ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಮಾರ್ಗವಾಗಿ ಹಾದು ಹೋಗುವ ತಾಲ್ಲೂಕು ಚಿಂಚೋಳಿ- ನಾಗಪೂರ ಹೆದ್ದಾರಿ ನಿರ್ಮಾಣ ಹಿನ್ನೆಲೆಯಲ್ಲಿ ಸೋಮವಾರ ದುಬಲಗುಂಡಿ ಬಸವೇಶ್ವರ ವೃತ್ತ ಅಕ್ಕಪಕ್ಕದ ಅಂಗಡಿಗಳನ್ನು ತೆರವುಗೊಳಿಸಲಾಯಿತು.

ಗುಲ್ಬರ್ಗ- ಬೀದರ್ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ದುಬಲಗುಂಡಿ ಕ್ರಾಸ್ನಿಂದ- ಭಾಲ್ಕಿ ತಾಲ್ಲೂಕು ಅಂಬೆಸಾಂಗವಿ ವರೆಗಿನ ರಸ್ತೆ ಮಧ್ಯದಿಂದ ಎರಡು ಬದಿ 70ಅಡಿ ತೆರವುಗೊಳಿಸುವ ಯೋಜನೆ ಇದ್ದು, ಸದ್ಯ 50ಅಡಿ ಮಾತ್ರ ತೆರವುಗೊಳಿಲಾಗುತ್ತಿದೆ ಎಂದು ಹೇಳಲಾಗಿದೆ. ತೆರವುನಿಂದಾಗಿ ಗ್ರಾಮದ ಬಸವೇಶ್ವರ ವೃತ್ತ ಅಕ್ಕಪಕ್ಕದ ಹೊಟೆಲ್, ಕಿರಾಣಿ ಅಂಗಡಿ ಅಲ್ಲದೆ ಮನೆ ನೆಲಸಮಗೊಳಿಸಲಾಗಿದೆ. ರಸ್ತೆ ಹೊಂದಿಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ್ ಈಗಾಗಲೇ ತೆರವುಗೊಳಿಸಲಾಗಿದೆ. ತೆರವಿನಿಂದ ಸಣ್ಣಪುಟ್ಟ ವ್ಯಾಪಾರಿಗಳು ಆತಂಕ ಸ್ಥಿತಿಯಲ್ಲಿದ್ದಾರೆ.

ಮನವಿ: ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ತೆರವುಗೊಳಿಸಿದ್ದರಿಂದ ಹೋಟೆಲ್, ಕಿರಾಣಿ ಅಂಗಡಿ ಹಾಗೂ ಬಡವರ ಮನೆ ನೆಲಸಮಗೊಂಡಿವೆ. ಜೀವನ ನಿರ್ವಹಣೆಗೆ ಆಧಾರವಾದ ಅಂಗಡಿ ಕಳೆದುಕೊಂಡು ಬೀದಿ ಪಾಲಾದ ವ್ಯಾಪಾರಿಗಳಿಗೆ ಸರ್ಕಾರಿ ನಿವೇಶನ ಒದಗಿಸಬೇಕು. ಮತ್ತು ತಾತ್ಕಾಲಿಕ ಅಂಗಡಿ ನಿಮಾರ್ಣ ಸಂಬಂಧ ಬ್ಯಾಂಕ್ ಸಾಲ ನೀಡಬೇಕು. ತೆರವಿನಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಹೆರಿಗೆ ಕೋಣೆ ಹಾನಿಗಿಡಾಗುವ ಸಾಧ್ಯತೆ ಇರುವುದರಿಂದ ಹೊಸ ಹೆರಿಗೆ ಕೋಣೆ ನಿರ್ಮಾಣಕ್ಕೆ ಮಂಜೂರಾತಿ

ನೀಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ ನಾತೆ, ಉಪಾಧ್ಯಕ್ಷ ಮೇರಾಜ್ ಭಾಲ್ಕಿಬೇಸ್ ಮೊದಲಾದವರು ಈ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.