ಹೊಡೆಯುವುದು ಶೌರ್ಯವೆ?

ಬುಧವಾರ, ಮೇ 22, 2019
29 °C

ಹೊಡೆಯುವುದು ಶೌರ್ಯವೆ?

Published:
Updated:

ಚಿತ್ರನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಕ್ಷೇತ್ರದ ಗಣ್ಯರಾದ ಅಂಬರೀಷ್ ಅವರು `ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ-ಹೆಂಡತಿಗೆ ಹೊಡೆಯುವುದು, ಮಗ-ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ.ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ~ ಎಂದು ಗಂಡು-ಹೆಣ್ಣನ್ನು ಹೊಡೆಯುವುದು ಪೌರುಷದ ಸಂಕೇತವೆಂಬಂತೆ ಫರ್ಮಾನು ಹೊರಡಿಸಿದ್ದಾರೆ!ಹಾಗಿದ್ದರೆ ಹೆಂಡತಿ-ಗಂಡನಿಗೆ ಹೊಡೆಯುವುದು, ಮಗಳು-ಅಪ್ಪನಿಗೆ ಹೊಡೆಯುವುದನ್ನೂ ಅಂಬರೀಷ್ ಅವರು ಸರಿಯೆಂದು, ಶೌರ್ಯದ ಸಂಕೇತವೆಂದು ಒಪ್ಪಿಕೊಳ್ಳುತ್ತಾರೆಯೇ?ದರ್ಶನ್ ಅವರ ಅಮಾನವೀಯ ಕ್ರೌರ್ಯವನ್ನು ಒಪ್ಪಿ, ಪ್ರತಿಪಾದಿಸುತ್ತಿರುವ ಅವರ ನಡವಳಿಕೆ ಹಾಗೂ ಹೇಳಿಕೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾದುದು ಎಂಬ ಅರಿವು ಅವರಿಗಿದೆಯೇ? ಹೆಣ್ಣೆಂದರೆ ಹೊಡೆಸಿ-ಬಡಿಸಿಕೊಳ್ಳಲು ಇರುವವಳೆಂಬ ಅವರ ಅನಾಗರಿಕ ತಿಳಿವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದು ನಾವು ಭಾವಿಸುತ್ತೇವೆ.

 - ರೂಪ ಹಾಸನ (ಹಾಸನ), ಸ. ಉಷಾ (ಶಿವಮೊಗ್ಗ),  ಶಾರದಾ ಗೋಪಾಲ(ಧಾರವಾಡ),  ಡಿ. ನಾಗಲಕ್ಷ್ಮಿ (ಬಳ್ಳಾರಿ),  ಪಿ. ಹೇಮಲತ (ಮೈಸೂರು), ಜಿ. ಅನ್ನಪೂರ್ಣ (ಬೆಂಗಳೂರು)                                                        

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry