ಸೋಮವಾರ, ಜನವರಿ 20, 2020
27 °C

ಹೊಸಕೋಟೆ: ಟೆನಿಕಾಯ್ಟ್ ಟೂರ್ನಿ ಆರಂಭ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಟೆನಿಕಾಯ್ಟ್ ಟೂರ್ನಿ ಆರಂಭ

ಹೊಸಕೋಟೆ: ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕ್ರೀಡಾ ಚಟುವಟಿಕೆ ಗಳು ಅವಶ್ಯವಾಗಿದ್ದು ಶಿಕ್ಷಣದಷ್ಟೇ  ಪ್ರೋತ್ಸಾಹ  ಕ್ರೀಡೆಗೂ ಕೊಡಬೇಕಿದೆ ಎಂದು ಶಾಸಕ ಎನ್.ನಾಗರಾಜು ಹೇಳಿದರು.ಪದವಿಪೂರ್ವ ಶಿಕ್ಷಣ ಇಲಾಖೆ ಆಶ್ರ ಯದಲ್ಲಿ ಸಮೀಪದ ಅಲ್ ಅಮೀನ್ ವಸತಿ ಶಾಲೆ ಆವರಣದಲ್ಲಿ ಮಂಗಳ ವಾರ ಆರಂಭವಾದ ಪದವಿಪೂರ್ವ ಕಾಲೇಜುಗಳ ಎರಡು ದಿನದ ರಾಜ್ಯ ಮಟ್ಟದ ಟೆನಿಕಾಯ್ಟ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಯೇ ಇಲ್ಲದಿರುವುದು ಹಾಗೂ ಅಲ್ಲಿನ ಉಪನ್ಯಾಸಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡದಿರುವ ಬಗ್ಗೆ ಬಂದ ಅಹವಾಲಿಗೆ ಪ್ರತಿಕ್ರಿಯಿಸಿದ ಶಾಸ ಕರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳ ಹಾಗು ಸಚಿವರ ಜೊತೆ ಮಾತನಾಡುವೆ ಎಂದು ತಿಳಿಸಿದರು.ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಅಹಮದ್ ಪಾಷ, ಮುಖಂಡ ಮುನಿ ಶಾಮಣ್ಣ, ಪಿ.ಯು ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎನ್. ಸಾವಿತ್ರಮ್ಮ, ಹೊಸಕೋಟೆ ಸರ್ಕಾರಿ ಸ್ವತಂತ್ರ ಪಿ.ಯು ಕಾಲೇಜು ಪ್ರಾಂಶುಪಾಲ ಎಸ್.ಕೆ. ಶಕೀಲ್ ಅಹಮದ್ ಇದ್ದರು. ರಾಜ್ಯದ 31 ಜಿಲ್ಲೆಗಳಿಂದ 52 ತಂಡಗಳು ಟೂರ್ನಿ ಯಲ್ಲಿ ಭಾಗವಹಿಸಿವೆ.ಪ್ರಥಮ ಬಾರಿಗೆ ಬಾಲಕರ ತಂಡ ಸಹ ಟೆನಿಕಾಯ್ಟ್ ಪಂದ್ಯ ಆಡಲು ಬಂದಿರುವುದು ವಿಶೇಷವಾಗಿದೆ.

ಪ್ರತಿಕ್ರಿಯಿಸಿ (+)