ಚಾಮರಾಜನಗರ: ‘ಹೈನುಗಾರಿಕೆ ಲಾಭದಾಯಕ ಉದ್ಯಮ. ಗ್ರಾಮೀಣರು ಈ ಉದ್ಯಮದಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಾಲಸುಂದರ್ ಸಲಹೆ ನೀಡಿದರು. ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪಶುವೈದ್ಯ ಆಸ್ಪತ್ರೆ ಆವರಣದಲ್ಲಿ ಈಚೆಗೆ ಜಿಲ್ಲಾ ವಾರ್ತಾ ಇಲಾಖೆಯಿಂದ ನಡೆದ ಹೈನುಗಾರಿಕೆಯಲ್ಲಿ ನೂತನ ತಾಂತ್ರಿಕತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಹೈನುಗಾರಿಕೆ ಆದಾಯ ತರುವ ಸ್ವಯಂ ಉದ್ಯೋಗ. ವೈಜ್ಞಾನಿಕವಾಗಿ ತೊಡಗಿಸಿಕೊಂಡರೆ ಹೆಚ್ಚಿನ ಲಾಭಗಳಿಸಬಹುದು. ಹೈನುಗಾರಿಕೆಯಲ್ಲಿ ಯಶಸ್ವಿಯಾಗಲು ಪಶು ಆಹಾರ ಸಿದ್ಧಪಡಿಸುವುದು ಹಾಗೂ ನೀಡುವಿಕೆಯು ಮುಖ್ಯ ಪಾತ್ರವಹಿಸಲಿದೆ. ಈ ಆಹಾರ ನೀಡುವ ಬಗ್ಗೆ ತಿಳಿವಳಿಕೆ ಹೊಂದಿದರೆ ಉದ್ಯಮದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಅಜೋಲ ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಪ್ರೋಟಿನ್ಯುಕ್ತ ಪಶು ಆಹಾರವಾಗಿದೆ. ಇದನ್ನು ಬೆಳೆಸಲು ಹೈನುಗಾರಿಕೆ ಅವಲಂಬಿತರು ಆಸಕ್ತಿ ತೋರಬೇಕು. ಜತೆಗೆ, ಇಲಾಖೆಯಿಂದ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ.ಡಿ.ಎಸ್. ಚಂದ್ರಶೇಖರ್ ಮಾತನಾಡಿ, ರೈತರು ರೇಷ್ಮೆ ಹಾಗೂ ಹೈನುಗಾರಿಕೆಯನ್ನು ಒಟ್ಟಾಗಿ ಮಾಡಬಹುದು. ಹಿಪ್ಪುನೇರಳೆ ಸೊಪ್ಪು, ಕಾಂಡ ಹಸುಗಳಿಗೆ ಉತ್ತಮ ಆಹಾರ. ಹೈನುಗಾರಿಕೆಗೂ ಮೊದಲು ಪಶುವೈದ್ಯರಿಂದ ಅಗತ್ಯ ಸಲಹೆ ಪಡೆಯುವುದು ಒಳಿತು ಎಂದರು.
ಕೆಸ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿದ್ದಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್, ಪಶು ಪರೀಕ್ಷಕ ಮಹದೇವು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.