ಭಾನುವಾರ, ಜನವರಿ 19, 2020
27 °C

ಹಾವೇರಿ ಜಿಲ್ಲೆ: ನಕಲಿ ಕ್ಲಿನಿಕ್‌ಗಳಿಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಗಳ ಹಾಗೂ ಪೊಲೀಸರ ತಂಡ ಜಿಲ್ಲೆ ಯಲ್ಲಿ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ಗುರುವಾರ ದಾಳಿ ನಡೆಸಿ, 19 ನಕಲಿ ವೈದ್ಯರ ಕ್ಲಿನಿಕ್‌ಗಳಿಗೆ ಬೀಗ ಜಡಿದಿದೆ.ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿ ನಲ್ಲಿ ೧೦, ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ನಾಲ್ಕು, ಹಾನಗಲ್ಲ ತಾಲ್ಲೂಕಿನಲ್ಲಿ  ಐದು, ಹಿರೇಕೆರೂರ ತಾಲ್ಲೂಕಿನಲ್ಲಿ ೩, ಬ್ಯಾಡಗಿ ತಾಲ್ಲೂಕಿ ನಲ್ಲಿ ಒಂದು ಕ್ಲಿನಿಕ್‌ ಮೇಲೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರಸ್ವಾಮಿ ನೇತೃತ್ವದಲ್ಲಿ ಜಿಲ್ಲೆ ಯಾದ್ಯಂತ ಏಕಕಾಲಕ್ಕೆ ನಕಲಿ ವೈದ್ಯರ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ತಂಡವು, ಬೀಗ ಜಡಿಯುವುದರ ಜತೆಗೆ ಕ್ಲಿನಿಕ್‌ ನಡೆಸುವ ನಕಲಿ ವೈದ್ಯರ ಮೇಲೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ, ಇನ್ನು ಮುಂದೆ ಕ್ಲಿನಿಕ್‌ಗಳನ್ನು ತೆರೆಯದಂತೆ ಸೂಚನೆಯ ಚೀಟಿಯನ್ನು ಆಸ್ಪತ್ರೆಯ ಬಾಗಿಲಿಗೆ ಅಂಟಿಸಿದೆ.ದಾಳಿಯ ಸುಳಿವು ಸಿಕ್ಕೊಡನೆ ಕ್ಲಿನಿಕ್‌ಗಳಿಂದ ವೈದ್ಯರು ಪರಾರಿ ಯಾಗಿದ್ದರು. ಇದರಿಂದ ಅಧಿಕಾರಿಗಳ ಹಾಗೂ ಪೊಲೀಸರ ತಂಡವು ವೈದ್ಯ ರಿಲ್ಲದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಬೇಕಾಯಿತಲ್ಲದೇ, ಅಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿತಲ್ಲದೇ, ಕ್ಲಿನಿಕ್‌ಗಳಲ್ಲಿದ್ದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಬರದಂತೆ ಸೂಚಿಸಿತು.ನಕಲಿ ವೈದ್ಯರ ಹಾವಳಿ ನಿಯಂತ್ರಣಕ್ಕೆ ಹಾಗೂ ನಕಲಿ ವೈದ್ಯರಿಂದ ಹಲವಾರು ಅನಾಹುತಗಳು ನಡೆಯುತ್ತಿರುವುದರ ಬಗ್ಗೆ ಇಲಾಖೆ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳ ಲಾಗುತ್ತಿದೆ.ಜಿಲ್ಲೆಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಅನಧಿಕೃತ ಕ್ಲಿನಿಕ್‌ಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ -ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)