ಭಾನುವಾರ, ಮೇ 22, 2022
24 °C

ಹಿರಿಯ ನಟ ನವೀನ್ ನಿಶ್ಚಲ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಾಲಿವುಡ್‌ನ ಹಿರಿಯ ನಟ ನವೀನ್ ನಿಶ್ಚಲ್ (65) ಅವರು  ತೀವ್ರ ಹೃದಯಾಘಾತದಿಂದ ಶನಿವಾರ ನಿಧನರಾದರು. ನಟ, ನಿರ್ಮಾಪಕ ರಣಧೀರ್ ಕಪೂರ್ ಅವರ ಜತೆ ಪುಣೆಯಿಂದ ಬೆಳಿಗ್ಗೆ ಕಾರಿನಲ್ಲಿ ಬರುತ್ತಿದ್ದಾಗ ನವೀನ್ ಅವರಿಗೆ ಹೃದಯಾಘಾತವಾಯಿತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದರು.ಕುಟುಂಬದ ಸದಸ್ಯರು, ಸ್ನೆಹಿತರು ಮತ್ತು ಬಾಲಿವುಡ್‌ನ ಗಣ್ಯರ ಉಪಸ್ಥಿತಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು. ಬುಡ್ಡಾ ಮಿಲ್ ಗಯಾ, ದ ಬರ್ನಿಂಗ್ ಟ್ರೈನ್, ಮೇಜರ್ ಸಾಬ್, ಖೋಸ್ಲಾ ಕಿ ಗೋಸ್ಲಾ ಮುಂತಾದ ಚಿತ್ರದಲ್ಲಿ ನಟಿಸಿದ್ದ ಅವರು ದೇಖ್ ಬಾಯಿ ದೇಖ್ ಧಾರಾವಾಹಿ ಮೂಲಕ ಕಿರುತೆರೆಯಲ್ಲೂ ಜನಪ್ರಿಯರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.