ಶನಿವಾರ, ಜೂನ್ 12, 2021
28 °C

ಹೆಣ್ಣೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಲವರು ಹೆಣ್ಣನ್ನು ಮತ್ಸರ ಹಾಗೂ ಸೌಂದರ್ಯದ ಸಂಕೇತದಂತೆ ಕಂಡರು. ಆದರೆ, ನಿಜ ಅರ್ಥದಲ್ಲಿ ಹೆಣ್ಣು ಅಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂದು ಕಲಾವಿಮರ್ಶಕಿ ಡಾ.ಚೂಡಾಮಣಿ ನಂದಗೋಪಾಲ್‌ ಅಭಿಪ್ರಾಯಪಟ್ಟರು.ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಐವತ್ತು ಕಲಾವಿದೆಯರ ಚಿತ್ರಕಲಾ ಪ್ರದರ್ಶನ ‘ಆಕಾಂಕ್ಷ’ ದಲ್ಲಿ ಭಾಗವಹಿಸಿ ಮಾತನಾಡಿದರು.‘ಹೆಣ್ತನವೆನ್ನುವುದು ಸಕಾರಾತ್ಮಕ ಚೈತನ್ಯ. ಸಕಾರಾತ್ಮಕವಾಗಿ ಅಭಿವ್ಯಕ್ತಗೊಳ್ಳುವುದೇ ಮಹಿಳಾ ದಿನಾಚರಣೆ. ಕಲೆಯ ಮೂಲಕ ವ್ಯಕ್ತಗೊಳ್ಳುವ ಹೆಣ್ಣಿನ ಶ್ರದ್ಧೆ ಸದಾ ಗೌರವಕ್ಕೆ ಪಾತ್ರವಾಗುತ್ತದೆ’ ಎಂದರು.‘ಅನಿವಾರ್ಯದ ಸಂದರ್ಭದಲ್ಲಿ ಹೆಣ್ಣು ಚೈತನ್ಯ ಮೂರ್ತಿಯಾಗುತ್ತಾಳೆ. ಇದನ್ನೆ ಪುರಾಣದಲ್ಲಿ ಅವತಾರ ಎನ್ನಲಾಗಿದೆ. ಸಮಾಜವನ್ನು ಉಳಿಸಿ, ಬೆಳೆಸುವ ಬದ್ಧತೆಯೇ ‘ಮಹಿಷಾಸುರ ಮರ್ಧಿನಿ’ ಪರಿಕಲ್ಪನೆ’ ಎಂದರು.ಪ್ರಸೂತಿ ತಜ್ಞೆ ಡಾ.ಜಯಾ ನರೇಂದ್ರ, ‘ಕಲೆಗೆ ಚಿಕಿತ್ಸಕ ಗುಣವಿದ್ದು, ಇದು ಹೆಣ್ಣಿನ ಆತ್ಮಬಲವನ್ನು ಹೆಚ್ಚಿಸುತ್ತದೆ’ ಎಂದರು. ಇದೇ ಸಂದರ್ಭದಲ್ಲಿ ಪ್ರದರ್ಶನದಲ್ಲಿ ಪಾಲ್ಗೊಂಡ 50 ಕಲಾವಿದೆಯರನ್ನು ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.