ಶನಿವಾರ, ಜನವರಿ 18, 2020
19 °C

ಹೇಮಾವತಿ ಯೋಜನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ : ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಸುವ ಯೋಜನೆ ಅನುಷ್ಠಾನ ಗೊಳಿಸಲು ಸರ್ಕಾರವನ್ನು ಒತ್ತಾ ಯಿಸಲು ಹೋರಾಟ ಹಮ್ಮಿಕೊಳ್ಳುವ ಅಗತ್ಯವಿದೆ ಎಂದು ರಾಜ್ಯ ಚುನಾವಣಾ ಆಯೋಗದ ನಿವೃತ್ತ ಆಯುಕ್ತ ಸಿ.ಚಿಕ್ಕಣ್ಣ ತಿಳಿಸಿದ್ದಾರೆ.ನೇತ್ರಾವತಿ ನದಿ ತಿರುವು ಯೋಜನೆ  ಶೀಘ್ರವಾಗಿ ಆಗುವಂತಹ ಕೆಲಸಗಳಲ್ಲ. ಈ ಯೋಜನೆಗಳನ್ನು ನಂಬಿದರೆ ನಿರಂತರ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನ ಜನ ಜೀವನಕ್ಕಾಗಿ ಗುಳೆ ಹೊಗುವ ಸ್ಧಿತಿ ನಿರ್ಮಾಣವಾಗುತ್ತದೆ ಎಂದು ಗೋಷ್ಠಿಯಲ್ಲಿ ಹೇಳಿದರು.ತಾಲ್ಲೂಕಿನ ಕೆರೆಗಳಿಗೆ ಕಾಲುವೆ ಮುಖಾಂತರ ನೈಸರ್ಗಿಕವಾಗಿ ನೀರು ಹರಿಸುವಂತಹ ಯೋಜನೆ ಅನುಷ್ಠಾನ ಗೊಳಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು.ಮಧುಗಿರಿ ಕ್ಷೇತ್ರದಲ್ಲಿ ರಾಜಕೀಯ ಮಾಡಬೇಕು ಎಂಬ ಉದ್ದೇಶವಿಲ್ಲ. ಚುನಾಯಿತ ಪ್ರತಿನಿಧಿಗಳು ಧೃಡ ಮನಸ್ಸಿನಿಂದ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ರಾಜಕೀಯ ಇಚ್ಛಾಶಕ್ತಿ  ಪ್ರದರ್ಶಿಸಬೇಕು ಎಂದು ಹೇಳಿದರು.ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಡಾ.ಜಿ.ಕೆ.ಜಯರಾಂ ಮಾತನಾಡಿ, ಸ್ಧಳೀಯರು ಶಾಸಕರಾಗಿರುವುದರಿಂದ ಸ್ಥಳೀಯರ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದರು.ಪ್ರೊ.ಬಾಣದರಂಗಯ್ಯ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಂ.ಮಧು, ಕಾರ್ಯದರ್ಶಿ ಲತಾ ನಾರಾಯಣ, ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಎಸ್.ವಿ.ಎಲ್.ಶ್ರೀಧರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)