ಲಂಡನ್ (ಪಿಟಿಐ): ಎತ್ತರದ ಹಿಮ್ಮಡಿಯ (ಹೈ ಹೀಲ್ಡ್) ಪಾದರಕ್ಷೆಗಳನ್ನು ಧರಿಸುವುದು ‘ರೇಜರ್ ಬ್ಲೇಡ್ ಮೇಲಿನ ನಡಿಗೆಯಂತೆ’ ಎಂದು ವ್ಯಾಖ್ಯಾನಿಸಿರುವ ವಿಜ್ಞಾನಿಗಳು, ಇದರಿಂದ ಪಾದದ ನರಗಡ್ಡೆಯ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗುವ ಅಪಾಯವಿರುತ್ತದೆ ಎಂದು ಎಚ್ಚರಿಸಿದ್ದಾರೆ.

ಇಂಗ್ಲೆಂಡ್ನಲ್ಲಿ ಕಳೆದ ವರ್ಷಗಳಲ್ಲಿ ಕಾಲ್ಬೆರಳು ಸಮೀಪದಲ್ಲಿನ ನೋವಿನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದ್ದು, ಇದಕ್ಕೆ ಹೈ ಹೀಲ್ಸ್ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಳೆದ ವರ್ಷ ಪಾದದ ನೋವಿನ ಸಂಬಂಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 40 ರಿಂದ 69 ವರ್ಷದ ವಯಸ್ಸಿನವರ ಸಂಖ್ಯೆ ಅಧಿಕ.

2004–05ರಲ್ಲಿ 40 ರಿಂದ 69 ವರ್ಷದ 1,179 ಮಹಿಳೆಯರು ಪಾದದ ಸಮಸ್ಯೆಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರೆ, 2014–15ರ ಅವಧಿಯಲ್ಲಿ 2,532 ಮಹಿಳೆಯರು ದಾಖಲಾಗಿದ್ದಾರೆ. 10 ವರ್ಷದ ಅವಧಿಯಲ್ಲಿ ಈ ಪ್ರಮಾಣ ಶೇ 115ರಷ್ಟು ಹೆಚ್ಚಾಗಿದೆ.

ಎತ್ತರದ ಹಿಮ್ಮಡಿಯ ಪಾದರಕ್ಷೆಗಳಿಂದ ಕಾಲಿನ ಬೆರಳುಗಳ ನಡುವಿನ ನರದ ಮೇಲೆ ಪರಿಣಾಮ ಉಂಟಾಗುತ್ತದೆ. ನರದ ಸುತ್ತಲೂ ನಾರಿನಂತಹ ಜಾಲ ಬೆಳೆಯುತ್ತದೆ ಮತ್ತು ನರ ಸಂಕುಚಿತಗೊಳ್ಳುತ್ತದೆ. ಆಗ ಬೆರಳುಗಳ ಬಳಿ ಅತೀವ ನೋವು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹೈಹೀಲ್ಡ್ ಅಥವಾ ಕಾಲಿಗೆ ಹೊಂದಿಕೆಯಾಗದ ಚಪ್ಪಲಿ ಮತ್ತು ಶೂಗಳನ್ನು ಧರಿಸುವುದರಿಂದ ಬೆರಳಿನ ಮೂಳೆಗಳನ್ನು ನರಗಳಿಗೆ ವಿರುದ್ಧವಾಗಿ ನೂಕುತ್ತವೆ. 5 ಸೆಂ.ಮೀಗಿಂತ ಎತ್ತರದ ಹೈ ಹೀಲ್ಡ್ ಚಪ್ಪಲಿಗಳಿಂದ ಹೆಚ್ಚಾಗಿ ಈ ಸಮಸ್ಯೆ ಬರುತ್ತದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.