ಕುಷ್ಟಗಿ: ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರೆದಿದ್ದು ಎಲ್ಲೆಂದರಲ್ಲಿ ಮನ ಬಂದಂತೆ ಹಳ್ಳಕೊಳ್ಳಗಳನ್ನು ಬಗೆದಿರುವುದು ಕಂಡುಬರುತ್ತಿದೆ.

ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿನ ಪ್ರಮುಖ ಹಳ್ಳಗಳಲ್ಲಿ, ನದಿಪಾತ್ರಗಳಲ್ಲಿ ಅಧಿಕೃತ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ತಾಲ್ಲೂಕಿನಲ್ಲಿ ಮರಳು ದಂಧೆಯನ್ನು ಕಾನೂನಿನ ವ್ಯಾಪ್ತಿಗೆ ತಂದಿಲ್ಲ. ಆದರೆ ಸಂಗನಾಳ, ವಣಗೇರಿ, ಶಾಡಲಗೇರಿ ಮತ್ತು ಮುದುಟಗಿ ಹಳ್ಳಗಳಲ್ಲಿ ಬೇಕಾಬಿಟ್ಟಿಯಾಗಿ ಮರಳು ತೆಗೆಯುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸುವಂತೆ ಕಂದಾಯ ಇಲಾಖೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದುಬಂದಿದೆ.

ಗುತ್ತಿಗೆದಾರರು ಮತ್ತು ಕಟ್ಟಡ ನಿರ್ಮಾಣ ಸಂಸ್ಥೆಗಳು ಇಂಥ ದಂಧೆಯಲ್ಲಿ ತೊಡಗಿದ್ದು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಕೆಲ ಪಟ್ಟಭದ್ರರು ಸಾಕಷ್ಟು ಪ್ರಮಾಣದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಸಾಮಾನ್ಯ ಜನರಿಗೆ ಮರಳು ಸಿಗದಂತೆ ಮಾಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

ಸಂಗನಾಳ, ಶಾಡಲಗೇರಿ, ಮುದುಟಗಿ, ಬಿಜಕಲ್, ವಣಗೇರಿ, ಮದಲಗಟ್ಟಿ ಗ್ರಾಮಗಳ ಬಳಿ ಹಳ್ಳದಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ನೂರಾರು ವರ್ಷಗಳಿಂದ ಹಳ್ಳದ ಬುಡದಲ್ಲಿ ಠೇವಣಿಗೊಂಡಿರುವ ಮರಳನ್ನು ಬಗೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ನಿಡಶೇಸಿ ಕೆರೆ ಅಂಗಳದಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೇ ಭಾರಿ ಪ್ರಮಾಣದಲ್ಲಿ ಮರಳು ತೆಗೆದಿರುವುದು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂದಿತು. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಹ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.

ಬೃಹತ್ ಗಾತ್ರದ ಗುಂಡಿ (ಪಡಿ)ಗಳು ನಿರ್ಮಾಣಗೊಂಡಿದ್ದು ಯಂತ್ರಗಳಿಂದ ಮರಳು ತೆಗೆದಿರುವ ಕುರುಹುಗಳು ಕಾಣುತ್ತಿವೆ. ಇಂತಹ ಗುಂಡಿಗಳಲ್ಲಿ ನುಸುಳಿ ಉಸುಕು ತೆಗೆದಯುವುದಕ್ಕೆ ಹೋದ ಬ್ಯಾಲಿಹಾಳ ಗ್ರಾಮದ ಯುವಕ ಸಾವಿಗೀಡಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

ಮರಳು ಸಂಗ್ರಹಿಸುವುದನ್ನೇ ಹಳ್ಳಿಗಳಲ್ಲಿನ ಕೆಲ ವ್ಯಕ್ತಿಗಳು ಪ್ರಮುಖ ದಂಧೆಯನ್ನಾಗಿಸಿಕೊಂಡಿದ್ದು ಹೆಚ್ಚಿನ ಕೂಲಿ ಆಮಿಷ ಒಡ್ಡಿ ಯುವಕರನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದಾರೆ, ಆದರೆ ಅವೈಜ್ಞಾನಿಕ ಮತ್ತು ಆಳದ ಗುಂಡಿಗಳಲ್ಲಿ ಮರಳು ಸಂಗ್ರಹಕ್ಕೆ ಮುಂದಾಗುವವರಿಗೆ ಯಾವುದೇ ರಕ್ಷಣೆ ಇಲ್ಲ, ಕಳೆದ ವರ್ಷ ಹನಮಸಾಗರ ಹೋಬಳಿಯಲ್ಲಿ ಇಬ್ಬರು ಮರಳಿನಲ್ಲಿ ಹೂತು ಹೋಗಿದ್ದರು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.