ಭಾನುವಾರ, ಜನವರಿ 19, 2020
28 °C

ಹಾಕಿ: ಎಂಇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸೂರ್ಯ ಮುಳುಗುವ ಸಮಯಕ್ಕೆ ಇನ್ನೇನು ಅರ್ಧ ತಾಸು ಬಾಕಿ ಇತ್ತು. ಆಗಲೇ ಕೆಬಿಎನ್‌ ಮೈದಾನದಲ್ಲಿ ಎಂಇಜಿ ಸ್ಪೋರ್ಟ್ಸ್‌ ಸೆಂಟರ್‌ ಬೆಂಗಳೂರು ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು.ಎಂಇಜಿ ತಂಡದವರು ಖ್ವಾಜಾ ಬಂದೇ ನವಾಜ್‌ ಹಾಕಿ ಗೋಲ್ಡ್‌ ಕಪ್‌ ಲೀಗ್‌ ಹಾಕಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.ಇಲ್ಲಿನ ಖ್ವಾಜಾ ಎಜುಕೇಷನ್‌ ಸೊಸೈಟಿ ಹಾಗೂ ಖ್ವಾಜಾ ಬಂದೇ ನವಾಜ್‌ ಹೌಸ್ ಆಫ್‌ ಸ್ಪೋರ್ಟ್ಸ್‌ ಭಾನುವಾರ ನಡೆದ ಫೈನಲ್‌ನಲ್ಲಿ 2–1 ಗೋಲುಗಳಿಂದ ಎಂ.ಪಿ ಹಾಕಿ ಅಕಾಡೆಮಿ ಭೂಪಾಲ್‌ ತಂಡವನ್ನು ಮಣಿಸಿ ಈ ಸಾಧನೆ ಮಾಡಿದರು.ಬೆಂಗಳೂರು ತಂಡವು ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿತು.ವಿಜಯೀ ತಂಡದ ಆಟಗಾರ ಎಸ್‌.ಅಜಯ್‌ (16ನೇ ನಿಮಿಷ) ಮೊದಲ ಗೋಲು ಗಳಿಸಿದರು.  ಭೂಪಾಲ್‌ ತಂಡದ ಅರ್ಜುನ ಶರ್ಮ ವಿರಾಮದ ನಂತರ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು. ಆದರೆ 53ನೇ ನಿಮಿಷದಲ್ಲಿ ಎಸ್‌.ಅಜಯ್‌ ತಂದಿತ್ತ ಗೋಲು ಎಂಇಜಿ ಗೆಲುವಿಗೆ ಕಾರಣವಾಯಿತು.ಬೆಂಗಳೂರು ತಂಡದ ಅಜಯ್‌ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಪ್ರಶಸ್ತಿ ಆರ್‌.ಪುಲ್ಲಯ್ಯ ಪಾಲಾಯಿತು.ಉತ್ತಮ ಗೋಲ್‌ ಕೀಪರ್‌ ಪ್ರಶಸ್ತಿಯನ್ನು ಗುಲ್ಬರ್ಗ ಜಿಲ್ಲಾ ಹಾಕಿ ಸಂಸ್ಥೆ ತಂಡದ ಬಸವರಾಜ್‌ಗೂ, 35 ಗೋಲು ಗಳಿಸಿದ ಅಭಿ ಫೌಂಡೇಷನ್‌ ಮುಂಬೈ ತಂಡದ ಆಟಗಾರ ಮೆಹುಲ್‌ ಕದಂ ಗೆ ನೀಡಲಾಯಿತು.

ಪ್ರತಿಕ್ರಿಯಿಸಿ (+)