ಬುಧವಾರ, ಮೇ 12, 2021
26 °C

ಹೊಸಪೇಟೆಯಲ್ಲಿ ಜಾದೂ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೈಕ್ ಓಡಿಸೋದು, ಬೆಂಕಿ ಸುತ್ತುವರೆದಿರುವ ರಿಂಗ್‌ನಲ್ಲಿ ಸ್ಪರ್ಶಿಸ ದಂತೆ ಒಳತೂರುವುದು, ವಶೀಕರಣ ಮಾಡಿಕೊಂಡು ಅದ್ಭುತಗಳನ್ನು ಸೃಷ್ಟಿಸುವುದು. ಇಂತಹ ಜಾದೂ ಲೋಕ ಕೆಲದಿನಗಳ ಕಾಲ ಹೊಸಪೇಟೆ ನಗರದಲ್ಲಿ ನಡೆಯಲಿದೆ.ಅಂತರರಾಷ್ಟ್ರೀಯ ಖ್ಯಾತಿ ಪಡೆದಿರುವ ಜಾದೂಗಾರ ಆನಂದ್ ಅವರ ಪುತ್ರ ಆಕಾಶ್ ಮತ್ತು ತಂಡ  ಶುಕ್ರವಾರದಿಂದ ಹೊಸಪೇಟೆ ನಗರದಲ್ಲಿ ಕೆಲ ದಿನ ಜಾದೂ ನಡೆಸಲು ಉದ್ದೇಶಿಸಿರುವ ಜಾದೂ ಪ್ರದರ್ಶನದ ಪ್ರಚಾರಾರ್ಥವಾಗಿ ನಡೆಸಿ ಬೈಕ್ ರ‌್ಯಾಲಿ ಮತ್ತು ಉದ್ಘಾಟನಾ ಪ್ರದರ್ಶನದಲ್ಲಿ ಇಂತಹ ವಿಸ್ಮಯಗಳನ್ನು ಪ್ರದರ್ಶಿಸುವ ಮೂಲಕ ನಗರದ ಜನ ಕುತೂಹಲದಿಂದ ನೋಡುವಂತೆ ಮಾಡಿ ಜನರನ್ನು ಆಕರ್ಷಿಸಿದರು.ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ನಗರದಲ್ಲಿ ಯಾರಿಗೂ ಸ್ವಲ್ಪವೂ ತೊಂದರೆಯಾಗದಂತೆ ರಸ್ತೆ ನಿಯಮಗಳನ್ನು ಸ್ವಲ್ಪವೂ ಮುರಿಯ ದಂತೆ ಬೈಕ್ ಸವಾರಿ ಮಾಡಿ ಜನರನ್ನು ಚಕಿತಗೊಳಿಸಿದರು.ಇವರ ತಂದೆ ಜಾದೂಗಾರ ಆನಂದ ಅವರು ಜಾದೂ ಪ್ರದರ್ಶನ, ದೇಶದಲ್ಲಿ ನಡೆಯುತ್ತಿರುವ ಜಾತಿ, ಭಾಷೆ ಮತ್ತು ಭ್ರಷ್ಟಾಚಾರ, ರಾಜ ಕೀಯ ಕಲಹಗಳು, ಅವುಗಳ ಪರಿಹಾರಕ್ಕೆ ನಾವು ಮಾಡ ಬೇಕಾಗಿರುವ ಕ್ರಮಗಳು ಕುರಿತು ಮಾಹಿತಿ ನೀಡಿ ಅರ್ಥಪೂರ್ಣ ಸಂದೇಶ ಗಳೊಂದಿಗೆ ತಮ್ಮ ಕೈಚಳಕ ಪ್ರದರ್ಶಿಸಿ ಉದ್ಘಾಟನಾ ಪ್ರದರ್ಶನದಲ್ಲಿ ನೆರೆದ ಜನಸ್ತೋಮ ಬೆರಗುಗೊಳಿಸಿದರು.

ನಮ್ಮ ದೇಶದ ಪುರಾತನ ಕಲೆಗಳಲ್ಲಿ ಒಂದಾದ ಈ ಕಲೆ ವಿನಾಶದ ಅಂಚಿನಲ್ಲಿದ್ದು ಮುಂದುವರಿಸಬೇಕು ಎಂದು  ಓದಿ ಉದ್ಯೋಗದ ಕಡೆ ಮುಖ ಮಾಡದೆ  ತಂದೆ ಮಾಡುತ್ತಿದ್ದ ಜಾದೂ ಕಲೆಯಲ್ಲಿಯೇ ತೊಡಗಿಕೊಂಡಿದ್ದು ಈ ಕಲೆಯಲ್ಲಿಯೇ ಹೊಸ ಹೊಸ ವಿಸ್ಮಯಗಳನ್ನು ಸೃಷ್ಟಿಸಲು ಮುಂದಾಗಿ ರುವುದಾಗಿ ಆಕಾಶ್ ತನ್ನ ಅನಿಸಿಕೆ ಹಂಚಿಕೊಂಡರು.

ಪ್ರತಿನಿತ್ಯ ಮಧ್ಯಾಹ್ನ 3 ಗಂಟೆಗೆ ಮತ್ತು 6 ಗಂಟೆಗೆ ಎರಡು ಪ್ರದರ್ಶನ ಗಳಿರುವ ಈ ಜಾದೂ ಲೋಕ ಹೊಸಪೇಟೆಯ ನಗರಸಭಾ ಕಲಾಮಂದಿರದಲ್ಲಿ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.