ರಾಮನಾಥಪುರ: ಇಲ್ಲಿನ ಹಾರಂಗಿ ಪುನರ್ವಸತಿ ಉಪ ವಿಭಾಗ 2ರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಒಂದೇ ಕಾಮಗಾರಿಗೆ ಎರಡು ಬೇರೆ ಬೇರೆ ಇಲಾಖೆಗಳಿಂದ ಹಣ ಪಡೆದು ವಂಚಿಸುವ ಹುನ್ನಾರವೊಂದು ಬೆಳಕಿಗೆ ಬಂದಿದೆ.

ಈ ಹಿಂದೆ ಮೊದಲ ಬಾರಿಗೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಉದ್ಯೋಗ ಖಾತರಿ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಈಗಾಗಲೇ ಕೆಲವು ಕಡೆ ರಸ್ತೆ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ರಾಮನಾಥಪುರ ಹಾರಂಗಿ ಪುನ ರ್ವಸತಿ ಉಪ ವಿಭಾಗದ ಎಂಜಿನಿಯರುಗಳು ಮತ್ತೆ ಅದೇ ಕಾಮಗಾರಿ ಗಳನ್ನು ಹೆಸರು ಬದಲಾ ಯಿಸಿ ಟೆಂಡರ್ ಅಧಿಸೂಚನೆ 28/2011-12, ದಿನಾಂಕ 23.12.2011ರಂದು ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಯೋಜನೆ ಹಣ ದುರ್ಬಳಕೆ ಮಾಡಿಕೊಳ್ಳಲು ಹುನ್ನಾರ ನಡೆಸಿರು ವುದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜೀವೇಗೌಡ, ಲಕ್ಕೂರು ದೇವರಾಜೇಗೌಡ ಇತರರು ಪಿರಿಯಾಪಟ್ಟಣ ಏತ ನೀರಾವರಿ ಯೋಜನೆ ಹಾಗೂ ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶಕ್ಕೆ ಪತ್ರಕರ್ತರನ್ನು ಕರೆದೊಯ್ದು ಈಗಾಗಲೇ ಉದ್ಯೋಗ ಖಾತರಿ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಸಿರುವ ಕೆಲವು ರಸ್ತೆ ಕಾಮಗಾರಿಗಳನ್ನು ತೋರಿಸಿದರು.

ಇದಲ್ಲದೇ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಇನ್ನು ಕೆಲವು ಕಡೆ ನಡೆದಿದೆ ಎನ್ನಲಾದ ಕಾಮಗಾರಿಗಳು ಆಯ್ಕೆ ಪಟ್ಟಿಯಲ್ಲಿ ಸೇರಿಕೊಂಡಿವೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಇವುಗಳಿಗೆ ಪ್ರತ್ಯೇಕ ವಾದ ಅನುದಾನ ಬರುತ್ತದೆ.

ಆದರೂ ಒಂದೇ ಕಾಮಗಾರಿಯನ್ನು ಬೇರೆ ಬೇರೆ ಇಲಾಖೆಯವರು ನಿರ್ವಹಿಸಿರುವ ಬಗ್ಗೆ ಯಾವುದೇ ಪರಿಶೀಲನೆ ಮಾಡದೇ ಸಂಬಂಧಿಸಿದ ಎಂಜಿನಿಯರುಗಳು 2011-12ನೇ ಸಾಲಿನಲ್ಲಿ ಇಲಾಖೆ ವತಿಯಿಂದ ಬಿಡುಗಡೆ ಮಾಡಿರುವ ಅನುದಾನಕ್ಕೆ ಅನುಗುಣ ವಾಗಿ ಕಾಮಗಾರಿಗೆ ಸಂಬಂಧಿಸಿದಂತೆ ಅಕ್ರಮ ಅಂದಾಜು ಪಟ್ಟಿ ತಯಾರಿಸಿ ಯೋಜನೆ ಮುಗ್ಗರಿ ಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದರಿಂದ ಸದರಿ ಟೆಂಡರ್ ಪ್ರಕ್ರಿಯೆ ಪಾರ ದರ್ಶಕವಾಗಿಲ್ಲ ಎಂಬುದು ಮೇಲು ನೋಟಕ್ಕೆ ಸಾಬೀತಾಗಿದೆ. ಅಲ್ಲದೇ ಆಯ್ಕೆಪಟ್ಟಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ನಂಜುಂಡೇಗೌಡ ಅವರೇ ರಾಮನಾಥಪುರ ಪುನರ್ವಸತಿ ಉಪ ವಿಭಾಗ 2ರ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಕೆ.ಎಚ್. ಜಾಲಿಹಾಳ್, ಸಹಾಯಕ ಎಂಜಿನಿಯರ್ ಎ.ಡಿ. ಜಯರಾಂ ಅವರೊಂದಿಗೆ ಶಾಮೀಲಾಗಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ಸದರಿ ಟೆಂಡರ್ನ್ನು ರದ್ದುಗೊಳಿಸುವಂತೆ ಈಗಾಗಲೇ ಮೈಸೂರಿನ ಕಾಡಾ ಅಧೀಕ್ಷಕ ಅಭಿಯಂತರರು ಹಾಗೂ ಸರ್ಕಾ ರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡ ಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋ ಜನ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಮನಾಥಪುರ ಪುನರ್ವಸತಿ ಉಪ ವಿಭಾಗ 2ರ ಲಕ್ಕೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆಯ್ಕೆ ಪಟ್ಟಿಗೆ ಸೇರಿದ 48 ಕಾಮಗಾರಿಗಳನ್ನು ಮಾಹಿತಿ ಹಕ್ಕು ಕಾಯ್ದಿಯಡಿ ದಾಖಲೆಗಳನ್ನು ಪಡೆದು ಪರಿಶೀಲಿಸಿ ದಾಗ ಈ ಅಕ್ರಮ ಬಯಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆಲ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಇನ್ನು ಕೆಲವೆಡೆ ಅಪೂರ್ಣಗೊಂಡಿರುವುದು ಕಂಡುಬಂತು. ಅಲ್ಲದೇ ಎಂಜಿನಿಯರ್ ಅದೇ ಕಾಮಗಾರಿಗೆ ಹೆಸರು ಬದಲಾವಣೆ ಮಾಡಿ ಉತ್ತಮ ಸ್ಥಿತಿಯಲ್ಲಿರುವ ರಸ್ತೆಗಳನ್ನೇ 600ರಿಂದ 700 ಮೀ. ವರೆಗೆ ರೂ. 4ರಿಂದ 4.5 ಲಕ್ಷದವರೆಗೆ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಇದಲ್ಲದೇ ಕೆಲವು ಪ್ರಭಾವಿ ಗುತ್ತಿಗೆದಾರರಲ್ಲಿ ಒಬ್ಬರಿಗೇ 2 ರಿಂದ 5 ಕಾಮಗಾರಿಗಳನ್ನು ವಹಿಸಲಾಗಿದೆ ಎಂದು ಅವರು ದೂರಿದರು.

ತಾಲ್ಲೂಕಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಅವ್ಯವಹಾರದ ವಿರುದ್ದ ಕ್ರಮ ಜರುಗಿ ಸುವಂತೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ನಡೆಸಿದ್ದ ಹೋರಾಟವನ್ನೂ ಸಹ ಇಲ್ಲಿ ಸ್ಮರಿಸಬಹುದು. ಅದರ ಫಲವಾಗಿ ಅಕ್ರಮ ನಡೆದಿದ್ದ ಕೆಲವು ಕಾಮಗಾರಿಗಳಿಗೆ ಬಿಲ್ ಪಾವತಿಯಾಗದೇ ಸ್ಥಗಿತಗೊಂಡಿವೆ. ಇದಲ್ಲದೇ ಕೆಲಸ ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ. ಹಾರಂಗಿ ಪನರ್ವಸತಿ ವಿಭಾಗದ ಎಂಜಿನಿಯರುಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಕ್ರಮ ಆಯ್ಕೆ ಪಟ್ಟಿ ತಯಾರಿಸಿ ಲಕ್ಷಾಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಅವರು ದೂರಿದರು.

ಕುಶಾಲನಗರ ಹಾರಂಗಿ ಪುನರ್ವಸತಿ ವಿಭಾಗ ವ್ಯಾಪ್ತಿಯಲ್ಲಿ ಇಂತಹ ಅಕ್ರಮಗಳು ಕೆಲ ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಇದಕ್ಕೆಲ್ಲಾ ಪುನರ್ವಸತಿ ಉಪ ವಿಭಾಗದ ಎಂಜಿನಿಯರುಗಳೇ ನೇರ ಹೊಣೆ.

ಸರ್ಕಾರದ ನೀತಿ- ನಿಯಮಗಳನ್ನು ಗಾಳಿಗೆ ತೂರಿ ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೇಕಾಬಿಟ್ಟಿ ಅಂದಾಜು ಪಟ್ಟಿ ರೂಪಿಸಿ ಗೌಪ್ಯವಾಗಿ ಟೆಂಡರ್ ಅಧಿಸೂಚನೆ ಹೊರಡಿಸಿ ಅರ್ಜಿ ವಿತರಿಸಲಾಗುತ್ತಿದೆ. ಸಂಬಂಧ ಪಟ್ಟ ಮೇಲಾಧಿಕಾರಿಗಳು ತಕ್ಷಣ ಅನುಮೋದನೆ ಪಡೆದ ಸದರಿ ಆಯ್ಕೆ ಪಟ್ಟಿ ತಡೆ ಹಿಡಿಯಬೇಕು ಎಂದು ಸಂಜೀವೇಗೌಡ ಒತ್ತಾಯಿಸಿದರು.

ಲೋಕಾಯುಕ್ತಕ್ಕೆ ದೂರು: ಲಕ್ಕೂರು ಗ್ರಾ.ಪಂ. ವ್ಯಾಪ್ತಿ ಸದರಿ ಆಯ್ಕೆ ಪಟ್ಟಿಯಲ್ಲಿ ಸೇರಿರುವ 40 ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ರಾಮನಾಥ ಪುರ ಪುನರ್ವಸತಿ ಉಪ ವಿಭಾಗ 2ರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಚ್. ಜಾಲಿಹಾಳ್, ಸಹಾಯಕ ಎಂಜಿನಿಯರ್ ಎ.ಡಿ. ಜಯರಾಂ ವಿರುದ್ದ ಕ್ರಮ ಜರುಗಿಸುವಂತೆ ಈಗಾಗಲೇ ಲೋಕಾಯುಕ್ತ ಪೊಲೀಸರಿಗೂ ದೂರು ನೀಡಲಾಗಿದೆ ಎಂದು ಲಕ್ಕೂರಿನ ದೇವರಾಜೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.