ಭಾನುವಾರ, ಮೇ 16, 2021
22 °C

ಹಿರಿಯ ನಾಗರಿಕರ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯ ನಾಗರಿಕರು ಸಾರಿಗೆ ಸಂಸ್ಥೆಗಳಲ್ಲಿ ರಿಯಾಯ್ತಿ ಪಡೆಯಲು ವಯಸ್ಸು 65 ತುಂಬಿರಬೇಕು. ಇತರ ಕೆಲವೆಡೆ ವಯಸ್ಸು 60 ವರ್ಷ ತುಂಬಿದರೆ ಸಾಕಾಗುತ್ತದೆ.

ರಿಯಾಯ್ತಿ ವಯಸ್ಸು ಇಳಿಸಲು ಇವಕ್ಕೆ ಕಷ್ಟ. ಯಾಕೆಂದರೆ ವರ್ಷಕ್ಕೆ ಕೋಟಿಗಟ್ಟಲೆ ಲಾಭ ಗಳಿಸಿದರೂ ಇವು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ) ಬಡ ಸಂಸ್ಥೆಗಳು. ಅಲ್ಲವೇ?ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಲು ಸರ್ಕಾರದ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಹಿರಿಯ ನಾಗರಿಕರ ಗುರುತಿನ ಚೀಟಿ ಉಪಯೋಗವಾಗುವುದಿಲ್ಲ.ಸಂಸ್ಥೆಯವರು ನೀಡುವ ಗುರುತಿನ ಚೀಟಿಗಳೇ ಆಗಬೇಕು. ಈ ಚೀಟಿಗಳನ್ನು ಪಡೆಯಲು ಹಿರಿಯ ನಾಗರಿಕರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಸಂಸ್ಥೆಯ ಕೌಂಟರ್‌ಗೆ ತೆರಳಬೇಕು, ನಗರದ ಇತರ ದೊಡ್ಡ ಬಸ್ ನಿಲ್ದಾಣಗಳಲ್ಲಿ (ಉದಾ: ಶಿವಾಜಿನಗರ, ಯಶವಂತಪುರ) ಕೂಡ ಈ ಸೌಲಭ್ಯ ಇರುವುದಿಲ್ಲ.ಹಿರಿಯ ನಾಗರಿಕರು ಪಡುವ `ಬವಣೆ~ ಸಾರಿಗೆ ಸಂಸ್ಥೆಯವರಿಗೆ ಅರ್ಥವಾಗುವುದಿಲ್ಲ. ಹಾಗೆಯೇ ಹಿರಿಯ ನಾಗರಿಕರ ಇಲಾಖೆಗೂ.ಇದಕ್ಕೆ ಪರಿಹಾರ ಎಂದರೆ, ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ನೀಡುವ ಗುರುತಿನ ಚೀಟಿಗಳನ್ನು ಮಾನ್ಯ ಮಾಡಲಿ ಅಥವಾ ಎಲ್ಲಾ ಬಡಾವಣೆಗಳಲ್ಲಿನ ದೊಡ್ಡ ಬಸ್ ನಿಲ್ದಾಣಗಳಲ್ಲಿ(ಉದಾ: ಜಯನಗರ, ಶಿವಾಜಿನಗರ, ಗಂಗಾನಗರ) ಈ ಗುರುತಿನ ಚೀಟಿಗಳನ್ನು ನೀಡಲಿ. ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗಿ ಬರುವ `ಬವಣೆ~ ಯನ್ನು ತಪ್ಪಿಸಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.