ಮಂಗಳವಾರ, ಏಪ್ರಿಲ್ 20, 2021
24 °C

ಹಾರಂಗಿ ನಾಲೆ ಆಧುನೀಕರಣಕ್ಕೆ ಒಪ್ಪಿಗೆ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಹಾರಂಗಿ ಎಡದಂಡೆ ಮತ್ತು ಬಲದಂಡೆ ನಾಲೆಯ ಒಟ್ಟು 34 ಕಿ.ಮೀ ಆಧುನೀಕರಣಗೊಳಿಸಲು  ಹಾರಂಗಿ ಸಲಹಾ ಸಮಿತಿ ಸಭೆಯಲ್ಲಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಎಚ್.ಪಿ. ಮಂಜು ನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಹಾರಂಗಿ ಸಲಹಾ ಸಮಿತಿ ಸಭೆಯಲ್ಲಿ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಒಳಗೊಂಡಂತೆ ಶಾಸಕರಾದ ಸಾ.ರಾ.ಮಹೇಶ್, ಕೆ.ವೆಂಕಟೇಶ್ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಜರಿದ್ದು. ಹಾರಂಗಿ ನಾಲೆ ಅವ್ಯವಸ್ಥೆ ಕುರಿತು ನೀರಾವರಿ ಸಚಿವರ ಗಮನಕ್ಕೆ ತಂದು ಆಧುನಿಕರಣಗೊಳಿ ಸುವ ಬಗ್ಗೆ ಚರ್ಚಿಸಲಾಯಿತು, ಸಚಿವ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಅಂದಾಜು ಪಟ್ಟಿ ಸಲ್ಲಿಸಲು ಸೂಚಿಸಿ ದರು ಎಂದು ತಿಳಿಸಿ ್ದದಾರೆ.ಹನಗೋಡು ನಾಲೆಗೆ 5 ಕೋಟಿ : ಎರಡು ವರ್ಷದ ಧಾರಾಕಾರ ಮಳೆ ಸುರಿದು ಹಾನಿಗೊಳಗಾದ ಹನ ಗೋಡು ಅಣೆಕಟ್ಟೆ ಹಾಗೂ ಮುಖ್ಯನಾಲೆಗಳ ದುರಸ್ತಿಗೆ ಸರ್ಕಾರ ರೂ.5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಹನಗೋಡು ಅಣೆಕಟ್ಟೆ ನಾಲೆ ಸಂಪೂರ್ಣ ದುರಸ್ತಿಗೊಳಿಸಲು ಸರ್ಕಾರಕ್ಕೆ ರೂ 12.5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.  ಪ್ರಥಮ ಹಂತದಲ್ಲಿ 5 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಅಗತ್ಯ ಕಾಮಗಾರಿಯನ್ನು ಅಲ್ಪಾವಧಿ  ಟೆಂಡರ್ ಕರೆದು ಕಾಮಗಾರಿ ನಡೆಸಲು ಸಂಬಂಧಿಸಿದ ಎಂಜಿನಿಯರ್‌ಗೆ ಸಚಿವರು ಸೂಚಿಸಿದ್ದಾರೆ.ಅಭಿನಂದನೆ: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ಸೇರುವ ಹಾರಂಗಿ ನೀರಾವರಿ ಮತ್ತು  ಹನಗೋಡು ಅಣೆಕಟ್ಟೆ ನಾಲೆ ಅಧುನಿಕರಣ ಮತ್ತು ದುರಸ್ತಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿರುವ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ತಾಲೂಕಿನ ಜನತೆಯ ಪರವಾಗಿ ಅಭಿನಂದಿಸಿದ್ದಾರೆ.ಜನಸ್ಪಂದನ ಸಭೆ ನಾಳೆ

ಸ್ಥಳಿಯ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಮಾ.5ರಂದು ಶನಿವಾರ ಕಸಬ ಹೋಬಳಿ ಮಟ್ಟದ ಜನಸ್ಪಂದನ ಕಾರ್ಯಕ್ರಮ ಪಟ್ಟಣದ ಶಿಕ್ಷಕರ ಭವನದಲ್ಲಿ ಬೆಳಗ್ಗೆ 11ಗಂಟೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಲೋಕನಾಥ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.