ಮಂಗಳವಾರ, ಜೂನ್ 22, 2021
28 °C

ಹುಣ್ಣಿಮೆ ಹಾಡು ನಾಟಕ ಪ್ರದರ್ಶನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕರ್ನಾಟಕಕ್ಕೆ ಹೂ ಹಾರ ಯೋಜನೆ ಅಡಿಯಲ್ಲಿ ನಾಲ್ಕು ನಾಟಕಗಳನ್ನು ಸಿದ್ಧಪಡಿಸುವ ಕೆಲಸ ನಡೆಯತ್ತಿದೆ ಎಂದು ಆದಿಮ ಲಿವಿಂಗ್ ಫೌಂಡೇಶನ್ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈಗಾಗಲೇ ಮೊದಲ ನಾಟಕ `ನಾಯಿ ತಿಪ~್ಪ ಪ್ರದರ್ಶನಗೊಂಡಿದೆ. ಈ ಮಾಲಿಕೆಯ 2ನೇ ನಾಟಕ `ಕಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಂಬೆ~ ಪ್ರದರ್ಶನ ಮಾ.8ರಂದು ನಡೆಯಲಿದೆ ಎಂದು ಹೇಳಿದರು.ಮಾ.8ರಂದು 70ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ನಾಟಕದ ಪ್ರದರ್ಶನ ನಡೆಯಲಿದೆ. ಅದೇ ಸಂದರ್ಭದಲ್ಲಿ ಬೆಂಗಳೂರಿನ ಹಳೇ ಗ್ರಂಥಗಳ ಮಳಿಗೆ-ಸೆಲೆಕ್ಟ್ ಬುಕ್‌ಹೌಸ್‌ನಿಂದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ ಎಂದರು.ಮಾಸ್ತಿಯವರ `ವೆಂಕಟಶಾಮಿಯ ಪ್ರಣಯ~ ಸಣ್ಣ ಕಥೆಯನ್ನು ಆಧರಿಸಿ ಮಾಲಿಕೆಯ ಮೂರನೇ ನಾಟಕವನ್ನು ಸಿದ್ಧಪಡಿಸಲಾಗುವುದು. ಏಕಲವ್ಯ ಉವಾಚ ಹಿಂದಿ ನಾಟಕವನ್ನು ಉತ್ತರ ಭಾರತದಲ್ಲಿ ಪ್ರದರ್ಶಿಸುವ ಉದ್ದೇಶವಿದೆ ಎಂದರು.ಸೈಕಲ್ ಯಾತ್ರೆ: 2013ರ ಮಾರ್ಚ್ ಹೊತ್ತಿಗೆ ಇದೇ ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಾ, ಬ್ರೆಜಿಲ್ ಮತ್ತು ಜಪಾನ್‌ನಲ್ಲೂ ನಾಟಕಗಳ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.ಅಮೆರಿಕಾದಿಂದ ಆಹ್ವಾನ ಬಂದಿದೆ. ಅದಕ್ಕೂ ಮುನ್ನ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆದಿಮ ತಂಡದ ಕಲಾವಿದರು ನಾಟಕ ಪ್ರದರ್ಶನ ನಡೆಸಲಿದ್ದಾರೆ. ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ ದಾನಿಗಳನ್ನು ಸೈಕಲ್ ಕೊಡಿಸುವಂತೆ ಕೋರಲಾಗಿತ್ತು, ಪರಿಣಾಮವಾಗಿ 19 ಸೈಕಲ್‌ಗಳನ್ನು ದೊರೆತಿವೆ. ಅವುಗಳ ಮೂಲಕವೇ ಕಲಾವಿದರು ಕರ್ನಾಟಕಕ್ಕೆ ಹೂ ಹಾರ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಆದಿಮ ಸಂಘಟನೆಯಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳನ್ನು ಆಧರಿಸಿಯೇ `ಕಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಂಬೆ~ ನಾಟಕವನ್ನು ರಚಿಸಿರುವೆ. ಅದನ್ನು ವೈಯಕ್ತಿಕ ನಾಟಕವಾಗಿಯೂ ಪ್ರೇಕ್ಷಕರು ನೋಡಬೇಕು ಎಂದು ಅವರು ಮನವಿ ಮಾಡಿದರು.ನಿರ್ದೇಶಕ ಉದಯ್, ಸಂಗೀತ ನಿರ್ದೇಶಕ ಹನುಮಂತು, ಸಂಘಟನೆಯ ಗೋವಿಂದಪ್ಪ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಾವಿದರು ನಾಟಕದ ಕೆಲವು ದೃಶ್ಯಗಳನ್ನು ಅಭಿನಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.