ಹೃದಯಾಘಾತ ತಡೆಗೆ ಕೃತಕ ಮೀನು

ಬುಧವಾರ, ಜೂಲೈ 17, 2019
23 °C

ಹೃದಯಾಘಾತ ತಡೆಗೆ ಕೃತಕ ಮೀನು

Published:
Updated:

ವಾಷಿಂಗ್ಟನ್ (ಪಿಟಿಐ): ಹೃದಯಾಘಾತವನ್ನು ತಡೆಯಬಲ್ಲ ಕೃತಕ ಲೋಳೆ ಮೀನನ್ನು(ಜೆಲ್ಲಿಫಿಶ್) ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದು ಭವಿಷ್ಯದಲ್ಲಿ ಜೈವಿಕ `ಪೇಸ್‌ಮೇಕರ್~ ಸಂಶೋಧನೆಗೆ ನೆರವಾಗಬಹುದು ಎಂದು ಹೇಳಿಕೊಂಡಿದ್ದಾರೆ.ಕ್ಯಾಲಿಫೋರ್ನಿಯಾ ತಾಂತ್ರಿಕ ಸಂಸ್ಥೆ ಅಭಿವೃದ್ಧಿಪಡಿಸಿರುವ `ಮೆಡುಸೊಯ್ಡ~ ಹೆಸರಿನ ಈ ಮೀನು ಮಾನವನ ಹೃದಯದ ಸ್ನಾಯುಗಳಂತೆಯೇ ಕೆಲಸ ಮಾಡುತ್ತದೆ.ಹೃದ್ರೋಗಿಗಳಿಗೆ ಅಳವಡಿಸುವ ಪೇಸ್‌ಮೇಕರ್ ಆರರಿಂದ ಹತ್ತು ವರ್ಷ ಮಾತ್ರ ಬಾಳಿಕೆ ಬರುತ್ತದೆ. ಒಂದು ವೇಳೆ ವಿಜ್ಞಾನಿಗಳು ಲೋಳೆಮೀನಿನ ನೆರವಿನಿಂದ ಜೈವಿಕ `ಪೇಸ್‌ಮೇಕರ್~ ಅಭಿವೃದ್ಧಿಪಡಿಸಲು ಯಶಸ್ವಿಯಾದಲ್ಲಿ ದೀರ್ಘಕಾಲ ಬಾಳಿಕೆ ಬರುವ ಜೈವಿಕ ಯಂತ್ರವೊಂದು ಹೃದ್ರೋಗಿಗಳಿಗೆ ದೊರೆತಂತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry