಿತ್ತಲಮನಿ, ಆನಂದಪ್ಪ ಸಣ್ಣಗೂಳಪ್ಪನವರ, ಗೌಸ್‌ಖಾನ್ ಕುಲಕರ್ಣಿ, ಬಿ.ಜಿ.ಲಿಂಗರಡ್ಡಿ, ಆರ್.ಎಚ್.ತಾವರೆ, ಆರ್.ಎಂ. ಅಂಗಡಿ, ಸಿ.ಬಿ. ತೋಟದ,ನಿಂಗಪ್ಪ ಹರಿಜನ ಮುತ್ತಿತರರು ಉಪಸ್ಥಿತರಿದ್ದರು. ಅಬ್ದುಲ್‌ಸಾಬ್ ಮುಲ್ಲಾ ಸ್ವಾಗತಿಸಿದರು. ಜಿ.ಬಿ. ಭೂತಣ್ಣನವರ ಕಾರ್ಯಕ್ರಮ ನಿರೂಪಿಸಿದರು, ಉಮೇಶ ಕುಪ್ಪೇಲೂರು ವಂದಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.