ಮಂಗಳವಾರ, ಮೇ 11, 2021
20 °C

ಹೈಡ್ ಅಂಡ್ ಪೀಕ್ನಲ್ಲಿ ಬೇಸಿಗೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆ ರಜೆ ಬಂತೆಂದರೆ ಪೋಷಕರಿಗೆ ಅದರಲ್ಲೂ ವೃತ್ತಿನಿರತರಿಗೆ ಮಕ್ಕಳನ್ನು ಯಾವ ಶಿಬಿರಕ್ಕೆ ಸೇರಿಸಬೇಕು, ಅಲ್ಲಿ ಏನನ್ನು ಕಲಿಸುತ್ತಾರೋ, ನಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೋ ಇಲ್ಲವೋ ಎಂಬ ಗೊಂದಲ. ಪೋಷಕರ ಈ ಆತಂಕ ದೂರ ಮಾಡಲೆಂದೇ ನಗರದಲ್ಲಿ ಕೆಲವು ಸಂಸ್ಥೆಗಳು ಶಿಬಿರಗಳಲ್ಲಿ ಮನೆಯ ವಾತಾವರಣ ಸೃಷ್ಟಿಸಿ ಮಕ್ಕಳನ್ನು ತಮ್ಮತ್ತ ಸೆಳೆಯುತ್ತಿವೆ. ಇಂತಹದೊಂದು ಸಂಸ್ಥೆ `ಹೈಡ್ ಅಂಡ್ ಪೀಕ್~.  ಪುಟ್ಟ ಮಕ್ಕಳಿಂದ ಹಿಡಿದು (3 ವರ್ಷ) 10 ವರ್ಷದ ಮಕ್ಕಳಿಗೆ ಶಿಬಿರವನ್ನು ಆಯೋಜಿಸಿದೆ. ಶಿಬಿರವೆಂದರೆ ಬರಿ ಆಟವಾಡುವುದಲ್ಲ ಅದಕ್ಕಿಂತಲೂ ವಿಭಿನ್ನವಾಗಿ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕೆಂಬ ಉದ್ದೇಶದಿಂದ ಜಂಪ್‌ಬಂಚ್, ಕರಾಟೆ, ರಿದಂ ಅಂಡ್ ರೈಮ್ಸ ಮತ್ತು ಕಿಂಡರ್ ಡ್ಯಾನ್ಸ್ ಮೊದಲಾದ ಚಟುವಟಿಕೆಗಳ ಮೂಲಕ ಮಕ್ಕಳನ್ನು ರಂಜಿಸಲಿದೆ. ಇದರಿಂದ  ಶಾಲಾಪೂರ್ವದ ಮಕ್ಕಳಿಗೆ ವಿನೋದಮಯ ಕಲಿಕೆಗೂ ಸಹಕಾರಿಯಾಗುತ್ತದೆ.`ಬೇಸಿಗೆ ರಜೆಯಲ್ಲಿ ಪ್ರತಿ ವರ್ಷ ಮಕ್ಕಳು ಕಂಪ್ಯೂಟರ್ ಅಥವಾ ಟೀವಿ ಮುಂದೆ ಹೆಚ್ಚು ಸಮಯ ಕಳೆಯುತ್ತಾರೆ. ಈ ರೀತಿಯ ಹವ್ಯಾಸವನ್ನು ತಪ್ಪಿಸಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶ. ಮಕ್ಕಳ ಅಗತ್ಯಕ್ಕೆ ತಕ್ಕಂತೆ ರೂಪಿಸಲಾಗಿರುವ ಪರಿಸರದಲ್ಲಿ ಕಾಲ ಕಳೆಯುವ ಜೊತೆಗೆ ತಮ್ಮ ಬುದ್ದಿಮತ್ತೆಯನ್ನೂ ಚುರುಕುಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಹೈಡ್ ಅಂಡ್ ಪೀಕ್ ನಿರ್ದೇಶಕಿ ರೋಶಿನಿ ಥಡಿನಿ.

ವಿನೂತನ ಕಲಿಕೆಯ ಅನುಭವಗಳನ್ನು ಪರಿಚಯಿಸುವುದರೊಂದಿಗೆ ವಿನೋದಮಯ ಕಲಿಕೆ, ಜಗತ್ತನ್ನು ಅನಾವರಣಗೊಳಿಸಲು ಉತ್ತೇಜಿಸಿದಂತಾಗುತ್ತದೆ.ಎಲ್ಲಾ ವಯಸ್ಸಿನ ಮಕ್ಕಳನ್ನೂ ಒಟ್ಟು ಸೇರಿಸಿ ಕಲಿಸುವ ಕಲಿಕೆ ಫಲಕಾರಿಯಾಗದು ಎಂಬ ಸತ್ಯ ಕಂಡುಕೊಂಡಿರುವ ಹೈಡ್ ಅಂಡ್ ಪೀಕ್ ವಿವಿಧ ವಯೋಮಾನದ ಮಕ್ಕಳಿಗೆ ವಿವಿಧ ಹಂತದಲ್ಲಿ ಶಿಬಿರಗಳನ್ನು ಆಯೋಜಿಸಿದೆ.ಹೈಡ್ ಅಂಡ್ ಪೀಕ್ 4500 ಚದರ ಅಡಿ ವಿಸ್ತೀರ್ಣದಲ್ಲಿ ಮಕ್ಕಳ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಕೇಂದ್ರವನ್ನು ಹೊಂದಿದೆ. ಮಕ್ಕಳಿಗೆ ಸುರಕ್ಷಿತ ಕುಟುಂಬ ಸ್ನೇಹಿ ಪರಿಸರದಲ್ಲಿ ಕಲಿಕೆಯನ್ನು ಒದಗಿಸುತ್ತದೆ. ನಿಮ್ಮ ಮಕ್ಕಳ ಬೇಸಿಗೆ ಶಿಬಿರ ಹೊರೆಯಾಗದೆ; ಆರಾಮದಾಯಕವಾಗಿರಲಿ.ನೋಂದಣಿಗೆ ಮತ್ತು ವಿವರಗಳಿಗೆ: 080-40967236/37, ಮೊ: 9945600805.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.