ಮದ್ದೂರು: ಕಿತ್ತು ಹೋದ ಡಾಂಬರಿನಿಂದ ಎದ್ದು ನಿಂತ ಕಲ್ಲುಗಳು. ಹದಗೆಟ್ಟ ರಸ್ತೆಯಲ್ಲಿ ಮಂಡಿಯುದ್ದ ಬಿದ್ದ ಗುಂಡಿಗಳು. ಕೊರಕಲು ರಸ್ತೆಯಲ್ಲಿ ನಿಲ್ಲದ ದ್ವಿಚಕ್ರ ವಾಹನ ಸವಾರರ ಸರ್ಕಸ್. ರಸ್ತೆ ಎಲ್ಲಿದೆ? ಎಂದು ಹುಡುಕುವ ಸ್ಥಿತಿ.

-ಇದು ಸಮೀಪದ ವಳೆಗೆರೆಹಳ್ಳಿ- ಬೆಸಗರಹಳ್ಳಿ ಸಂಪರ್ಕಿಸುವ ಪ್ರಮಖ ರಸ್ತೆಯ ಸ್ಥಿತಿಯ ಚಿತ್ರಣ. ಇಲ್ಲಿನ ಜನರು ಎಲೆಲೆ ರಸ್ತೆ ಏನೀ ದುರಾವಸ್ಥೆ! ಎಂದು ಪ್ರತಿನಿತ್ಯ ಗೊಣಗುವ ಪರಿಸ್ಥಿತಿ ಒದಗಿದೆ.

ಪಟ್ಟಣದಿಂದ ವಳೆಗೆರೆಹಳ್ಳಿ- ಸೊಳ್ಳೆಪುರ- ರಾಂಪುರ- ಹೊಂಬಾಳೆ ಗೌಡನದೊಡ್ಡಿ- ಬೆಸಗರಹಳ್ಳಿ ಸಂಪರ್ಕಿ ಸುವ ಈ ಮುಖ್ಯ ರಸ್ತೆಯನ್ನು ಈ ಒಂದು ದಶಕಗಳ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ 50 ಲಕ್ಷ ರೂಪಾಯಿ ವ್ಯಯಿಸಿ ಸುಸಜ್ಜಿತವಾಗಿ ನಿರ್ಮಿಸಿದ್ದರು.

ದಿನ ಕಳೆದಂತೆ ನಿರ್ವಹಣೆ ಕೊರತೆ ಯಿಂದ ರಸ್ತೆ ದುಃಸ್ಥಿತಿಗೆ ತಲುಪಿತು. ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ಅವಧಿಯಲ್ಲಿ ಈ ರಸ್ತೆಯ ಕೆಲವು ಭಾಗದ ದುರಸ್ತಿ ನಡೆಯಿತೇ ಹೊರತು ಪೂರ್ಣ ಪ್ರಮಾಣದಲ್ಲಿ ರಸ್ತೆ ಸುಧಾರಣೆ ಮಾಡುವ ಕೆಲಸ ಆಗಲೇ ಇಲ್ಲ.

ಹೀಗಾಗಿ ಈ ರಸ್ತೆ ಇದೀಗ ಸಂಪೂರ್ಣವಾಗಿ ಹಾಳಾಗಿದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವ ಸಾವಿರಾರು ಜನರು ರಸ್ತೆಯ ದುರಾವಸ್ಥೆಯಿಂದಾಗಿ ಬಸವಳಿದಿದ್ದಾರೆ. ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಮುಂದಾಗದ ಸ್ಥಳೀಯ ಆಡಳಿತ ವ್ಯವಸ್ಥೆ ವಿರುದ್ಧ ಪ್ರತಿದಿನವೂ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ರಸ್ತೆಯ ವ್ಯಾಪ್ತಿಯ ರಾಂಪುರ ಇದೀಗ ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ನಾಗವೈದ್ಯ ರಾಮಲಿಂಗೇ ಶ್ವರ, ಅದಿಷ್ಠ ಸುಬ್ರಹ್ಮಣ್ಯ ದೇಗುಲಗಳು ಈ ಗ್ರಾಮದಲ್ಲಿದ್ದು, ಪ್ರತಿನಿತ್ಯ ಇಲ್ಲಿಗೆ ರಾಜ್ಯದ ವಿವಿಧೆಡೆಗಳಿಂದ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ಆದರೆ ಈ ರಸ್ತೆಯ ದುರಾವಸ್ಥೆಯಿಂದ ಪರ್ಯಾಯ ಮಾರ್ಗವಿಲ್ಲದೇ ಗೊಣ ಗುವ ಪರಿಸ್ಥಿತಿ ಭಕ್ತರದ್ದಾಗಿದೆ. ಇದೇ ರೀತಿ ವಳೆಗೆರೆಹಳ್ಳಿಯಿಂದ ಗೆಜ್ಜಲಗೆರೆ ಸಂಪರ್ಕಿಸುವ ರಸ್ತೆಯ ಸ್ಥಿತಿ ಭಿನ್ನವಾಗಿಲ್ಲ. ಹೀಗಾಗಿ ವಳೆಗೆರೆಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದಿಂದ ಹೊರ ಹೊರಡಲು ಹಿಂಸೆಪಡಬೇಕಿದೆ.

`ಈ ರಸ್ತೆ ಸುಧಾರಣೆಗೆ ಆಗ್ರಹಿಸಿ ಈಗಾಗಲೇ ರಸ್ತೆಯಲ್ಲಿ ಭತ್ತ, ರಾಗಿ ನಾಟಿ ಮಾಡಿ ಪ್ರತಿಭಟನೆ ಮಾಡಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ ಸಚಿವ ರಿಗೂ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿ ಮೇರೆಗೆ ಒಂದು ಕೋಟಿ ರೂಪಾಯಿ ರಸ್ತೆ ಅಭಿವೃದ್ಧಿಗೆ ಬಿಡುಗಡೆ ಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈವರೆಗೂ ಕಾಮಗಾರಿ ಮಾತ್ರ ಆರಂಭ ಗೊಂಡಿಲ್ಲ~ ಎನ್ನುತ್ತಾರೆ ಗ್ರಾಮದ ಮುಖಂಡ ವಿ.ಸಿ. ಉಮಾಶಂಕರ್. ಸ್ಥಳೀಯ ಶಾಸಕರು ಇತ್ತ ಚಿತ್ತ ಹರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.