ಹಾಲುಮತಕ್ಕೆ ಸಂಘಟನೆ ಬೇಕು: ತೋಂಟದ ಶ್ರೀ

7

ಹಾಲುಮತಕ್ಕೆ ಸಂಘಟನೆ ಬೇಕು: ತೋಂಟದ ಶ್ರೀ

Published:
Updated:

ದೇವದುರ್ಗ: ಕನಕದಾಸರಂಥ ಮಹಾನ್ ವ್ಯಕ್ತಿಯನ್ನು ನೀಡಿದ ಹಾಲುಮತ ಜನಾಂಗ ಇಂದಿಗೂ ಅವಕಾಶ ವಂಚಿತ ಪಂಗಡವಾಗಿದ್ದು, ಕೂಡಲೇ ಅವಕಾಶ ಕಲ್ಪಿಸುವ ವಾತಾ ವರಣವನ್ನು ಸೃಷ್ಟಿಸಲು ಸಂಘಟನೆ ಅವಶ್ಯಕವಾಗಿದೆ ಎಂದು ಗದುಗಿನ ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿಂಥಿಣಿ ಬ್ರಿಜ್ ಹತ್ತಿರದ ಗುಲ್ಬರ್ಗ ವಿಭಾಗೀಯ ಕಾಗಿನೆಲೆ ಕನಕಗುರು ಪೀಠದಲ್ಲಿ ಐದನೇ ವರ್ಷದ ಹಾಲುಮತ ಸಂಸ್ಕೃತಿ ವೈಭವದ ಮೊದಲನೇ ದಿನವಾದ ಬುಧವಾರ ಏರ್ಪಡಿಸಲಾಗಿದ್ದ ಹಾಲು ಮತ ಸಮಾವೇಶ ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಸನ್ಮಾನ ಸಮಾ ರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.12ನೇ ಶತಮಾನದ ಬಸವಣ್ಣನ ವರ ಕಾಲದಲ್ಲಿ ಕಂಡು ಬಂದ ಸಮಾ ನತೆ ಮತ್ತು ನ್ಯಾಯ ಈಗ ತುಟ್ಟಿಯಾ ಗಿದೆ ಎಂದು ವಿಷಾದಿ ಸಿದ ಅವರು, ಕುರುಬ ಸಮಾಜಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣವಾಗಿರುವುದ ರಿಂದ ಸಮಾಜದ ಮುಖಂಡರು ಕೂಡಲೇ ಮುಂಜಾಗ್ರತೆ ವಹಿಸಿ ಸಮಾಜದ ಏಳೆಗೆಗೆ ಮೊದಲ ಆದ್ಯತೆ ಶಿಕ್ಷಣಕ್ಕೆ ಒತ್ತು ನೀಡಲು ಕರೆ ನೀಡಿದರು. ಭಕ್ತಿ ಇದ್ದಾಗ ಮಾತ್ರ ನಿಜವಾದ ದೇವರನ್ನು ಕಾಣಲು ಸಾಧ್ಯವಿದೆ. ಕಾಟಾಚಾರಕ್ಕೆ ಹಣೆಗೆ ವಿಭೂತಿ ಪಟ್ಟಿ ಬರೆದು ದೇವರಿಗೆ ಪೂಜೆ ಮಾಡುವುದರಿಂದ ದೇವರನ್ನು ಕಾಣಲು ಸಾಧ್ಯವಿಲ್ಲ. ಮನುಷ್ಯರಲ್ಲಿ ಭಕ್ತಿಯ ಬಗ್ಗೆ ನಂಬಿಕೆ ಇದ್ದಾಗ ಮಾತ್ರ ದೇವರು ಇದ್ದಾನೆ ಎನ್ನಲು ಸಾಧ್ಯವಿದೆ ಎಂದರು. ಸರಳತೆ ಮತ್ತು ಮುಗ್ದತೆಗೆ ಹೆಸರು ಪಡೆದಿರುವ ಹಾಲುಮತ ಜನಾಂಗ ಮುಂದಿನ ದಿನಗಳಲ್ಲಿ ಕುರಿಗಳ ಸಾಗಾ ಣಿಕೆ ಮತ್ತು ಕಂಬಳಿ ಹೊದಿಕೆಯ ಮೂಲ ಸಂಪ್ರದಾಯವನ್ನು ಎಂದು ಬಿಡ ಬಾರದು ಎಂದು ಮನವಿ ಮಾಡಿದರು.ಸಂಚಿಕೆ ಬಿಡುಗಡೆ: ಹಾಲುಮತ ಸಂಸ್ಕೃತಿ ವೈಭವ ಕುರಿತು ‘ಭಂಡಾರ’ ಎಂಬ ಸ್ಮರಣ ಸಂಚಿಕೆಯನ್ನು ಗದುಗಿನ ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ಈಚೆಗೆ ನಡೆದ ತಾಲ್ಲೂಕು ಪಂಚಾ ಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ಯಲ್ಲಿ ಕುರುಬ ಸಮಾಜದಿಂದ ಆಯ್ಕೆ ಯಾದ ಜನಪ್ರತಿನಿಧಿಗಳಿಗೆ ಸ್ವಾಮೀಜಿ ಅವರಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು  ಕಾಗಿನೆಲೆ ಕನಕಗುರು ಪೀಠದ ನಿರಂಜ ನಾನಂದಪುರಿ ಮಹಾಸ್ವಾಮೀಜಿ ಅವರು ವಹಿಸಿದ್ದರು. ಗುಲ್ಬರ್ಗ ವಿಭಾಗೀಯ ಕನಕಗುರು ಪೀಠದ ಸಿದ್ದರಾಮಾನಂದ ಮಹಾ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಕೇಂದ್ರ ಪರಿಹಾರ ನಿಗಮದ ಅಧ್ಯಕ್ಷ ರಾಮಲಿಂಗಪ್ಪ ಬಳ್ಳಾರಿ, ಅರಣ್ಯ ಇಲಾಖೆಯ ಅಧಿಕಾರಿ ಮಾಣಿಕ ರಾವ್, ಜಿಪಂ ಸದಸ್ಯ ಶಿವಣ್ಣತಾತ ಮುಂಡರಗಿ, ವರದಾನಂದ ಸ್ವಾಮೀಜಿ ಗೊಲ್ಲಪಲ್ಲಿ, ಪತ್ರಕರ್ತ ಸಾಂಬ ಸದಾಶಿವರೆಡ್ಡಿ ಚಾಮರಾಜಪೇಟೆ, ಚಿಂಚೋಡಿ ಗ್ರಾಪಂ ಅಧ್ಯಕ್ಷ ಚಂದ್ರಶೇಖರ ನಾಡಗೌಡ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಚಂದಪ್ಪ ಬುದ್ದಿನ್ನಿ ಮುಖಂಡರಾದ ಗೋವಿಂದ ರಾಜ ಚಿಂಚೋಡಿ, ಲಿಂಗಪ್ಪ ನಿಲವಂಜಿ ಹಾಗೂ ವಿವಿಧ ತಾಲ್ಲೂಕು ಮತ್ತು ಗ್ರಾಮಗಳಿಂದ ಅಗಮಿಸಿದ್ದ ಸಮಾಜದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry