ಹೆಣ್ಣಿನ ಅಂತರಂಗ

ಶುಕ್ರವಾರ, ಮೇ 24, 2019
26 °C

ಹೆಣ್ಣಿನ ಅಂತರಂಗ

Published:
Updated:

ಖ್ಯಾತ ಕಲಾವಿದರಾದ ಅರವಿಂದ ಚೌಧರಿ, ಕಮಲೇಶ್ ದಾಸ್, ರಾಜೇಶ್ವರ ನ್ಯಾಲಪಲ್ಲಿ ಮತ್ತು ಇಂದೂ ಕಾಳೆ ಅವರ ಅಪರೂಪದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.ಈ ನಾಲ್ವರೂ ಕಲಾವಿದರು ತಮ್ಮ ಕುಂಚದಲ್ಲಿ ತಮ್ಮ ಮನೋ ಸಹಜ ಅಭಿವ್ಯಕ್ತಿಗೆ ಅನುಗುಣವಾಗಿ ಹೆಣ್ಣನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಇಂದೂ ಕಾಳೆ ಅವರು ಚಿತ್ರಿಸಿರುವ ಜನಪದ ಶೈಲಿಯ ಹೆಣ್ಣು ಈ ಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.ಕಮಲೇಶ್ ದಾಸ್ ಅವರ ಮಾಧವನ ಆಗಮನಕ್ಕಾಗಿ ಕಾದಿರುವ ಮೀರಾ ತಂಬೂರಿ ಮೀಟುತ್ತಿರುವ ಚಿತ್ರಕಲಾಕೃತಿ ಅನನ್ಯವಾಗಿದೆ. ಗಾಢವಾದ ಕೃಷ್ಣನ ನೆನಪಿನಲ್ಲಿ  ಮೀರಾ ಅರೆ ಮುಚ್ಚಿದ ಕಣ್ಣುಗಳೊಂದಿಗೆ, ತನ್ನ ನೀಳ ಬೆರಳುಗಳಿಂದ ತಂತಿ ಮೀಟುವಾಗ, ಆಕೆಯ ಮುಖದ ಮೇಲೆ ಬಿಂಬಿತಗೊಂಡಿರುವ ಮನೋತುಮುಲಗಳು ಆಪ್ತವೆನಿಸುತ್ತದೆ.ರಾಜೇಶ್ವರ್ ನ್ಯಾಲಪಲ್ಲಿ ಅವರ ಚಿತ್ತಾರದಲ್ಲಿ ಆಧುನಿಕ ಹೆಣ್ಣಿನ ಮನೋಕಾಮನೆಗಳು ನಿಚ್ಚಳವಾಗಿ ಅಭಿವ್ಯಕ್ತಿಗೊಂಡಿದೆ. ಹೆಣ್ಣಿನ ಮನಸ್ಸಿನಲ್ಲಿ  ಅಡಗಿರುವ ಪ್ರೀತಿ, ಪ್ರೇಮ, ಮೋಹ ಇವೆಲ್ಲವೂ ಇವರ ಚಿತ್ರ ರಚನೆಗೆ ಪ್ರೇರಕವಾಗಿದೆ. ಸ್ಥಳ: ರಿನೈಸೆನ್ಸ್ ಗ್ಯಾಲರಿ, ಕನ್ನಿಂಗ್‌ಹ್ಯಾಮ್ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. ಪ್ರದರ್ಶನ ಶುಕ್ರವಾರ ಮುಕ್ತಾಯ. ಕಲಾ ದರ್ಶನ

ಖ್ಯಾತ ಕಲಾವಿದರಾದ ಕೈಲಾಸ್ ಅನ್ಯಾಲ್, ವಿಜಯಾ ರಾಜ್ ಬೋದಾನ್‌ಕರ್, ಸಂಗೀತ ಗದಾ ಮತ್ತು ಕಿಶೋರ್ ನಾದವ್‌ದೇಖರ್ ಅವರ ಅಪರೂಪದ ಕಲಾಕೃತಿಗಳು ಸೆ.15ರ ವರೆಗೆ ಪ್ರದರ್ಶನಗೊಳ್ಳಲಿವೆ. ಸ್ಥಳ: ಚಿತ್ರಕಲಾ ಪರಿಷತ್, ಬೆಳಿಗ್ಗೆ 10.30ರಿಂದ 7.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry