ಹು ಜಿಂಟಾವೊಗೆ ಅಣಕು: ಏಷ್ಯಾ ಅಮೆರಿಕನ್ನರ ಸಿಟ್ಟು

7

ಹು ಜಿಂಟಾವೊಗೆ ಅಣಕು: ಏಷ್ಯಾ ಅಮೆರಿಕನ್ನರ ಸಿಟ್ಟು

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕ ಪ್ರವಾಸದಲ್ಲಿರುವ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರನ್ನು ಅಣಕಿಸಿ, ಕಾರ್ಯಕ್ರಮ ಪ್ರಸಾರ ಮಾಡಿದ ಕನ್ಸರ್ವೇಟಿವ್ ರೇಡಿಯೊ ಕಾರ್ಯಕ್ರಮದ ನಿರೂಪಕ ರಷ್ ಲಿಂಬಾಘ್ ಅವರನ್ನು ಏಷ್ಯಾ ಅಮೆರಿಕನ್ನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಒಬಾಮ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಜಿಂಟಾವೊ ಅವರ ಚೀನಿ ಭಾಷಣವನ್ನು ಇಂಗ್ಲಿಷ್‌ಗೆ ರೂಪಾಂತರ ಮಾಡಿದ್ದರಿಂದ ಆದ ವಿಳಂಬದ ಕುರಿತು ಲಿಂಬಾಘ್ ಟೀಕಿಸಿ, “ಚೀಕಾಂ ಸರ್ವಾಧಿಕಾರಿ’ ಎಂದು ಜರೆದು ಅಣಕಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry