ಭಾನುವಾರ, ಮೇ 9, 2021
20 °C

ಹಾಕಿ: ಭಾರತಕ್ಕೆ ಮತ್ತೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಆಟಗಾರ್ತಿಯರು ನ್ಯೂಜಿಲೆಂಡ್‌ನ ಪಕುರಂಗಾದಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ನಡುವಣ ಮಹಿಳಾ ಹಾಕಿಯ ಎರಡನೇ ಹಂತದ ಟೂರ್ನಿಯಲ್ಲಿ ಸತತವಾಗಿ ಎರಡನೇ ಪಂದ್ಯದಲ್ಲೂ ಸೋಲನುಭವಿಸಿದರು.ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು 5-2 ಗೋಲುಗಳಿಂದ ಭಾರತವನ್ನು ಸೋಲಿಸಿತು.

ಆಸ್ಟ್ರೇಲಿಯ ಎರಡನೆ ನಿಮಿಷದಲ್ಲೇ ಷುಲ್ಜ್ ಅವರು ತಂದಿತ್ತ ಗೋಲಿನಿಂದ ಮುನ್ನಡೆ ಸಾಧಿಸಿತು. ಇದಾಗಿ ಹತ್ತನೇ ನಿಮಿಷದಲ್ಲಿ ಬೋಯ್ಸ ಮುನ್ನಡೆಯನ್ನು 2-0 ಗೋಲುಗಳಿಗೆ ಏರಿಸಿದರು. ನೆಲಕಚ್ಚಿ ಆಡಿದ ಭಾರತ ತಂಡದ ಪರ 13ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ್ತಿ ರಾಣಿ ಗೋಲು ತಂದಿತ್ತು ಅಂತರವನ್ನು 1-2ಕ್ಕೆ ಇಳಿಸಿದರು. ಆದರೆ ಆಸ್ಟ್ರೇಲಿಯಾಕ್ಕೆ 28ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಷುಲ್ಜ್ ಗುರಿ ತಪ್ಪಲಿಲ್ಲ.ಉತ್ತರಾರ್ಧದ ಆರಂಭದಿಂದಲೂ ಭಾರತ ದಾಳಿಗಿಳಿಯಿತು. ಆದರೆ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಮಾತ್ರ ಯಶಸ್ಸು ಗಳಿಸಲಿಲ್ಲ. ವಿರಾಮದ ವೇಳೆಗೆ 3-1ಗೋಲುಗಳಿಂದ ಮುಂದಿದ್ದ ಆಸ್ಟ್ರೇಲಿಯ, ಉತ್ತರಾರ್ಧದಲ್ಲಿ ಇನ್ನೂ 2ಗೋಲುಗಳನ್ನು ಗಳಿಸಿತು. ನೆಲ್ಸನ್ ಮತ್ತು ನ್ಯಾನ್‌ಸ್ಕಾವೆನ್ ತಂದಿತ್ತ ಈ ಎರಡು ಗೋಲುಗಳು ಭಾರತದ ಆಟಗಾರ್ತಿಯರ ಆತ್ಮವಿಶ್ವಾಸವೇ ಕುಸಿಯುವಂತೆ ಮಾಡಿತು.ಆದರೆ 63ನೇ ನಿಮಿಷದಲ್ಲಿ ಭಾರತಕ್ಕೆ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅಸುಂತಾ ಲಾಕ್ರ ನೀಡಿದ ಚೆಂಡನ್ನು ಪೂನಮ್ ಗುರಿ ತಲುಪಿಸಿದರು.ಭಾರತ ಶನಿವಾರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.