ಭಾನುವಾರ, ಜೂನ್ 20, 2021
28 °C

ಹಾಕಿ: ಚಂಡೀಗಡಕ್ಕೆ ಮಣಿದ ಪಂಜಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): ಆರಂಭದಿಂದ ಪ್ರಭುತ್ವ ಮೆರೆದ ಆತಿಥೇಯ ಚಂಡೀಗಡ ತಂಡದವರು ಇಲ್ಲಿ ನಡೆದ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಚಂಡೀಗಡ 3-1ಗೋಲುಗಳಿಂದ ಶೇರ್-ಎ-ಪಂಜಾಬ್ ತಂಡವನ್ನು ಸೋಲಿಸಿತು.ವಿಜಯಿ ತಂಡದ ಗುರ್ಜಿಂದರ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಾದ ಏಳು ನಿಮಿಷಗಳ ಅಂತರದಲ್ಲಿ ಸುಕ್ವಿಂದರ್ ಸಿಂಗ್ ಗಬ್ಬರ್ ಗೋಲು ಕಲೆ ಹಾಕಿದರು. ಇದರಿಂದ ಚಂಡೀಗಡ ವಿರಾಮದ ವೇಳೆಗೆ 2-0ರಲ್ಲಿ ಮುನ್ನಡೆ ಸಾಧಿಸಿತ್ತು.ನಂತರ ತಿರುಗೇಟು ನೀಡಿದ ಪಂಜಾಬ್ ತಂಡದ ಎಚ್. ಮ್ಯಾಥೂ 59ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ವೇಳೆ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಆದರೆ, ಗುರ್ಜಿಂದರ್ 65ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಇನ್ನೊಂದು ಸಲ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಆಗ ಚಂಡೀಗಡ ಪಾಳೆಯದಲ್ಲಿ ವಿಜಯದ ಸಂಭ್ರಮ!.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.