ಮಂಗಳವಾರ, ಜೂನ್ 15, 2021
27 °C
ಬಾಗಿಲು ತೆರೆಯದ ಮತಗಟ್ಟೆಗಳು

ಹೆಸರು ಸೇರ್ಪಡೆಗೆ ಪರದಾಡಿದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿ­ಯಲ್ಲಿ ಹೆಸರು ಸೇರ್ಪಡೆ­ಗೊಳಿಸುವ ಪ್ರಕ್ರಿಯೆಯು ನಗರದ ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ಭಾನುವಾರ ನಡೆಯಿತು. ಆದರೆ ಜಿಲ್ಲೆಯ ಕೆಲ ಮತಗಟ್ಟೆಗಳಲ್ಲಿ ಶಾಲೆಗಳ ಬಾಗಿಲುಗಳೇ ತೆರೆದಿರಲಿಲ್ಲ.



ಮತಗಟ್ಟೆ ಅಧಿಕಾರಿಗಳು ಕೊಠಡಿ ಹಾಗೂ ಆಸನ ವ್ಯವಸ್ಥೆ ಇರದೆ ಮರದ ಕೆಳಗಡೆ ಕೂತು ಹೆಸರು ಸೇರ್ಪಡೆ­ಗೊಳಿಸುವ ಕಾರ್ಯ ನಿರ್ವಹಿಸಿದರು.



ಇನ್ನೊಂದೆಡೆ ಮತದಾರರು ಅರ್ಜಿಗಳಲ್ಲಿ ಮಾಹಿತಿ ಭರ್ತಿ ಮಾಡಲು ತೊಂದರೆ ಅನುಭವಿಸ­ಬೇಕಾಯಿತು. ಈ ಅವ್ಯವಸ್ಥೆಯಿಂದ ಕೆಲವರು ಬೇಸರ ವ್ಯಕ್ತಪಡಿಸಿದರು.



ನಗರದ ಸೇಂಟ್‌ ಜೋಸೆಫ್‌ ಶಾಲೆ ಆವರಣದ ಹೊರಗಡೆ ಕೂತಿದ್ದ ಮತಗಟ್ಟೆ ಅಧಿಕಾರಿಗಳನ್ನು ಪ್ರಶ್ನಿಸಿ­ದಾಗ, ‘ಮರದ ಕೆಳಗಡೆ ತಂಪಾದ ವಾತಾವರಣ ಇರುವ ಕಾರಣ ಇಲ್ಲಿಯೇ ಕೂತಿ­ದ್ದೇವೆ. ಶಾಲೆಯಲ್ಲಿ ಕೊಠಡಿ ಸೌಲಭ್ಯವಿದ್ದರೂ ನಾವು ಅಲ್ಲಿಗೆ ಹೋಗಲಿಲ್ಲ’ ಎಂದರು.



ಅಧಿಕಾರಿ ಲೂಸಿಯಾನಾ ಮಾತ­ನಾಡಿ, ವಿಳಾಸ ಬದಲಾವಣೆ,  ಹೆಸರು ಇರದವರು ಮತಗಟ್ಟೆ ಕೇಂದ್ರಕ್ಕೆ ಬಂದು ಹೆಸರನ್ನು ನೋಂದಾಯಿಸಿದರು. ಮೂಲ ದಾಖಲೆ ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಲಾಯಿತು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ­ಗೊಳಿಸುವುದು ಸರಳ­ಗೊಳಿಸ­ಲಾಗಿದೆ.



ಮಾರ್ಚ್‌ 16ರವರೆಗೆ ಮತದಾರರು ನಮೂನೆ–6ರ ಅರ್ಜಿ­ಯನ್ನು ಪಡೆದು ನಿಗದಿತ ದಾಖಲೆ­ಗಳೊಂದಿಗೆ ತಾಲ್ಲೂಕು ಕಚೇರಿ ಅಥವಾ ಆಯಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಬಳಿಗೆ ಹೆಸರು ಸೇರ್ಪಡೆಗಾಗಿ ಅರ್ಜಿ ಸಲ್ಲಿಸಬಹುದು ಎಂದು ಮತಗಟ್ಟೆ ಅಧಿಕಾರಿಗಳಾದ ದೇವೇಂದ್ರ ಮತ್ತು ವರಲಕ್ಷ್ಮಿ ತಿಳಿಸಿದರು.



ನಗರದ ಸೇಂಟ್‌ ಜೋಸೆಫ್‌ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ 23, 29 ಮತ್ತು 31ನೇ ವಾರ್ಡ್‌ಗಳ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.