ಬೆಂಗಳೂರು: ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ (ಜಿ- ಕೆಟಗರಿ) ಈಗಾಗಲೇ ಮಂಜೂರು ಮಾಡಿರುವ ನಿವೇಶನಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.

`ಹಿಂದೆ ಇದ್ದ ಕಾಯ್ದೆ, ನಿಯಮಗಳಿಗೆ ಅನುಗುಣವಾಗಿ ಈ ನಿವೇಶನಗಳನ್ನು ಮಂಜೂರು ಮಾಡಲಾಗಿದೆ.ಈಗ ಅದನ್ನು ಹಿಂದಕ್ಕೆ ಪಡೆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಆದರೆ ಇನ್ನು ಮುಂದೆ ಈ ಕೋಟಾದಡಿ ನಿವೇಶನ ಮಂಜೂರು ಮಾಡದಂತೆ ಬಿಡಿಎಗೆ ನಿರ್ದೇಶಿಸಲಾಗಿದೆ~ ಎಂದು ಸರ್ಕಾರ ತಿಳಿಸಿದೆ.

ಬಿಡಿಎ ನಿಯಮ ಉಲ್ಲಂಘಿಸಿ, ಕಾನೂನುಬಾಹಿರವಾಗಿ ಸರ್ಕಾರ ಹಲವು ಶಾಸಕರಿಗೆ ನಿವೇಶನ ಮಂಜೂರು ಮಾಡಿದೆ ಎಂದು ದೂರಿ ವಕೀಲ ಎನ್.ವಾಸುದೇವ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ ಈ ಮಾಹಿತಿ ನೀಡಿದೆ. ಸರ್ಕಾರದ ಪರವಾಗಿ ವಕೀಲ ಇ.ಎಸ್.ಇಂದಿರೇಶ್ ಈ ಲಿಖಿತ ಮಾಹಿತಿ ನೀಡಿದ್ದಾರೆ.

ಆಕ್ಷೇಪಣೆಯಲ್ಲಿನ ವಿವರಗಳು: `2010ರ ಡಿಸೆಂಬರ್ 15ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ವಿವೇಚನಾ ಕೋಟಾದಡಿ ನಿವೇಶನ ಮಂಜೂರು ಮಾಡುವಂತೆ ಬಿಡಿಎಗೆ ನಿರ್ದೇಶಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದಿತ್ತು.

ಆದರೆ ಬಿಎಡಿ ಕಾಯ್ದೆಯ 7 ಮತ್ತು 13ನೇ ಕಲಮನ್ನು ಹಾಗೂ 5ನೇ ನಿಯಮದಲ್ಲಿ ಉಲ್ಲೇಖಗೊಂಡಿರುವ ಅಂಶಗಳನ್ನೂ ನಿವೇಶನ ಹಂಚಿಕೆ ಸಂದರ್ಭದಲ್ಲಿ ಪರಿಗಣಿಸಬೇಕು ಎಂದೂ ಕೋರ್ಟ್ ಹೇಳಿತ್ತು. ಈ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡರೆ ಸರ್ಕಾರ ನಿವೇಶನ ಮಂಜೂರು ಮಾಡಿರುವಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ~ ಎಂದು ಸರ್ಕಾರ ತಿಳಿಸಿದೆ.

`ನಿಯಮ 5ರ ಅಡಿ ಸರ್ಕಾರದ ಅನುಮತಿ ಪಡೆದು ವಿವೇಚನಾ ಕೋಟಾದಡಿ ನಿವೇಶನ ಮಂಜೂರು ಮಾಡುವ ಅಧಿಕಾರ ಬಿಡಿಎಗೆ ಇದೆ. ಇದರ ಆಧಾರದ ಮೇಲೆಯೇ 1997ರ ಸೆ.6ರಂದು ಸುತ್ತೋಲೆ ಹೊರಡಿಸಿದ್ದ ಸರ್ಕಾರ ಈ ಕೋಟಾದಡಿ ಹಲವು ಮಂದಿಗೆ ನಿವೇಶನ ಹಂಚಿಕೆ ಮಾಡಿದೆ.

ಆದುದರಿಂದ ಹಂಚಿಕೆಯಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆ ಆಗಿಲ್ಲ. ಸರ್ಕಾರಕ್ಕೆ ಈ ರೀತಿ ಆದೇಶ ಹೊರಡಿಸುವ ಅಧಿಕಾರ ಇಲ್ಲ ಎಂಬ ಅರ್ಜಿದಾರರ ವಾದದಲ್ಲಿಯೂ ಹುರುಳು ಇಲ್ಲ. ಆದುದರಿಂದ ಅರ್ಜಿಯನ್ನು ವಜಾ ಮಾಡಬೇಕು~ ಎಂದು ಸರ್ಕಾರ ನ್ಯಾಯಾಲಯವನ್ನು ಕೋರಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.