ಶನಿವಾರ, ಮೇ 15, 2021
24 °C

ಹೀರೊ ಎಲೆಕ್ಟ್ರಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀರೊ ಕಂಪೆನಿ ಎಲ್ಲರಿಗೂ ತಿಳಿದದ್ದೇ. ಹೊಂಡಾ ಕಂಪೆನಿಯಿಂದ ಬೇರ್ಪಡುವ ಮುನ್ನವೇ ಹೀರೊ ಸ್ವತಂತ್ರವಾಗಿ ಎಲೆಕ್ಟ್ರಿಕ್ ಸ್ಕೂಟರ್‌ನ ತಯಾರಿಕೆ ಆರಂಭಿಸಿತ್ತು.ಹೀರೊ ಎಲೆಕ್ಟ್ರಿಕ್ ಮ್ಯಾಕ್ಸಿ, ಆಪ್ಟಿಮಾ, ವೇವ್, ಇ-ಸ್ಪ್ರಿಂಟ್, ಜಿಪ್ಪಿ, ಕ್ರೂಜ್ ಎಂಬ ವಿವಿಧ ಮಾದರಿಗಳನ್ನು ಕಂಪೆನಿ ಹೊರತಂದಿದೆ. ಯುರೋಪ್‌ನ ಅಲ್ಟ್ರಾ ಎಂಬ ಕಂಪೆನಿಯ ಸಹಯೋಗದಲ್ಲಿ ಅಭಿವೃದ್ಧಿಗೊಂಡಿರುವ ಹೀರೊ ಇ-ಸ್ಕೂಟರ್‌ಗಳು ಹೆಚ್ಚು ಭರವಸೆ ಮೂಡಿಸಿದೆ.ಇವುಗಳಲ್ಲಿ ಕಡಿಮೆ ಅಶ್ವಶಕ್ತಿಯ ಮೋಟಾರು ಹೊಂದಿರುವ ಹಾಗೂ ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುವ ಸ್ಕೂಟರ್‌ಗೆ ನೋಂದಣಿಯ ಅಗತ್ಯವಿಲ್ಲ. ಅದರಂತೆ ಹೆಲ್ಮೆಟ್ ಹಾಕುವ ಅವಶ್ಯಕತೆಯೂ ಇಲ್ಲ. ಆದರೆ ಪ್ರತಿ ಗಂಟೆಗೆ 25 ಕಿ.ಮೀಗಿಂತಲೂ ಅಧಿಕ ವೇಗದಲ್ಲಿ ಚಲಿಸುವ ಸ್ಕೂಟರ್‌ಗಳಿಗೆ ನೋಂದಣಿ, ಹೆಲ್ಮೆಟ್ (ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ) ಕಡ್ಡಾಯ.ಹೀರೊ ಎಲೆಕ್ಟ್ರಿಕ್ ಸ್ಕೂಟರ್ ನೋಡಲು ಸುಂದರವಾಗಿದೆ. ಸ್ಟಾರ್ಟರ್ ಇದಕ್ಕಿಲ್ಲ. ಕೀ ಹಾಕಿ, ಆ್ಯಕ್ಸಿಲ್‌ರೇಟರ್ ನೀಡಿದರೆ ಸಾಕು ಸ್ಕೂಟರ್ ಚಲಿಸಲು ಆರಂಭಿಸುತ್ತದೆ. ಥ್ರಾಟಲ್ ಹೆಚ್ಚು ಹಿಂಡಿದಷ್ಟೂ ಗರಿಷ್ಠ ವೇಗದಲ್ಲಿ ಚಲಿಸಬಲ್ಲದು.ಆದರೆ ವೇಗ ಎಂದರೆ ಪೆಟ್ರೋಲ್ ಇಂಧನದ ಬೈಕ್ ಓಡಿಸಿದವರಿಗೆ ಇದರ ವೇಗ ಆಮೆಯನ್ನು ನೆನಪಿಸಬಹುದು. ಒಮ್ಮೆ ಎಂಟು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಕನಿಷ್ಠ 30ರಿಂದ 45 ಕಿಲೋ ಮೀಟರ್ ಓಡಿಸಬಹುದು. ಆದರೆ ಅದು ಒಟ್ಟು ಕೊಂಡೊಯ್ಯಬೇಕಾದ ತೂಕ ಹಾಗೂ ಓಡಿಸುವ ಕ್ರಮದ ಮೇಲೆ ಅವಲಂಬಿಸಿರುತ್ತದೆ.ಆದರೆ ಈಗಾಗಲೇ ಹೀರೋ ಅಲ್ಟ್ರಾ ಹಾಗೂ ಇತರ ಮಾದರಿಯ ಸ್ಕೂಟರ್ ಖರೀದಿಸಿರುವವರ ಪ್ರಕಾರ ಖರೀದಿಸುವಾಗ ಮಾರಾಟ ಪ್ರತಿನಿಧಿ ನೀಡುವ ಭರವಸೆಗಳಲ್ಲಿ ಅರ್ಧದಷ್ಟೂ ನಿಜಾಂಶ ಇರದು.ಏಕೆಂದರೆ ಒಮ್ಮೆ ಚಾರ್ಜ್ ಮಾಡಿದರೆ 50-60 ಕಿ.ಮೀ ಚಲಿಸಬಹುದು ಎಂದು ಹೇಳಿದ್ದರೆ ಒಂದು ಸಾವಿರ ಕಿ.ಮೀ ದಾಟುವುದರಳೊಗಾಗಿ ಅದು 30-40 ಕಿ.ಮೀಗೆ ಬಂದು ನಿಂತಿರುತ್ತದೆ. ಜತೆಗೆ ಐದು ಸಾವಿರ ಕಿ.ಮೀ. ಕ್ರಮಿಸಿದ ನಂತರ ಬ್ಯಾಟರಿ ತನ್ನ ಸಾಮರ್ಥ್ಯ ಕಳೆದುಕೊಳ್ಳುವುದು ಅಥವಾ ಹಿಗ್ಗುವ ಸಾಧ್ಯತೆಗಳ ಕುರಿತು ಈಗಾಗಲೇ ಹಲವಾರು ಗ್ರಾಹಕರು ಸರ್ವೀಸ್ ಸ್ಟೇಷನ್‌ನತ್ತ ಅಲೆದಾಡಿದ್ದಾರೆ.

 

ಜತೆಗೆ 8-10 ಸಾವಿರ ರೂಪಾಯಿ ನೀಡಿ ಬ್ಯಾಟರಿಯನ್ನೂ ಬದಲಿಸಿದ್ದಾರೆ. 10-15 ಸಾವಿರ ಕಿ.ಮೀ ದೂರ ಕ್ರಮಿಸಿದ ನಂತರ ಬ್ಯಾಟರಿ ಬದಲಾಯಿಸಿದ ಉದಾಹರಣೆಗಳೂ ಇವೆ. ಆದರೆ ಪ್ರತಿ ಕಿ.ಮೀಗೆ 1 ರೂಪಾಯಿ 30 ಪೈಸೆ ಖರ್ಚು ಬರಲಿದೆ.ಹೀಗಾಗಿ ಆರಂಭದಲ್ಲಿ ಗ್ರಾಹಕರ ಜೇಬು ಕಾಪಾಡುವ ಈ ಸ್ಕೂಟರ್ ಕೆಲ ಸಾವಿರ ಕಿಲೋ ಮೀಟರ್ ಕ್ರಮಿಸಿದ ನಂತರ ಜೇಬಿಗೆ ದೊಡ್ಡ ಕತ್ತರಿಯನ್ನೇ ಹಾಕುತ್ತದೆ. ಕೆಲವು ಸಾವಿರ ಕಿಲೋ ಮೀಟರ್ ಕ್ರಮಿಸಿದ ನಂತರ ಮುಂದಿನ ಚಕ್ರ, ಶಾಕ್ಸ್ ಸಣ್ಣಗೆ ಸದ್ದು ಮಾಡಲು ಆರಂಭಿಸುತ್ತದೆ.ಬ್ಯಾಟರಿ ತನ್ನ ಕೆಲಸ ನಿಲ್ಲಿಸಿದರೆ ಸೇವಾ ಕೇಂದ್ರಗಳನ್ನು ಹುಡುಕಿಕೊಂಡು ಅಲೆಯುವ ಗೋಳು ತಪ್ಪಿದ್ದಲ್ಲ. ಆದರೆ ಎಲ್ಲಾ ನಗರಗಳಲ್ಲೂ ಇ-ಸ್ಕೂಟರ್ ಸರ್ವೀಸ್ ಇಲ್ಲದಿರುವುದೂ ಸಹ ಗ್ರಾಹಕರ ಪರದಾಟಕ್ಕೆ ಮತ್ತೊಂದು ಕಾರಣ. ಇದರ ಬೆಲೆ 26 ರಿಂದ 40 ಸಾವಿರ ರೂ.ಲಾಭ: ಪೆಟ್ರೋಲ್ ಬೆಲೆ ಏರಿಕೆಯ ಗೋಜಿಲ್ಲ, ಚಾಲನ ಪರವಾನಗಿ, ವಿಮೆಯ (25 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಚಲಿಸುವ ಸ್ಕೂಟರ್‌ಗಳಿಗೆ ಮಾತ್ರ)ಅಗತ್ಯವಿಲ್ಲ. ಪ್ರತಿ ಎರಡು ವರ್ಷಕ್ಕೊಮ್ಮೆ ಬ್ಯಾಟರಿ ಬದಲಿಸಬೇಕು ಅಷ್ಟೇ.ನಷ್ಟ: ಗರಿಷ್ಠ ನೂರು ಕಿಲೋ ಮೀಟರ್‌ಗಿಂತ ಹೆಚ್ಚು ದೂರ ಕ್ರಮಿಸಲು ಸಾಧ್ಯವಿಲ್ಲ. ಕಡಿಮೆ ವೇಗ ಇದರದ್ದಾದರಿಂದ ಪ್ರಯಾಣ ಸಮಯ ಹೆಚ್ಚಾಗಬಹುದು. ಬ್ಯಾಟರಿ ಬಲು ದುಬಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.